ETV Bharat / state

ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹ ಅಭಿಯಾನಕ್ಕೆ ಸಚಿವ ಡಿ.ವಿ.ಎಸ್ ಚಾಲನೆ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನಕ್ಕೆ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಚಾಲನೆ ನೀಡಿದರು.

Minister D V Sadananda Gowda launches Shree Rama Mandir construction fund raising campaign
ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹ ಅಭಿಯಾನಕ್ಕೆ ಸಚಿವ ಡಿ.ವಿ.ಎಸ್ ಚಾಲನೆ
author img

By

Published : Jan 31, 2021, 8:08 AM IST

ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಿಧಿ ಸಂಗ್ರಹ ಅಭಿಯಾನಕ್ಕೆ ಬಿಜಿಪಿ ಹಿರಿಯ ನಾಯಕ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ವಿ.ಎಸ್ ಸಂಘ ಪರಿವಾರದ ನೇತೃತ್ವದಲ್ಲಿ ನಡೆದ ಅಯೋಧ್ಯೆ ಆಂದೋಲನವು ಭಾರತೀಯ ಸಮಾಜದಲ್ಲಿ ಜಾಗೃತಿ ಒಗ್ಗಟ್ಟು, ಸಾಮರಸ್ಯ ಮೂಡಿಸಿತು. ದೇಶಭಕ್ತಿಯನ್ನು ಜಾಗೃತಗೊಳಿಸಿತು. ನಮ್ಮ ದೇಶದಲ್ಲಿ ಹಲವು ಪ್ರಾಂತ, ವರ್ಗ, ಭಾಷೆ, ಆಚಾರ-ವಿಚಾರಗಳು ಇವೆ. ಆದರೆ ದೇಶದಲ್ಲಿ ಐಕ್ಯತೆ ಸಾಧಿಸುವ ಶಕ್ತಿ ಅಯೋಧ್ಯೆ ಶ್ರೀರಾಮಚಂದ್ರನಿಗಿದೆ ಎಂದರು.

ದೇಶದ ಸರ್ವೋಚ್ಛ ನ್ಯಾಯಾಲಯವು ರಾಮಜನ್ಮಭೂಮಿ ಪರವಾಗಿ ತೀರ್ಪು ನೀಡಿತು. ನಮ್ಮ ಸುದೈವಕ್ಕೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗಲೇ ಈ ತೀರ್ಪು ಬಂತು. ಹಾಗೆಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಸರ್ಕಾರವು ಸಂವಿಧಾನದ 370ನೇ ಪರಿಚ್ಛೇದವನ್ನು ರದ್ದುಗೊಳಿಸಿ ಜಮ್ಮು-ಕಾಶ್ಮೀರವನ್ನು ದೇಶದಲ್ಲಿ ಎಲ್ಲ ರೀತಿಯಿಂದಲೂ ಐಕ್ಯಗೊಳಿಸುವ ಕೆಲಸಮಾಡಿದೆ ಎಂದು ಹೇಳಿದರು.

ಓದಿ : ಛಲಬೇಕು ಸಾಧಕನಿಗೆ.. ಕಾಲಿನಿಂದ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ದಿವ್ಯಾಂಗ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.