ETV Bharat / state

ಹಿಂದೆಯೂ ಸರ್ಕಾರ ಕೇಳಿಲ್ಲ, ಈಗ ಅದನ್ನೇ ಮುಂದುವರೆಸಿದ್ದಾರೆ.. ಡಿಕೆಶಿ ಕುರಿತು ಸಚಿವ ಕೆಎಸ್ಈ ವ್ಯಂಗ್ಯ - kanakapura lockdown

ಕ್ಷೇತ್ರದಲ್ಲಿದ್ದುಕೊಂಡು ಅಧಿಕಾರಿಗಳ ಜೊತೆ ಚರ್ಚಿಸಿ ಕ್ವಾರಂಟೈನ್, ಲಾಕ್​ಡೌನ್​ ಮಾಡೋದರ ಕುರಿತು ತೀರ್ಮಾನ ಮಾಡಬೇಕು. ಅದನ್ನು ಬಿಟ್ಟು ಹೀಗೆ ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ..

Minister  K s Ishwarappa
ಸಚಿವ ಕೆ.ಎಸ್.ಈಶ್ವರಪ್ಪ
author img

By

Published : Jun 22, 2020, 7:57 PM IST

ಬೆಂಗಳೂರು: ಈ ಹಿಂದೆ ಸಿಎಂ ಹಾಗೂ ಸರ್ಕಾರವನ್ನು ಕೇಳಿ ತೀರ್ಮಾನ ಮಾಡದೆ ಡಿ ಕೆ ಶಿವಕುಮಾರ್ ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅದನ್ನೇ ಈಗ ಮುಂದುವರಿಸಿದ್ದಾರೆ ಎಂದು ಕನಕಪುರದ ಲಾಕ್​ಡೌನ್​ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ

ಕನಕಪುರದಲ್ಲಿ ಡಿ ಕೆ ಶಿವಕುಮಾರ್ ಲಾಕ್​ಡೌನ್​​ ಘೋಷಣೆ ಮಾಡಿದ ಹಿನ್ನೆಲೆ ಇಂದು ವಿಧಾನಸೌಧದ ಮುಂದೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಹುಶಃ ಇಂತಹ ಆದೇಶವನ್ನು ಡಿ ಕೆ ಶಿವಕುಮಾರ್​ ಮಾತ್ರ ನೀಡಲು ಸಾಧ್ಯ. ಮುಖ್ಯವಾಗಿ ಇದು ಅಧಿಕಾರಿಗಳು ಹಾಗೂ ಸರ್ಕಾರದ ಜೊತೆ ಚರ್ಚಿಸಿ ತೀರ್ಮಾನ ಮಾಡುವ ವಿಚಾರ. ಇದು ದೇಶದಲ್ಲಿಯೇ ಏಕೈಕ ಶಾಸಕರೊಬ್ಬರು ಇಂತಹ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದರು.

ಕ್ಷೇತ್ರದಲ್ಲಿದ್ದುಕೊಂಡು ಅಧಿಕಾರಿಗಳ ಜೊತೆ ಚರ್ಚಿಸಿ ಕ್ವಾರಂಟೈನ್, ಲಾಕ್​ಡೌನ್​ ಮಾಡೋದರ ಕುರಿತು ತೀರ್ಮಾನ ಮಾಡಬೇಕು. ಅದನ್ನು ಬಿಟ್ಟು ಹೀಗೆ ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಡಿಕೆಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.