ETV Bharat / state

ಪ್ರತಿ ಜೀವಿಗೂ ಬದುಕುವ ಹಕ್ಕಿದೆ : ಅರಣ್ಯ, ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ - ಬಹುಮಾನದ ಮೊತ್ತ 50 ಸಾವಿರ

ವಿಧಾನಸೌಧದಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆಯ ಲಾಂಛನ (ಲೋಗೋ) ಬಿಡುಗಡೆ ಮಾಡಿದರು.

minister-ishwar-khandre-released-the-logo-of-the-forest-department
ಪ್ರತಿ ಜೀವಿಗೂ ಬದುಕುವ ಹಕ್ಕಿದೆ : ಅರಣ್ಯ, ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ..!
author img

By

Published : Jun 26, 2023, 3:47 PM IST

ಬೆಂಗಳೂರು : ಅರಣ್ಯ ಮತ್ತು ಮೃಗಪಕ್ಷಿಗಳು ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ, ಧರ್ಮದ ಭಾಗವಾಗಿದೆ. ಈ ಬ್ರಹ್ಮಾಂಡದಲ್ಲಿ ಎಲ್ಲ ಜೀವಿಗಳಿಗೂ ಬದುಕುವ ಸಮಾನ ಅವಕಾಶವಿದೆ, ಹಕ್ಕಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಅರಣ್ಯ ಇಲಾಖೆಯ ಲಾಂಛನ (ಲೋಗೋ) ಬಿಡುಗಡೆ ಮಾಡಿ ಮಾತನಾಡಿದ ಅವರು, ಜನರ ಆಶೀರ್ವಾದದಿಂದ ಹೊಸ ಸರ್ಕಾರ ಬಂದಿದೆ. ರಾಜ್ಯದೆಲ್ಲೆಡೆ ಹೊಸ ಹುರುಪು ಮೂಡಿದೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಗೂ ಹೊಸ ಹುರುಪು ನೀಡಲು ಲಾಂಛನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಅರಣ್ಯ ಸಚಿವಾಲಯ ಹಲವು ದಶಕಗಳಿಂದ ಅಸ್ತಿತ್ವದಲ್ಲಿದೆ. ಆದರೆ ಈ ಇಲಾಖೆಗೆ ತನ್ನದೇ ಆದ ಸ್ವಂತ ಲಾಂಛನ ಇರಲಿಲ್ಲ. ಈಗ ಆ ಕಾಲ ಕೂಡಿ ಬಂದಿದೆ. ಇಲಾಖೆಯ ಉದ್ದೇಶ, ಮೌಲ್ಯಗಳು ಮತ್ತು ಕಾರ್ಯವನ್ನು ಪ್ರತಿನಿಧಿಸುವ ರೀತಿಯಲ್ಲಿ ಲಾಂಛನವನ್ನು ರೂಪಿಸಲಾಗಿದೆ ಎಂದರು. ಇಲಾಖೆಯ ಲಾಂಛನವು ಸಮಾಜದಲ್ಲಿ ವಿಶಿಷ್ಟ ಅಸ್ಮಿತೆ ಸ್ಥಾಪಿಸುತ್ತದೆ. ಜನರಲ್ಲಿ ಅರಣ್ಯ ಇಲಾಖೆಯ ಬಗ್ಗೆ ಹೆಮ್ಮೆ ಮೂಡಿಸಲು ನೆರವಾಗುತ್ತದೆ. ಇನ್ನು ಮುಂದೆ ಇಲಾಖೆಯ ಅಧಿಕೃತ ವೆಬ್​ಸೈಟ್, ಸಾಮಾಜಿಕ ಮಾಧ್ಯಮ ತಾಣಗಳು, ಮತ್ತು ಪ್ರಚಾರ ಸಾಮಗ್ರಿಗಳಲ್ಲಿಈ ಲೋಗೋ ಬಳಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಅರಣ್ಯ ಇಲಾಖೆಯ ಕಾರ್ಯ, ಉದ್ದೇಶವನ್ನು ಬಿಂಬಿಸುವಂತಹ ತನ್ನದೇ ಆದ ಲಾಂಛನ ಅಳವಡಿಸಿಕೊಳ್ಳಲು ನಿರ್ಧರಿಸಿ ಕಳೆದ ವರ್ಷ ವಿದ್ಯಾರ್ಥಿಗಳನ್ನು, ಕಲಾವಿದರು ಮತ್ತು ಸಾರ್ವಜನಿಕರಿಂದ ಲಾಂಛನ ರಚಿಸುವಂತೆ ಕೋರಿ ಲೋಗೋ ವಿನ್ಯಾಸ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ರಾಜ್ಯಾದ್ಯಂತ ಒಟ್ಟು 309 ಲೋಗೋ ವಿನ್ಯಾಸಗಳು ಬಂದಿದ್ದವು. ಈ ಎಲ್ಲವನ್ನೂ ಪರಿಶೀಲಿಸಲು, ಒಂದು ಸಮಿತಿಯನ್ನು ರಚಿಸಿ, 3 ಹಂತಗಳಲ್ಲಿ ಸ್ಪರ್ಧೆಯನ್ನು ನಡೆಸಿ, ಅಂತಿಮವಾಗಿ ಈ ಲೋಗೋ ಆಯ್ಕೆ ಮಾಡಲಾಗಿದೆ ಎಂದರು.

ಬಹುಮಾನದ ಮೊತ್ತ 50 ಸಾವಿರ : ಸ್ಪರ್ಧೆಯ ವಿಜೇತ ಮೈಸೂರಿನ ಶಮಂತ್ ಗೊರೂರು ಅವರಿಗೆ 20 ಸಾವಿರ ರೂ. ನಗದು ಬಹುಮಾನ, ಪ್ರಮಾಣ ಪತ್ರವನ್ನೂ ಸಚಿವರು ಇದೇ ವೇಳೆ ಪ್ರದಾನ ಮಾಡಿದರು. ಈ ಮೊತ್ತವನ್ನು 50 ಸಾವಿರಕ್ಕೆ ಹೆಚ್ಚಿಸುವುದಾಗಿಯೂ ಪ್ರಕಟಿಸಿದರು.

ನಮ್ಮ ರಾಷ್ಟ್ರ ಲಾಂಛನದಲ್ಲೂ ನಾಲ್ಕು ಮುಖದ ಸಿಂಹ ಇದೆ. ನಮ್ಮ ರಾಜ್ಯದ ಲಾಂಛನದಲ್ಲೂ ಸಿಂಹ ಇದೆ. ಜೊತೆಗೆ ಸಿಂಹದ ದೇಹ ಮತ್ತು ಸೊಂಡಿಲಿರುವ ಕಾಲ್ಪನಿಕ ಮೃಗವೂ ಇದೆ. ಹಸಿರೂ ಇದೆ ಮಿಗಿಲಾಗಿ ಗಂಡ ಬೇರುಂಡ ಪಕ್ಷಿ ಇದೆ. ವಿಧಾನಸೌಧದ ಗೋಪುರದಲ್ಲೂ ಸಿಂಹ ಲಾಂಛನವಿದೆ. ಅಂದರೆ ವನ್ಯಮೃಗಗಳು ನಮ್ಮ ಆಡಳಿತದಲ್ಲಿ ಹಾಸು ಹೊಕ್ಕಾಗಿವೆ ಎಂದರೆ ತಪ್ಪಾಗಲಾರದು ಎಂದರು.

ಕರ್ನಾಟಕ ನಕ್ಷೆಯ ಆಕಾರದಲ್ಲಿರುವ ಲಾಂಛನದಲ್ಲಿ ರಾಷ್ಟ್ರೀಯ ಪ್ರಾಣಿ ಹುಲಿ, ರಾಜ್ಯಪಕ್ಷಿ ನೀಲಕಂಠ, ರಾಜ್ಯ ಪ್ರಾಣಿ ಆನೆ, ರಾಜ್ಯದ ಹಿರಿಮೆ ಮತ್ತು ಗರಿಮೆಯಾದ ಶ್ರೀಗಂಧ, ರಾಜ್ಯ ಚಿಟ್ಟೆ ಸೌಥೆರ್ನ್ ಬರ್ಡ್ ವಿಂಗ್, ಮತ್ತು ಇವೆಲ್ಲಕ್ಕೂ ಮೂಲಾಧಾರವಾದ ಜಲಸಂಪನ್ಮೂಲವಿದ್ದು ಇಲಾಖೆಯನ್ನು ಸೂಕ್ತವಾಗಿ ಪ್ರತಿನಿಧಿಸುತ್ತದೆ ಎಂದರು.

ಇದನ್ನೂ ಓದಿ : ಜುಲೈ ಒಂದರಿಂದ ನಿರೀಕ್ಷೆಯಂತೆ ಅಕ್ಕಿ ವಿತರಣೆ ಮಾಡಲಾಗುವುದು: ಸಚಿವ ಸತೀಶ್ ಜಾರಕಿಹೊಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.