ETV Bharat / state

ಆಸ್ಪತ್ರೆಯಿಂದಲೇ ಆಡಳಿತ, ಕಡತಗಳ ಪರಿಶೀಲನೆ: ಸಚಿವ ಈಶ್ವರಪ್ಪ ಕರ್ತವ್ಯ ಪ್ರಜ್ಞೆ - Minister K.S. Eshwarappa had corona

ಬೆಂಗಳೂರಿನ ಮಣಿಪಾಲ್​​ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ, ಸಚಿವ ಕೆ.ಎಸ್. ಈಶ್ವರಪ್ಪ ಆಸ್ಪತ್ರೆಯಲ್ಲಿಯೇ ಇಲಾಖೆಗೆ ಸಂಬಂಧಿಸಿದ ಮಹತ್ವದ ಕಡತಗಳನ್ನು ವಿಲೇವಾರಿ ಮಾಡುತ್ತಿದ್ದಾರೆ.

ಕರ್ತವ್ಯ ಪ್ರಜ್ಞೆ ಮೆರೆಯುತ್ತಿರುವ ಸಚಿವ ಈಶ್ವರಪ್ಪ

author img

By

Published : Sep 2, 2020, 4:40 PM IST

ಬೆಂಗಳೂರು: ಕೊರೊನಾ ಸೋಂಕಿಗೆ ತುತ್ತಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಆಸ್ಪತ್ರೆಯಲ್ಲಿಯೇ ಇಲಾಖೆಗೆ ಸಂಬಂಧಿಸಿದ ಮಹತ್ವದ ಕಡತಗಳನ್ನು ವಿಲೇವಾರಿ ಮಾಡುತ್ತಿದ್ದಾರೆ.

ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಸಚಿವ ಈಶ್ವರಪ್ಪ ದಾಖಲಾಗಿದ್ದು, ಆಸ್ಪತ್ರೆಯಿಂದಲೇ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮಳೆಹಾನಿ ಅನಾಹುತಗಳ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಾಚರಣೆ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಆಗಬೇಕಾದ ಕಾಮಗಾರಿಗಳ ಕುರಿತ ಕಡತಗಳನ್ನು ಆಸ್ಪತ್ರೆಗೆ ತರಿಸಿಕೊಂಡು‌ ಸಚಿವರು ಪರಿಶೀಲನೆ ನಡೆಸಿದರು. ಮಹತ್ವದ ಹಾಗು ತುರ್ತು ಆಗಬೇಕಿರುವ ಕಾಮಗಾರಿಗಳ ಕಡತಗಳಿಗೆ ಸಹಿ ಹಾಕಿದರು.

ಕರ್ತವ್ಯ ಪ್ರಜ್ಞೆ ಮೆರೆಯುತ್ತಿರುವ ಸಚಿವ ಈಶ್ವರಪ್ಪ

ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗು ಆರೋಗ್ಯ ಸಚಿವ ಬಿ. ಶ್ರೀರಾಮಲು ಕೊರೊನಾ ಸೋಂಕಿಗೆ ಸಿಲುಕಿದ್ದಾಗ ಆಸ್ಪತ್ರೆಯಿಂದಲೇ ಕಡತಗಳ ವಿಲೇವಾರಿ ಮಾಡಿ ಗಮನ ಸೆಳೆದಿದ್ದರು. ಇದೀಗ ಈಶ್ವರಪ್ಪ ಅವರ ಸರದಿಯಾಗಿದ್ದು, ಆಸ್ಪತ್ರೆಯಿಂದಲೇ ಇಲಾಖೆಯ ಆಡಳಿತ ನಡೆಸುತ್ತಿದ್ದಾರೆ. ಒಂದು ರೀತಿಯಲ್ಲಿ ವರ್ಕ್ ಫ್ರಂ ಹಾಸ್ಪಿಟಲ್ ನಂತಾಗಿದೆ ಈಶ್ವರಪ್ಪ ಅವರ ಕೆಲಸ ಕಾರ್ಯ

ಇಲಾಖೆಯ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗದಿರಲಿ ಎನ್ನುವ ಕಾರಣಕ್ಕೆ ಅಗತ್ಯ ಕಡತಗಳ ವಿಲೇವಾರಿಯನ್ನು ಕೊರೊನಾದಿಂದ ಗುಣಮುಖ ಆಗುವವರೆಗೂ ಆಸ್ಪತ್ರೆಯಿಂದಲೇ ಮಾಡಲು ನಿರ್ಧರಿಸಿದ್ದು, ಮುಖ್ಯ ಹಾಗು ತುರ್ತು ಕಡತಗಳನ್ನು ಆಸ್ಪತ್ರೆಗೆ ಕಳಿಸಿಕೊಡುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಚಿವ ಈಶ್ವರಪ್ಪ ಸೂಚನೆ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಕಡತಗಳ ಪರಿಶೀಲನೆ, ಸಹಿ ಕಾರ್ಯ ನಡೆದ ನಂತರ ಎಲ್ಲಾ ಕಡತಗಳನ್ನೂ ಸೋಂಕು ಮುಕ್ತಗೊಳಿಸಲಾಗುತ್ತದೆ. ನಂತರವೇ ಆಸ್ಪತ್ರೆಯಿಂದ ಹೊರಗಡೆ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತದೆ ಎಂದು ಮಣಿಪಾಲ್ ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.