ETV Bharat / state

ಜಾತಿಗೊಬ್ಬ ಸಿಎಂ ಮಾಡಲು ಸಾಧ್ಯವಿಲ್ಲ, ಒಕ್ಕಲಿಗರ ವಿಚಾರದಲ್ಲಿ ಲಕ್ಷ್ಮಣ ರೇಖೆ ದಾಟಬೇಡಿ: ಸಚಿವ ಆರ್. ಅಶೋಕ್ - ಬೆಂಗಳೂರಿನಲ್ಲಿ ಕಾಂಗ್ರೆಸ್​ ಪಕ್ಷದ ವಿರುದ್ದ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ

ಡಿಕೆಶಿ ಪರ ಅವರೇ ಬ್ಯಾಟ್ ಸಿದ್ಧ ಮಾಡಿಕೊಳ್ತಿದ್ದಾರೆ- ಇವರಿಗೆ ಹೇಳೋರು, ಕೇಳೋರು ಯಾರೂ ಇಲ್ಲ- ಹೈಕಮಾಂಡ್ ಕೂಡ ಇದೇ ಪರಿಸ್ಥಿತಿಯಲ್ಲಿದೆ - ಸಚಿವ ಆರ್. ಅಶೋಕ್ ವಾಗ್ದಾಳಿ

ಸಚಿವ ಆರ್. ಅಶೋಕ್
ಸಚಿವ ಆರ್. ಅಶೋಕ್
author img

By

Published : Jul 25, 2022, 4:04 PM IST

ಬೆಂಗಳೂರು: ಜಾತಿಗೊಬ್ಬ ಮುಖ್ಯಮಂತ್ರಿಯನ್ನು ಮಾಡಲು ಸಾಧ್ಯವಿಲ್ಲ. ಒಕ್ಕಲಿಗರ ವಿಚಾರದಲ್ಲಿ ಲಕ್ಷ್ಮಣ ರೇಖೆ ದಾಟಬೇಡಿ ಎಂದು ಕಾಂಗ್ರೆಸಿಗರಿಗೆ ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದ ಸಂವಿಧಾನ ಅಡಿಯಲ್ಲಿ ಸಿಎಂ ಆಯ್ಕೆ ಆಗ್ತಾರೆ. ವೀರೇಂದ್ರ ಪಾಟೀಲ್ ವಿಚಾರ ಗಮನದಲ್ಲಿರಲಿ. ಅವರ ಹಿಂದೆ ಯಾರೂ ನಿಲ್ಲಲಿಲ್ಲ. ಜಮೀರ್ ಹೇಳಿಕೆ ಹಿಂದೆ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯ ತಮ್ಮದು ಕೊನೆ ಚುನಾವಣೆ ಅಂತ ಹೇಳಿದ್ದಾರೆ. ಲಾಸ್ಟ್ ಬಾಲ್ ಸಿಕ್ಸ್ ಹೊಡಿಲೇಬೇಕು. ಹಾಗಾಗಿ, ಈ ರೀತಿ ಮಾಡ್ತಿದ್ದಾರೆ. ಕಾಂಗ್ರೆಸ್ ಒಳಗಿನ ಗುದ್ದಾಟದಿಂದ ಇಡೀ ಕಾಂಗ್ರೆಸ್ ಪತನವಾಗ್ತಿದೆ. ಸಿದ್ದರಾಮಯ್ಯ ಪರ ಬ್ಯಾಟ್ ಬೀಸುತ್ತಿದ್ದಾರೆ ಎಂದರು.

ಸಚಿವ ಆರ್. ಅಶೋಕ್ ಅವರು ಮಾತನಾಡಿರುವುದು

ಡಿಕೆಶಿ ಹಿಂದೆ ಯಾರೂ ಇಲ್ಲ ಅನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಪರ ಅವರೇ ಬ್ಯಾಟ್ ಸಿದ್ಧ ಮಾಡಿಕೊಳ್ತಿದ್ದಾರೆ. ಇವರಿಗೆ ಹೇಳೋರು, ಕೇಳೋರು ಯಾರೂ ಇಲ್ಲ. ಹೈಕಮಾಂಡ್ ಕೂಡ ಇದೇ ಪರಿಸ್ಥಿತಿಯಲ್ಲಿ ಇದೆ. ಕಾಂಗ್ರೆಸ್ ಮನೆ ಜಗಳ ಬೀದಿ ರಂಪ ಆಗಿದೆ. ಮನೆಯೊಳಗೆ ತೀರ್ಮಾನ ಆಗಬೇಕಿರೋ ವಿಚಾರ ಬೀದಿಗೆ ಬಂದಿದೆ. ಹೈಕಮಾಂಡ್ ಇದೆಯೋ, ಇಲ್ಲವೋ ಅನ್ನೋದು ತಿಳಿತಾ ಇಲ್ಲ. ಕಾಂಗ್ರೆಸ್​ನ ಒಬ್ಬ ಎಂಎಲ್‌ಎ ಕೆಪಿಸಿಸಿ ಅಧ್ಯಕ್ಷರಿಗೆ ಸವಾಲ್ ಹಾಕ್ತಾರೆ. ಪ್ರಾಣ ಇರೋವರೆಗೂ ಮಾತಾಡ್ತೀನಿ ಅಂತ ಸವಾಲ್ ಹಾಕಿದಾರೆ. ಜಮೀರ್ ಹಿಂದೆ ದೊಡ್ಡವರಿದ್ದಾರೆ. ಹಾಗಾಗಿ ಮಾತಾಡ್ತಾರೆ. ಸೇರಿಗೆ ಸವ್ವಾ ಸೇರು ಅಂತ ಆಗಿದೆ ಎಂದು ಟಾಂಗ್ ನೀಡಿದರು.

NDRF ಪರಿಹಾರಕ್ಕಿಂತ ಡಬಲ್ ಕೊಟ್ಟಿದ್ದೇವೆ: ಪಂಜಾಬ್‌ನಲ್ಲಿ ಒಬ್ಬ ಸಿಧು, ಇಲ್ಲೊಬ್ಬ ಸಿದ್ದು. ಇವರ ಜಗಳದಿಂದ ಕಾಂಗ್ರೆಸ್ ಚೂರ್ ಚೂರಾಗಿದೆ. ಇಬ್ಬರ ಜಗಳ ಮೂರನೆಯವರಿಗೆ ಲಾಭ. ಈ ಜಗಳ, ಒಗ್ಗಟ್ಟಿಲ್ಲದಿರೋದು ಸ್ಪಷ್ಟವಾಗಿದೆ. ಕೋವಿಡ್ ಸಂಕಷ್ಟದಲ್ಲಿದ್ದಾರೆ, ನೆರೆ ಬಂದಿದೆ. ಯಾರಾದ್ರೂ ಒಬ್ಬ ಕಾಂಗ್ರೆಸ್ ಮುಖಂಡ ಜನರ ಬಳಿ ಹೋಗಿ ಭೇಟಿ ಮಾಡಿದ್ರಾ.?. ಬಂದು ಸಿಎಂ ಬಳಿ ಮನವಿ ಕೊಟ್ರಾ. ನಾವು ಜನರ ಪರ ಇದ್ದೀವಿ. ನೊಂದಿರೋ ಜನಕ್ಕೆ NDRF ಪರಿಹಾರಕ್ಕಿಂತ ಡಬಲ್ ಕೊಟ್ಟಿದ್ದೇವೆ ಎಂದು ಸಚಿವ ಅಶೋಕ ಸಮರ್ಥನೆ ನೀಡಿದರು.

ಜನರೇ ಮುಖ್ಯಮಂತ್ರಿ ಆಯ್ಕೆ ಮಾಡ್ತಾರೆ: ನಿಮ್ಮ ಒಳಗಿರೋ ವೈಮನಸ್ಸು ಸಿದ್ದು, ಡಿಕೆಶಿ, ಪರಮೇಶ್ವರ್, ಖರ್ಗೆ, ಎಂ. ಬಿ ಪಾಟೀಲ್ ಎಲ್ಲರೂ ಒಂದೊಂದು ಜಾತಿ ಇಟ್ಟುಕೊಂಡು ಹೋಗ್ತಿದ್ದಾರೆ. ಹಾಗಾದ್ರೆ ಜಾತಿಗೆ ಬೆಲೆ ಇಲ್ವಾ.?. ಒಕ್ಕಲಿಗ ಜಾತಿ ಬಗ್ಗೆ ಮಾತಾಡ್ತಾರೆ,‌ ನಾನೂ ಒಬ್ಬ ಒಕ್ಕಲಿಗ. ನಮ್ಮ‌ ಸಮಾಜಕ್ಕೆ ಬೆಲೆ ಇಲ್ವಾ.?. ಕೆಂಪೇಗೌಡರು,‌ ಕುವೆಂಪು ಅವರು ಎಂದೂ ಜಾತಿ ಮಾಡಲಿಲ್ಲ. ಕೆಂಪೇಗೌಡರು ಎಲ್ಲಾ ಜಾತಿಗೆ ಪೇಟೆ ಮಾಡಿದ್ರು,‌ ಕುವೆಂಪು ವಿಶ್ವಮಾನವ ಆದ್ರು. ಕಾಂಗ್ರೆಸ್ ಈ ರೀತಿ ಜಾತಿ ಅಡ್ಡ ತರೋದನ್ನ ನಿಲ್ಲಿಸಲಿ. ಲಿಂಗಾಯತ, ಗೌಡ, ಎಸ್ಸಿ, ಎಸ್ಟಿ‌ ಅಂತ ಜಾತಿ ತರೋದು ಬೇಡ. ಜನ ಯಾರನ್ನ ಇಷ್ಟಪಡ್ತಾರೆ, ಜನರೇ ಮುಖ್ಯಮಂತ್ರಿ ಆಯ್ಕೆ ಮಾಡ್ತಾರೆ ಎಂದು ಕಿವಿಮಾತು ಹೇಳಿದರು.

ಓದಿ: ಪಿಎಸ್ಐ ಪರೀಕ್ಷೆ ಅಕ್ರಮ: ಕಲಬುರಗಿ ನಗರ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿದ ಸಿಐಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.