ETV Bharat / state

ಶೇ.40 ಕಮೀಷನ್‌ ಆರೋಪ.. ಡಿಕೆಶಿ ಹತ್ತಿರ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ.. ಸಚಿವ ಕಾರಜೋಳ

author img

By

Published : Nov 26, 2021, 3:34 PM IST

ಶೇ. 40ರಷ್ಟು ಕಮೀಷನ್ ದರದ ಬೇಡಿಕೆ ಇರಿಸಲಾಗುತ್ತಿದೆ ಎನ್ನುವ ಗುತ್ತಿಗೆದಾರರ ಸಂಘದ ಆರೋಪದ ಕುರಿತು ಸಮಗ್ರ ತನಿಖೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಆದೇಶ ಮಾಡಿದ್ದಾರೆ. ತನಿಖೆ ಮಾಡಿ ವರದಿ ಬಂದ ತಕ್ಷಣ ನಿರ್ದಾಕ್ಷಿಣ್ಯವಾಗಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಯಾರೇ ತಪ್ಪು ಮಾಡಿರಲಿ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ..

ಸಚಿವ ಗೋವಿಂದ ಕಾರಜೋಳ ಹೇಳಿಕೆ
ಸಚಿವ ಗೋವಿಂದ ಕಾರಜೋಳ ಹೇಳಿಕೆ

ಬೆಂಗಳೂರು : ನೀರಾವರಿ ಮತ್ತೆ ಲೋಕೋಪಯೋಗಿ ಇಲಾಖೆಯಲ್ಲಿನ ಟೆಂಡರ್ ಕಮೀಷನ್ ವಿಚಾರದ ದಾಖಲೆಯನ್ನು ಬಿಡುಗಡೆ ಮಾಡಲಿ. ಎಲ್ಲರನ್ನೂ ತನಿಖೆಗೆ ಒಳಪಡಿಸಲಿ.

ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪಿಡಬ್ಲ್ಯೂಡಿ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ. 40ರಷ್ಟು ಕಮೀಷನ್ ದರದ ಬೇಡಿಕೆ ಇರಿಸಲಾಗುತ್ತಿದೆ ಎನ್ನುವ ಗುತ್ತಿಗೆದಾರರ ಸಂಘದ ಆರೋಪದ ಕುರಿತು ಸಮಗ್ರ ತನಿಖೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಆದೇಶ ಮಾಡಿದ್ದಾರೆ.

ತನಿಖೆ ಮಾಡಿ ವರದಿ ಬಂದ ತಕ್ಷಣ ನಿರ್ದಾಕ್ಷಿಣ್ಯವಾಗಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಯಾರೇ ತಪ್ಪು ಮಾಡಿರಲಿ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಗುತ್ತಿಗೆದಾರರಿಂದ ಶೇ.40ರಷ್ಟು ಕಮೀಷನ್‌ ಆರೋಪದ ಕುರಿತಂತೆ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿರುವುದು..

ಸಮಗ್ರ ತನಿಖೆಯಾದಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂದು ಗೊತ್ತಾಗಲಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನಾನು ಕೂಡ ಒತ್ತಾಯಿಸುತ್ತೇನೆ.

ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಅವರ ಬಳಿ ಏನೇ ದಾಖಲೆ ಇದ್ದರೂ ಬಿಡುಗಡೆ ಮಾಡಲಿ. ಈಗಾಗಲೇ ಸಿಎಂ ತನಿಖೆ ಮಾಡಲು ಆದೇಶಿಸಿದ್ದಾರೆ. ಅವರಿಗೆ ಒಪ್ಪಿಸಲಿ. ತನಿಖೆ ನಂತರ ಸತ್ಯ ಹೊರ ಬರಲಿದೆ.

ಪ್ರಕರಣದ ಸಮಗ್ರ ತನಿಖೆಯಾಗಬೇಕು, ಯಾರೇ ತಪ್ಪು ಮಾಡಿದರೂ ಕ್ರಮಕೈಗೊಳ್ಳಬೇಕು. ಯಾರನ್ನೂ ಬಿಡದೆ ಎಲ್ಲರನ್ನೂ ತನಿಖೆಗೆ ಒಳಪಡಿಸಿದಲ್ಲಿ ಸತ್ಯ ಹೊರ ಬರಲಿದೆ ಎಂದರು.

ಲಖನ್ ಸ್ಪರ್ಧೆಗೂ ನಮಗೂ ಸಂಬಂಧವಿಲ್ಲ : ಚುನಾವಣೆಗೆ ಸ್ಪರ್ಧೆ ಮಾಡಲು ಯಾರ್ಯಾರಿಗೆ ಅರ್ಹತೆ ಇದೆಯೋ ಅವರೆಲ್ಲಾ ಸ್ಪರ್ಧೆ ಮಾಡಬಹುದು. ಆದರೆ, ನಮ್ಮ ಪಕ್ಷದ ವತಿಯಿಂದ ಒಬ್ಬ ಅಭ್ಯರ್ಥಿಯನ್ನು ಹಾಕಿದ್ದೇವೆ. ನಮ್ಮ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆದ್ದು ಬರಲಿದ್ದಾರೆ. 20 ಸ್ಥಾನಕ್ಕೆ ನಾವು ಸ್ಪರ್ಧಿಸಿದ್ದು, 15 ಸ್ಥಾನ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಒಬ್ಬರೇ, ಅವರು ಗೆದ್ದು ಬರಲಿದ್ದಾರೆ. ಲಖನ್ ಜಾರಕಿಹೊಳಿ ಸ್ಪರ್ಧೆ ವಿಚಾರದಲ್ಲಿ ಪಕ್ಷವಿರೋಧಿ ಚಟುವಟಿಕೆ ಪ್ರಶ್ನೆಯೇ ಬರುವುದಿಲ್ಲ.

ರಮೇಶ್ ಜಾರಕಿಹೊಳಿ ನಮ್ಮ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ವೇಳೆ ಭಾಗವಹಿಸಿದ್ದರು. ನಮ್ಮ ಅಭ್ಯರ್ಥಿ ಗೆಲ್ಲಬೇಕು ಎಂದು ಹೇಳಿದ್ದಾರೆ. ಇದರಲ್ಲಿ ಪಕ್ಷ ವಿರೋಧಿ ಚಟುವಟಿಕೆ ಬರುವುದಿಲ್ಲ ಎಂದರು.

ನಮ್ಮ ಮತಗಳಿವೆ ನಾವು ಗೆಲ್ಲುತ್ತೇವೆ : ನಾವು ಯಾರ ನಾಮಪತ್ರವನ್ನು ವಾಪಸ್ ತೆಗೆಸುವುದಿಲ್ಲ. ಯಾರ್ಯಾರು ಸ್ಪರ್ಧೆ ಮಾಡಬೇಕು ಎನ್ನುತ್ತಿದ್ದಾರೋ ಅವರು ಮಾಡಲಿ, ನಮಗೆ ನಮ್ಮದೇ ಆದ ಮತಗಳಿವೆ. ನಮ್ಮ ರಾಜಕೀಯ ಪಕ್ಷದ ಕಾರ್ಯಕರ್ತರು ಸ್ಥಳೀಯ ಸಂಸ್ಥೆಗಳಿಗೆ ಚುನಾಯಿತರಾಗಿದ್ದಾರೆ.

ಗ್ರಾಮ ಪಂಚಾಯತ್‌, ಪಟ್ಟಣ ಪಂಚಾಯತ್‌, ಪುರಸಭೆ, ನಗರಸಭೆಯಲ್ಲಿ ನಮ್ಮ ಕಾರ್ಯಕರ್ತರು ಗೆದ್ದಿದ್ದಾರೆ. ಅವರೆಲ್ಲಾ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಲಿದ್ದಾರೆ. ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದರು.

ರಮೇಶ್ ಜಾರಕಿಹೊಳಿ ಪಕ್ಷದ ವಿರುದ್ಧವಾಗಿ ಹೋಗಿಲ್ಲ. ಲಖನ್ ಸ್ಪರ್ಧೆ ಮಾಡಿದ್ದು ಅವರ ರಾಜಕೀಯ, ಅವರು ಕಾಂಗ್ರೆಸ್ ಮತವನ್ನು ಪಡೆದು ಸ್ವಂತ ಶಕ್ತಿಯ ಮೇಲೆ ಗೆದ್ದು ಬರಲಿದ್ದಾರೆ ಎಂದರು.

ತಂತ್ರಗಾರಿಕೆ ಇಲ್ಲ, ಕೆಲಸವೇ ಅಸ್ತ್ರ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಬೆಂಗಳೂರಿಗೆ ತಂತ್ರಗಾರಿಕೆ ಮಾಡಲು ಬಂದಿರುವ ಬಗ್ಗೆ ಗೊತ್ತಿಲ್ಲ, ಮುಂದಿನ ಚುನಾವಣೆಗೆ ನಮ್ಮದು ಯಾವುದೇ ತಂತ್ರಗಾರಿಕೆ ಇರುವುದಿಲ್ಲ. ನಮ್ಮ ಕೆಲಸ, ಕಾರ್ಯವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.