ETV Bharat / state

5 ನಿಮಿಷದ ಕಿರು ಚಿತ್ರಕ್ಕೆ ಬರೋಬ್ಬರಿ 4.50 ಕೋಟಿ ರೂಪಾಯಿ.. ಒಪ್ಪಂದ ವಜಾಕ್ಕೆ ಸಚಿವ ನಿರಾಣಿ ಸೂಚನೆ - ಚಿತ್ರ ನಿರ್ಮಾಣ ಸಂಸ್ಥೆ

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಮೇಲೆ 5 ನಿಮಿಷದ ಕಿರು ಚಿತ್ರ ನಿರ್ಮಿಸಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧಿಕಾರಿಗಳು ಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ ಸುಮಾರು ರೂ. 4.50 ಕೋಟಿ ಮೌಲ್ಯದ ಒಡಂಬಡಿಕೆಯನ್ನು ಮಾಡಿಕೊಂಡಿದ್ದರು ಎನ್ನಲಾಗ್ತಿದೆ.

Industries Minister Murugesh Nirani
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ
author img

By

Published : Oct 23, 2022, 4:06 PM IST

ಬೆಂಗಳೂರು: ಸಾರ್ವಜನಿಕ ಹಣವನ್ನು ಅಧಿಕಾರಿಗಳು ಯಾವ ರೀತಿ ಪೋಲು ಮಾಡುತ್ತಾರೆ ಎಂಬುದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ವಾಣಿಜ್ಯ ಹಾಗೂ ಕೈಗಾರಿಕಾ ಅಧಿಕಾರಿಗಳು ಕೇವಲ ಐದು ನಿಮಿಷ ಕಿರು ಚಿತ್ರಕ್ಕೆ ಬರೋಬ್ಬರಿ 4.50 ಕೋಟಿ ರೂ‌ಪಾಯಿ ದುಂದು ವೆಚ್ಚ ಮಾಡಲು ಮುಂದಾಗಿದ್ದರು ಎನ್ನಲಾಗ್ತಿದೆ.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧಿಕಾರಿಗಳು ಇಂತದ್ದೊಂದು ಮಹಾ ಎಡವಟ್ಟಿಗೆ ಮುಂದಾಗಿದ್ದರು. ನ. 2,3 ಮತ್ತು 4, ರಂದು ನಡೆಯುವ "Invest Karnataka -2022" ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ (GIM) ಮೇಲೆ 5 ನಿಮಿಷದ ಕಿರುಚಿತ್ರ ನಿರ್ಮಿಸಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧಿಕಾರಿಗಳು ಸಜ್ಜಾಗಿದ್ದರು ಎನ್ನಲಾಗ್ತಿದೆ.

ಸಮಾವೇಶಕ್ಕೆ ಸಂಬಂಧಪಟ್ಟಂತೆ ಒಂದು ಕಿರು ಚಿತ್ರವನ್ನು ನಿರ್ಮಿಸಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಕ್ರಮ ಕೈಗೊಂಡಿತ್ತು. ಈ ಕಿರುಚಿತ್ರ ನಿರ್ಮಾಣಕ್ಕಾಗಿ ಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ ಸುಮಾರು ರೂ. 4.50 ಕೋಟಿ ಮೌಲ್ಯದ ಒಡಂಬಡಿಕೆಯನ್ನು ಮಾಡಿಕೊಂಡಿತ್ತು. ಸುಮಾರು 5 ನಿಮಿಷಗಳ ಈ ಕಿರುಚಿತ್ರ ನಿರ್ಮಾಣಕ್ಕೆ ಸುಮಾರು ರೂ.4.50 ಕೋಟಿಯಷ್ಟು ಮೌಲ್ಯವನ್ನು ನಿಗದಿಪಡಿಸಿದೆ.‌ ಸೂಪರ್ ಹಿಟ್ ಸಿನಿಮಾ 'ಕಾಂತಾರ'ಕ್ಕೆ ಸುಮಾರು 10 ಕೋಟಿ ಖರ್ಚ ಮಾಡಲಾಗಿದೆ. ಆದರೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಧಿಕಾರಿಗಳು ಕೇವಲ ಐದು ನಿಮಿಷದ ಕಿರು ಚಿತ್ರಕ್ಕೆ 4.50 ಕೋಟಿ ರೂ. ದುಂದು ವೆಚ್ಚ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.

Invest Karnataka -2022
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ

ಈ ಎಡವಟ್ಟಿನ ಗಾಂಭೀರ್ಯತೆಯನ್ನು ಅರಿತ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಈ ದುಂದು ವೆಚ್ಚದ ಕಿರುಚಿತ್ರ ನಿರ್ಮಾಣಕ್ಕೆ ಇದೀಗ ಬ್ರೇಕ್ ಹಾಕಿದ್ದಾರೆ. ಐದು ನಿಮಿಷ ಕಿರು ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತ ತುಂಬಾ ಹೆಚ್ಚಾಗಿರುವುದು ಕಂಡು ಬರುತ್ತದೆ. ಒಂದು ಪಕ್ಷ, ಇಲಾಖೆಯು ಮೇಲ್ಕಂಡ ಮೌಲ್ಯಕ್ಕೆ ಒಡಂಬಡಿಕೆ ಮಾಡಿಕೊಂಡು ಕಾರ್ಯಾದೇಶ ನೀಡಿರುವುದು ನಿಜವೇ ಆದಲ್ಲಿ ಇಷ್ಟೊಂದು ಹೆಚ್ಚು ಮೌಲ್ಯಕ್ಕೆ ನಿಗದಿಪಡಿಸಿದ ಒಡಂಬಡಿಕೆಯು ಇಂದಿನ ಪರಿಸ್ಥಿತಿಗೆ ಅಗತ್ಯ ಹಾಗೂ ಸೂಕ್ತವಿರುವುದಿಲ್ಲವೆಂದು ಭಾವಿಸಿದ್ದು, ಸದರಿ ಒಡಂಬಡಿಕೆಯ ಕಾರ್ಯಾದೇಶವನ್ನು ರದ್ದು ಮಾಡುವಂತೆ ಸೂಚಿಸಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ ಇಲಾಖಾ ಸಚಿವರು ಹಾಗೂ ಅನುಭವಿಗಳ ಜೊತೆಗೆ ಸಮಾಲೋಚನೆ, ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಸೂಚಿಸಲಾಗಿದೆ. ಒಟ್ಟಿನಲ್ಲಿ ಸಕಾಲದಲ್ಲಿ ಸಚಿವರ ಗಮನಕ್ಕೆ ಬಂದು ಇಂಥ ದುಂದು ವೆಚ್ಚದ ಮೂಲಕ ಹಣ ಪೋಲು ಮಾಡಲು ಮುಂದಾಗಿದ್ದ ಅಧಿಕಾರಿಗಳ ತರಾತುರಿಗೆ ಬ್ರೇಕ್ ಬಿದ್ದಿದೆ.

ಇದನ್ನೂ ಓದಿ: ನ.2 ರಿಂದ 3 ದಿನ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ, ₹5 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.