ETV Bharat / state

ಅತಿಥಿ ಉಪನ್ಯಾಸಕರ ಖಾಯಮಾತಿಗೆ ಕಾನೂನು ತೊಡಕಿದೆ: ಸಚಿವ ಎಂ ಸಿ ಸುಧಾಕರ್

ಅತಿಥಿ ಉಪನ್ಯಾಸಕರ ಖಾಯಮಾತಿಗೆ ಕಾನೂನು ತೊಡಕಿದೆ. ನಾವು ಏನೇ ಮಾಡಿದರು ನ್ಯಾಯಾಲಯದಲ್ಲಿ ಸಮಸ್ಯೆ ಆಗಬಹುದು ಎಂದು ಸಚಿವ ಎಂ ಸಿ ಸುಧಾಕರ್ ಹೇಳಿದರು.

Etv Bharatminister-mc-sudhakar-reaction-on-permanent-of-guest-lecturers
ಅತಿಥಿ ಉಪನ್ಯಾಸಕರ ಖಾಯಮಾತಿ ಮಾಡಲು ಕಾನೂನು ತೊಡಕಿದೆ: ಸಚಿವ ಎಂ ಸಿ ಸುಧಾಕರ್
author img

By ETV Bharat Karnataka Team

Published : Jan 2, 2024, 5:14 PM IST

ಸಚಿವ ಎಂ ಸಿ ಸುಧಾಕರ್ ಪ್ರತಿಕ್ರಿಯೆ

ಬೆಂಗಳೂರು: ಅತಿಥಿ ಉಪನ್ಯಾಸಕರ ಖಾಯಮಾತಿ ಮಾಡಲು ಕಾನೂನು ತೊಡಕಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ತಿಳಿಸಿದರು. ವಿಕಾಸಸೌಧದಲ್ಲಿ ಮಾತನಾಡಿದ ಅವರು, "ಖಾಯಮಾತಿ ಮಾಡಲು ಕಾನೂನು ತೊಡಕು ಇದೆ. ಯಾವುದೇ ರಾಜ್ಯದಲ್ಲೂ ಖಾಯಂ ಮಾಡಿಲ್ಲ. ಅವರದ್ದು ಸುಮಾರು ಸಂಘಟನೆ ಇದೆ‌. ಒಬ್ಬೊಬ್ಬರದ್ದು ಒಂದೊಂದು ಬೇಡಿಕೆ ಇದೆ. ಕೆಲವರು ಖಾಯಮಾತಿ ಮಾಡಲು ಪಟ್ಟು ಹಿಡಿದಿದ್ದಾರೆ" ಎಂದರು.

ನಾವು ಏನೇ ಮಾಡಿದರು ನ್ಯಾಯಾಲಯದಲ್ಲಿ ಸಮಸ್ಯೆ ಆಗಬಹುದು. ಭರ್ತಿ ಮಾಡುವ ವೇಳೆ ಕೃಪಾಂಕದ ಆಧಾರದಲ್ಲಿ ನೇಮಕಾತಿ ಮಾಡಲಾಗುತ್ತದೆ. 9,000 ಪೈಕಿ 600 ಕೌನ್ಸಿಲಿಂಗ್ ಆಗಿದೆ. 6,000 ಜನ ಕೆಲಸಕ್ಕೆ ಹಾಜರಾಗಿದ್ದಾರೆ. 7,000 ಹುದ್ದೆ ಹೆಚ್ಚುವರಿ ನೇಮಕಾತಿ ಮಾಡಲು ಬೇಡಿಕೆ ಇದೆ. 1,242 ಖಾಲಿ ಹುದ್ದೆ ಭರ್ತಿ ಮಾಡಬೇಕಾಗಿದೆ. ಇದಕ್ಕೆ ಪ್ರಕ್ರಿಯೆ ನಡೆದಿದೆ. ಕ್ಲಸ್ಟರ್ ವಿವಿಗಳಿಗೆ ಸಹಾಯಕ ಪ್ರಾಧ್ಯಾಪಕರ 250 ಹುದ್ದೆ ಖಾಲಿ ಇವೆ. 450-500 ಹೆಚ್ಚುವರಿ ಹುದ್ದೆ ಭರ್ತಿಗೆ ಹಣಕಾಸು ಇಲಾಖೆ ಅನುಮತಿ ಪಡೆದು ನೇಮಕಾತಿಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಅತಿಥಿ ಉಪನ್ಯಾಸಕರಿಗೆ ₹5 ಸಾವಿರ ವೇತನ ಹೆಚ್ಚಳ: ಇತ್ತೀಚಿಗೆ, "ಮುಷ್ಕರನಿರತ ಅತಿಥಿ ಉಪನ್ಯಾಸಕರ ಪ್ರಮುಖ ಬೇಡಿಕೆಯಾದ ಸೇವಾ ಕಾಯಮಾತಿಗೆ ಸರ್ಕಾರ ಒಪ್ಪಿರುವುದಿಲ್ಲ. ಆದರೆ, ಗರಿಷ್ಠ 5,000 ರೂ. ವೇತನ ಹೆಚ್ಚಿಸಲು ಸಮ್ಮತಿಸಿದೆ" ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದ್ದರು. ವಿಕಾಸಸೌಧದಲ್ಲಿ ಅತಿಥಿ ಉಪನ್ಯಾಸಕರ ನಿಯೋಗದ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ್ದರು, "ಅತಿಥಿ ಉಪನ್ಯಾಸಕರಿಗೆ ಗರಿಷ್ಠ ಐದು ಸಾವಿರ ರೂ. ವೇತನ ಹೆಚ್ಚಳ ಮಾಡಲು ಸಿಎಂ ಸಮ್ಮತಿ ಸೂಚಿಸಿದ್ದಾರೆ. ಅವರ ಸೇವಾವಧಿ ಆಧಾರದ ಮೇಲೆ ವೇತನ ಪರಿಷ್ಕರಣೆಯಾಗಲಿದೆ. ಅದರಂತೆ ಗರಿಷ್ಠ 32,000 ರೂ. ವೇತನ ಪಡೆಯುವ ಅತಿಥಿ ಉಪನ್ಯಾಸಕರಿಗೆ 5,000 ರೂ.ನಷ್ಟು ವೇತನ ಹೆಚ್ಚಾಗಲಿದೆ. ಇದರಿಂದ ಬೊಕ್ಕಸಕ್ಕೆ ವಾರ್ಷಿಕ 55 ಕೋಟಿ ರೂ. ಹೊರೆ ಬೀಳಲಿದೆ" ಎಂದಿದ್ದರು.

"ಅತಿಥಿ ಉಪನ್ಯಾಸಕರಿಗೆ ಆರೋಗ್ಯ ವಿಮೆ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ವಾರ್ಷಿಕವಾಗಿ ಐದು ಲಕ್ಷ ರೂ. ಆರೋಗ್ಯ ವಿಮೆ ನೀಡಲು ಒಪ್ಪಿಗೆ ಸೂಚಿಸಿದೆ. ವಿಮೆ ಸೌಲಭ್ಯದಿಂದ 5 ಕೋಟಿ ರೂ ಹೊರೆ ಬೀಳಲಿದೆ. 10 ವರ್ಷ ಸೇವೆ ಪೂರೈಸಿದ 60 ವರ್ಷ ಮೀರಿದ ಅತಿಥಿ ಉಪನ್ಯಾಸಕರಿಗೆ ಐದು ಲಕ್ಷ ರೂ. ಇಡಿಗಂಟು ನೀಡಲು ಸರ್ಕಾರ ನಿರ್ಧರಿಸಿದೆ. ಇಡಿಗಂಟಿನಿಂದ ಸರ್ಕಾರಕ್ಕೆ 72 ಕೋಟಿ ರೂ. ಹೊರೆ ಬೀಳಲಿದೆ. ಜನವರಿ 1ರಿಂದ ಪರಿಷ್ಕೃತ ವೇತನ ಅನ್ವಯವಾಗಲಿದೆ" ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಉದ್ಯೋಗ: ಚೆಸ್ಕಾಂನಲ್ಲಿ 200 ಅಪ್ರೆಂಟಿಸ್​​ ಹುದ್ದೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.