ETV Bharat / state

ಕಾಂಗ್ರೆಸ್ ಧರಣಿ ಒಂದು ಕಪಟ ನಾಟಕ : ಸಚಿವ ಆರ್ ಅಶೋಕ್ ವ್ಯಂಗ್ಯ

author img

By

Published : Feb 18, 2022, 1:30 PM IST

ಇಡೀ ರಾಜ್ಯದ ಜನರು ಬಜೆಟ್​ ಸೇರಿ ಸರ್ಕಾರದ ಕೆಲಸ ಸಂಬಂಧ ನಿರೀಕ್ಷೆ ಮಾಡ್ತಿದ್ದಾರೆ. ನಮ್ಮ ಸಮಸ್ಯೆ ಬಗ್ಗೆ ಚರ್ಚೆ ಮಾಡಿ, ಏನಾದ್ರೂ ಪರಿಹಾರ ಕೊಡ್ತಾರಾ ಅಂತಾ ಕಾಯ್ತಿದ್ದಾರೆ. ಆದ್ರೆ, ಇವರು ಧರಣಿ ದಾರಿಯಲ್ಲಿದ್ದಾರೆಂದು ಅಸಮಾಧಾನ ಹೊರ ಹಾಕಿದರು..

minister r ashok
ಸಚಿವ ಆರ್ ಅಶೋಕ್

ಬೆಂಗಳೂರು : ಕಾಂಗ್ರೆಸ್ ಪಕ್ಷದ ಧರಣಿ ಒಂದು ಕಪಟ ನಾಟಕ ಎಂದು ಕಂದಾಯ ಸಚಿವ ಆರ್. ಅಶೋಕ್ ಲೇವಡಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್​ನವರದು ಹಿಡನ್ ಅಜೆಂಡಾ ಇದೆ.

ಹಿಜಾಬ್ ವಿಚಾರ ಎಲ್ಲಿ ಸದನದಲ್ಲಿ ಚರ್ಚೆ ಆಗಲಿದೆ ಅಂತಾ ಹೆದರಿದ್ದಾರೆ. ಹೀಗಾಗಿ, ಕಲಾಪ ನಡೆಸಲು ಬಿಡದೇ ಬಾವಿಗಿಳಿದು ಗಲಾಟೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಕೂಡ ಶಿಕ್ಷಣ ವಿಚಾರವಾಗಿ ಚರ್ಚೆ ಮಾಡಲು ತಯಾರಿದೆ. ಈಗಾಗಲೇ ವಿಚಾರ ಮಂಡನೆ ಕೂಡ ಮಾಡಿದ್ದಾರೆ. ಆದ್ರೆ, ಕಾಂಗ್ರೆಸ್ ಹಗರಣ ಎಲ್ಲಿ ಚರ್ಚೆಯಾಗುತ್ತೋ ಅನ್ನೋ ಭಯದಿಂದ ಉಳಿದೆಲ್ಲಾ ವಿಚಾರ ಬಿಟ್ಟು ಸಚಿವ ಕೆ ಎಸ್‌ ಈಶ್ವರಪ್ಪ ಅವರ ವಿಚಾರ ಹಿಡಿದಿದ್ದಾರೆಂದು ಟೀಕಿಸಿದರು.

ಕಾಂಗ್ರೆಸ್‌ ವಿರುದ್ಧ ಸಚಿವ ಸಚಿವ ಆರ್ ಅಶೋಕ್ ವ್ಯಂಗ್ಯವಾಡಿರುವುದು..

ಕೇಸರಿ ಹಿಡಿದ್ರೆ ಅಲ್ಪಸಂಖ್ಯಾತರ ಮತ ಹೋಗುತ್ತೆ. ಹಿಜಾಬ್ ಹಿಡಿದ್ರೆ ಹಿಂದೂಗಳ ಮತವೂ ಹೋಗುತ್ತೆ. ಹೀಗಾಗಿ, ಹೆದರಿ ಈ ರೀತಿ ಮಾಡ್ತಿದ್ದಾರೆ. ಇವರ ಇಚ್ಛೆ ಬಂದಂತೆ ನಡೆದುಕೊಳ್ಳಲು ವಿಧಾನಸೌಧ ಕಟ್ಟಿಲ್ಲ. ದಿನನಿತ್ಯ ನೂರಾರು ಕೋಟಿ ಪೋಲಾಗ್ತಿದೆ.

ಇಡೀ ರಾಜ್ಯದ ಜನರು ಬಜೆಟ್​ ಸೇರಿ ಸರ್ಕಾರದ ಕೆಲಸ ಸಂಬಂಧ ನಿರೀಕ್ಷೆ ಮಾಡ್ತಿದ್ದಾರೆ. ನಮ್ಮ ಸಮಸ್ಯೆ ಬಗ್ಗೆ ಚರ್ಚೆ ಮಾಡಿ, ಏನಾದ್ರೂ ಪರಿಹಾರ ಕೊಡ್ತಾರಾ ಅಂತಾ ಕಾಯ್ತಿದ್ದಾರೆ. ಆದ್ರೆ, ಇವರು ಧರಣಿ ದಾರಿಯಲ್ಲಿದ್ದಾರೆಂದು ಅಸಮಾಧಾನ ಹೊರ ಹಾಕಿದರು.

ಅವರಿಗೆ ನೈತಿಕತೆ ಇದ್ರೆ ಅಧಿವೇಶನದಲ್ಲಿ ಭಾಗಿಯಾಗಲಿ. ಇದು ಕುಸ್ತಿ ಮಾಡೋ ಜಾಗ ಅಲ್ಲ, ಸದನದಲ್ಲಿ ಚರ್ಚೆ ಮಾಡಲಿ. ಇನ್ನು ಏಳು ದಿನ ಇದೆ. ಜನರ ಧ್ವನಿಯಾಗಿ ವಿಪಕ್ಷ ಕೆಲಸ ಮಾಡಲಿ ಎಂದು ಹೇಳಿದರು.

ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು : ಪರಿಷತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆ!

ಮಾಜಿ ಸಚಿವ ಜನಾರ್ದನ ರೆಡ್ಡಿ ಒಪ್ಪಿದರೆ ಕಾಂಗ್ರೆಸ್​ಗೆ ಬರಲು ರೆಡಿ ಇದ್ದೇವೆ ಎನ್ನುವ ಶಾಸಕ ಸೋಮಶೇಖರ್ ರೆಡ್ಡಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದ ಅಧ್ಯಕ್ಷರು ಇದ್ದಾರೆ. ಹಿರಿಯರು ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ ಎಂದರು.

ಇನ್ನೂ ಜನಾರ್ದನ ರೆಡ್ಡಿ ನಮ್ಮ ಪಕ್ಷದಲ್ಲಿ ಸಚಿವರಾಗಿದ್ರು. ಅವರ ಮನೆ ದೇವರು ಆಂಜನೇಯ, ನಮ್ಮ ಮನೆ ದೇವರೂ ಆಂಜನೇಯ. ಅವರು ಏನೇ ಮಾಡಿದ್ರೂ ನಮ್ಮ ಅಭ್ಯಂತರ ಇಲ್ಲ, ಅವರು ಮತ್ತೆ ಪಕ್ಷಕ್ಕೆ ಬರುವ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು. ಕುಂಕುಮ ಇಟ್ಟುಕೊಂಡು ಬಂದವರಿಗೆ ಶಾಲೆಯಲ್ಲಿ ಬಿಡದ ವಿಚಾರವಾಗಿ ಪೊಲೀಸ್ ಇಲಾಖೆ ಜೊತೆ ಚರ್ಚೆ ಮಾಡ್ತೇನೆ ಎಂದು ತಿಳಿಸಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.