ETV Bharat / state

ಎರಡು ವರ್ಷದೊಳಗೆ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ: ಸಚಿವ ಮಾಧುಸ್ವಾಮಿ - Minister J.C. Madhuswamy talk In the Assembly

ಬೆಂಗಳೂರಿನಲ್ಲಿ ಗೃಹ ಬಳಕೆಯಿಂದ ದಿನವೊಂದಕ್ಕೆ ಸುಮಾರು 4 ಸಾವಿರ ಹಾಗೂ ವಾಣಿಜ್ಯ ಬಳಕೆಯಿಂದ 5 ಸಾವಿರ ಮೆಟ್ರಿಕ್ ಟನ್‍ಗೂ ಅಧಿಕ ಕಸ ಸಗ್ರಹಣೆಯಾಗುತ್ತದೆ. ಇದನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ವಿದ್ಯುತ್ ಉತ್ಪಾದನೆ ಮಾಡಲು 6 ಕಂಪನಿಗಳಿಂದ ಟೆಂಡರ್ ಕರೆಯಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

Minister J.C. Madhuswamy talk In the Assembly
ವಿಧಾನಸಭೆ ಕಲಾಪ
author img

By

Published : Dec 8, 2020, 4:59 PM IST

ಬೆಂಗಳೂರು: ಬಿಬಿಎಂಪಿ ವತಿಯಿಂದ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕಗಳು ಎರಡು ವರ್ಷದೊಳಗೆ ಕಾರ್ಯಾರಂಭ ಮಾಡಲಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ವಿಧಾನಸಭೆ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಎನ್.ಎ.ಹ್ಯಾರಿಸ್ ಅವರ ಪ್ರಶ್ನೆಗೆ ಸಿಎಂ ಪರವಾಗಿ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ಗೃಹ ಬಳಕೆಯಿಂದ ದಿನವೊಂದಕ್ಕೆ 4ರಿಂದ 4.5 ಸಾವಿರ ಹಾಗೂ ವಾಣಿಜ್ಯ ಬಳಕೆಯಿಂದ 5 ಸಾವಿರ ಮೆಟ್ರಿಕ್ ಟನ್‍ಗೂ ಅಧಿಕ ಕಸ ಸಂಗ್ರಹಣೆಯಾಗುತ್ತದೆ. ಇದನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ವಿದ್ಯುತ್ ಉತ್ಪಾದನೆ ಮಾಡಲು 6 ಕಂಪನಿಗಳಿಂದ ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.

ವಿದ್ಯುತ್ ಉತ್ಪಾದನಾ ಘಟಕಗಳು ಕಾರ್ಯಾರಂಭ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ. ಸದ್ಯಕ್ಕೆ ಎರಡು ಘಟಕಗಳು ಕಾರ್ಯಾರಂಭ ಮಾಡಬಹುದು. ಎರಡು ವರ್ಷದ ಅವಧಿಯೊಳಗೆ ಎಲ್ಲಾ ಘಟಕಗಳು ಕೆಲಸ ಮಾಡಲಿವೆ. ಕೆಪಿಟಿಸಿಎಲ್ ವತಿಯಿಂದ ಬಿಡದಿ ಬಳಿ ಪ್ರತಿದಿನ 600 ಮೆಟ್ರಿಕ್ ಟನ್ ಸಾಮರ್ಥ್ಯದ ಘನತ್ಯಾಜ್ಯವನ್ನು ಸಂಸ್ಕರಿಸಿ 11.50 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸುವ 360 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ವಿಧಾನಸಭೆ ಕಲಾಪದ ಪ್ರಶ್ನೋತ್ತರ ಅವಧಿ

ಸಾರ್ವಜನಿಕ, ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಸತಾರೆಮ್ ಎಂಟರ್ಪ್ರೈಸ್ ಪ್ರೈವೇಟ್ ಸಂಸ್ಥೆಯು ಪ್ರತಿದಿನ ಒಂದು ಸಾವಿರ ಮೆಟ್ರಿಕ್ ಟನ್ ತ್ಯಾಜ್ಯ ಉಪಯೋಗಿಸಿ ಕನ್ನಲ್ಲಿ ಬಳಿ 12 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ತೆರೆಯಲಿದೆ ಎಂದು ತಿಳಿಸಿದರು.

ಪಿಪಿಪಿ ಮಾದರಿಯಲ್ಲಿ ಮೇ ಇಂಡಿಯಮ್ ಸಂಸ್ಥೆಯಿಂದ 300 ಮೆಟ್ರಿಕ್ ಟನ್ ಘನತ್ಯಾಜ್ಯವನ್ನು ಉಪಯೋಗಿಸಿ, ದೊಡ್ಡಬಿದರಕಲ್ಲು ಬಳಿ 4 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ 12 ತಿಂಗಳಲ್ಲಿ ಪೂರ್ಣಗೊಳಿಸಲಿದೆ. ಮಾವಳ್ಳಿಪುರ ಘಟಕದಲ್ಲಿ 1 ಸಾವಿರ ಮೆಟ್ರಿಕ್ ಟನ್​​​ಘನತ್ಯಾಜ್ಯ ಸಂಸ್ಕರಿಸಿ ಮೆ. ಫರ್ಮ್ ಗ್ರೀನ್ ಎಂಬ ಸಂಸ್ಥೆಯು ಕಾಂಪೋಸ್ಟ್ ನ್ಯಾಚುರಲ್ ಗ್ಯಾಸ್ ಉತ್ಪಾದಿಸಲು ಮುಂದೆ ಬಂದಿದೆ. ಇನ್ನು ಮಾರನೇಹಳ್ಳಿ ಬಳಿ 600 ಮೆಟ್ರಿಕ್ ಟನ್ ಘನತ್ಯಾಜ್ಯವನ್ನು ಮೆ. ನೆಕ್ಸಸ್ ನೋವಸ್ ಸಂಸ್ಥೆಯು, ಮಾವಳ್ಳಿಪುರ ಘಟಕದಲ್ಲಿ 500 ಮೆಟ್ರಿಕ್ ಟನ್ ತ್ಯಾಜ್ಯ ಉಪಯೋಗಿಸಿ 8 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲು ಎನ್‍ಇಜಿ ಸಂಸ್ಥೆ ಮುಂದೆ ಬಂದಿದೆ ಎಂದು ಹೇಳಿದರು.

ಮುಂಬರುವ ಎರಡು ವರ್ಷಗಳಲ್ಲಿ ಪ್ರತಿದಿನ ಸುಮಾರು 4,000 ಮೆಟ್ರಿಕ್ ಟನ್ ಘನತ್ಯಾಜ್ಯದಿಂದ ವಿದ್ಯುತ್/ಸಿಎನ್‍ಜಿ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ 7 ಸಂಸ್ಕರಣಾ ಘಟಕಗಳಿದ್ದು, ಪ್ರತಿದಿನ 1,121 ಮೆಟ್ರಿಕ್ ಟನ್ ಘನ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿದೆ. ದೊಡ್ಡ ಬಿದರಕಲ್ಲು, ಕನ್ನಲ್ಲಿ, ಚಿಕ್ಕನಾಗಮಂಗಲ, ಕೆಸಿಡಿಸಿ, ಲಿಂಗದೀರನಹಳ್ಳಿ, ಸುಬ್ಬರಾಯನಪಾಳ್ಯ ಮತ್ತು ಎಂಎಸ್‍ಜಿಪಿ (ಖಾಸಗಿ)ಗೆ ವಹಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 13 ಬಯೋ ಮಿಥಿನೇಷನ್ ಘಟಕಗಳನ್ನು ಸ್ಥಾಪಿಸಲಾಗಿದ್ದು, ಪ್ರತಿದಿನ 70 ಮೆಟ್ರಿಕ್ ಟನ್ ಘನತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.