ETV Bharat / state

ಸಿದ್ದರಾಮಯ್ಯನವರು ಗಾಳಿಯಲ್ಲಿ ಗುದ್ದಾಡೋದು ಬೇಡ: ಸಚಿವ ಶೆಟ್ಟರ್ - ಕೊರೊನಾ ಭ್ರಷ್ಟಾಚಾರ

ಕೊರೊನಾ ನಡುವೆ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಈ ಸಂಬಂಧ ಐವರು ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಆರೋಪವನ್ನು ತಳ್ಳಿಹಾಕಿ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.

minister jagadish shetter talk after allegation from farmer cm Siddharamiah in vidhana souda
ಸಿದ್ದರಾಮಯ್ಯನವರು ಗಾಳಿಯಲ್ಲಿ ಗುದ್ದಾಡೋದು ಬೇಡ: ಸಚಿವ ಜಗದೀಶ್ ಶೆಟ್ಟರ್
author img

By

Published : Jul 23, 2020, 4:19 PM IST

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಗಾಳಿಯಲ್ಲಿ ಗುದ್ದಾಡುವುದು ಬೇಡ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯನವರು ಗಾಳಿಯಲ್ಲಿ ಗುದ್ದಾಡೋದು ಬೇಡ: ಸಚಿವ ಜಗದೀಶ್ ಶೆಟ್ಟರ್

ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ಆಗಿದೆ ಎನ್ನುತ್ತಾರೆ. ಒಂದು ಗುರುತರ ಆರೋಪವನ್ನು ಮಾಡಲಿ. ಯಾವುದೇ ದಾಖಲೆಯಿಲ್ಲದೇ ಆರೋಪ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದವರು. ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರ ಬಗ್ಗೆ ಕನಿಕರ ಬರುತ್ತಿದೆ ಎಂದು ವ್ಯಂಗ್ಯವಾಡಿದರು. ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಇಲಾಖೆಯವರು ಅವ್ಯವಹಾರ ನಡೆದಿದ್ದರೆ ಮಾಹಿತಿ ಕೊಡುತ್ತಾರೆ. ಸಿದ್ದರಾಮಯ್ಯನವರು ಆರೋಪ ಮಾಡುವುದು ಸರಿಯಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.