ETV Bharat / state

18-44 ವರ್ಷ ಮೇಲ್ಟಟ್ಟವರು ಲಸಿಕೆಗಾಗಿ ಈಗಲೇ ಆಸ್ಪತ್ರೆ ಬಳಿ ಹೋಗಬೇಡಿ: ಸಚಿವ ಸುಧಾಕರ್ ಮನವಿ

18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೇ. 1ರಿಂದಲೇ ಕೋವಿಡ್ ಲಸಿಕೆ ನೀಡಲಾಗುವುದಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

Minister K Sudhakar s
ಸಚಿವ ಡಾ.ಕೆ.ಸುಧಾಕರ್
author img

By

Published : Apr 30, 2021, 10:43 AM IST

Updated : Apr 30, 2021, 11:40 AM IST

ಬೆಂಗಳೂರು: ಮೇ 1ರಿಂದ ಆರಂಭವಾಗಬೇಕಿದ್ದ ಲಸಿಕೆ ಕಾರ್ಯಕ್ರಮಕ್ಕೆ ಕೋವಿಶೀಲ್ಡ್, ಕೋವ್ಯಾಕ್ಸಿನ್ ತಯಾರಿಸುವ ಕಂಪನಿಗಳಿಂದ ರಾಜ್ಯ ಸರ್ಕಾರಕ್ಕೆ ಅಧಿಕೃತ ಮಾಹಿತಿ ಬಂದಿಲ್ಲ. ಹಾಗಾಗಿ 18-44 ವರ್ಷ ವಯಸ್ಸಿನವರು ಸರ್ಕಾರ ಅಧಿಕೃತ ಮಾಹಿತಿ ನೀಡುವವರೆಗೂ ಯಾರೂ ಆಸ್ಪತ್ರೆ ಬಳಿ ಹೋಗಬಾರದು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಮನವಿ ಮಾಡಿದರು.

ಸಚಿವ ಡಾ. ಕೆ.ಸುಧಾಕರ್

ಸದಾಶಿವನಗರದ ತಮ್ಮ ನಿವಾಸದ ಎದುರು ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಕೋವಿಡ್ ಸಂಬಂಧಿತ ಜಿಲ್ಲಾ ಪ್ರವಾಸಕ್ಕೆ ತೆರಳುವ ಮುನ್ನ ಮಧ್ಯಮಾಗಳೊಂದಿಗೆ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಕೊಡುತ್ತೇವೆ. ಅಂದಾಜು 3-3.5 ಕೋಟಿ 18 ವರ್ಷ ಮೇಲ್ಪಟ್ಟವರು ಇದ್ದಾರೆ. 1 ಕೋಟಿ ಡೋಸ್‌ಗೆ ಕೋವಿಶೀಲ್ಡ್ ಲಸಿಕೆಗೆ ಆರ್ಡರ್ ಮಾಡಲಾಗಿದೆ. ಸೆರಂ ಇನ್​ಸ್ಟಿಟ್ಯೂಟ್ 1 ತಿಂಗಳಲ್ಲಿ 5-6 ಕೋಟಿ ಡೋಸ್ ಉತ್ಪಾದನೆ ಮಾಡುತ್ತಿದೆ. ಭಾರತ್ ಬಯೋಟೆಕ್ 1-1.5 ಕೋಟಿ ಡೋಸ್ ಉತ್ಪಾದನೆ ಮಾಡುತ್ತಿದೆ. ರಷ್ಯಾದ ಸ್ಪುಟ್ನಿಕ್ ಕೂಡ ರಾಜ್ಯಕ್ಕೆ ಬರುತ್ತಿದೆ. ಕೋವಿನ್​​ ಪೋರ್ಟಲ್​​ನಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಲಸಿಕೆ ಮೊದಲು ನೀಡಲಾಗುತ್ತದೆ ಎಂದರು.

ನಿನ್ನೆ ರಾಜ್ಯದಲ್ಲಿ ಕರ್ಫ್ಯೂ ಉಲ್ಲಂಘನೆ ಪ್ರಕರಣಗಳ ವಿಚಾರವಾಗಿ ಪ್ರತಿಕ್ರಿಯಿಸಿ, ಎಂತೆಂತವರೇ ಸಾಯುತ್ತಿದ್ದಾರೆ. ನೀವೇ ನೋಡುತ್ತಾ ಇದ್ದೀರಿ. ಜನ ತಮ್ಮ‌ ತಮ್ಮ ಜವಾಬ್ದಾರಿಯನ್ನು ಅರಿತು ನಿಯಮ ಪಾಲನೆ ಮಾಡಬೇಕು. ಜನರ ಕಷ್ಟದ ಬಗ್ಗೆ ತೋರಿಸುತ್ತಿದ್ದೀರಾ, ಮಾರ್ಗಸೂಚಿಯನ್ನು ಸರ್ಕಾರ ಕೊಡುತ್ತಿದೆ. ಜವಾಬ್ದಾರಿ ಅರಿತು ವರ್ತಿಸಿ ಎಂದು ಸುಧಾಕರ್ ಮನವಿ ಮಾಡಿದರು.

ದಿನಾಂಕ ನಿಗದಿಯಾಗಿಲ್ಲ:

ನಾನು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಾರ್ಯಕ್ರಮದ ದಿನಾಂಕ ಹೇಳೋದಕ್ಕೆ ಹೋಗೋದಿಲ್ಲ. ಸರ್ಕಾರಕ್ಕೆ ಅಂದಾಜು ಮಾಡಲು ಇನ್ನೂ ಆಗಿಲ್ಲ. ಅಧಿಕೃತವಾಗಿ ಮಾಹಿತಿ ಹಂಚಿಕೊಂಡ ಮೇಲೆ ರಾಜ್ಯದ ಜನರಿಗೆ ಮಾಹಿತಿ ತಿಳಿಸುತ್ತೇನೆ. ನಮ್ಮ ಸತತ ಪ್ರಯತ್ನ ಮುಂದುವರೆದಿದೆ ಎಂದರು.

44 ವರ್ಷದವರೆಗಿನ ಜನರಿಗೆ ಎಷ್ಟು ಲಸಿಕೆ ಬೇಕಿದೆ ಎಂದು ಅಂದಾಜಿಸುತ್ತಿದ್ದೇವೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಲಸಿಕೆ ಕೊಡುತ್ತೇವೆ ಎಂದು ಈಗಾಗಲೇ ಘೋಷಿಸಿದ್ದೇವೆ. ಖಾಸಗಿ ಆಸ್ಪತ್ರೆಯಲ್ಲಿ ಇಲ್ಲಿಯವರೆಗೂ ಲಸಿಕೆ ನೀಡುತ್ತಿರುವುದನ್ನು ಮುಂದುವರೆಸಬಹುದು. ಈಗಾಗಲೇ 45 ವರ್ಷ ಮೇಲ್ಪಟ್ಟ 99 ಲಕ್ಷ ಜನರಲ್ಲಿ 95 ಲಕ್ಷ ಜನರಿಗೆ ಲಸಿಕೆ ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

ಶೇ. 1.4 ಲಸಿಕೆ ವೇಸ್ಟ್ ಆಗಿದೆ. ಕೇಂದ್ರ ಸರ್ಕಾರಕ್ಕೆ ಇನ್ನೂ ಹೆಚ್ಚು ಲಸಿಕೆಗೆ ಮನವಿ ಮಾಡುತ್ತಿದ್ದೇವೆ. ಈಗಾಗಲೇ 6 ಲಕ್ಷ ಡೋಸ್ ದಾಸ್ತಾನು ಇದೆ ಎಂದು ಈ ಸಂದರ್ಭದಲ್ಲಿ ಸಚಿವ ಸುಧಾಕರ್​ ತಿಳಿಸಿದರು.

ಓದಿ: 18 ವರ್ಷ ಮೇಲ್ಪಟ್ಟವರಿಗೆ ಶನಿವಾರದಿಂದ ಲಸಿಕೆ ನೋಂದಣಿ ಶುರು: ಪ್ರಕ್ರಿಯೆ ಹೀಗಿರಲಿದೆ..

Last Updated : Apr 30, 2021, 11:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.