ಬೆಂಗಳೂರು: ಕಾಂಗ್ರೆಸ್ಗೆ ಮತ್ತೆ ಹೋಗುವ ಪ್ರಶ್ನೆಯೇ ಇಲ್ಲ. ಒಡೆದು ಹೋದ ಹಾಲು, ಮನಸ್ಸು ಮತ್ತೆ ಒಂದಾಗಲು ಸಾಧ್ಯವಿಲ್ಲ ಎಂದು ಸಚಿವ ಬಿ ಸಿ ಪಾಟೀಲ್ ಹೇಳಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಗೆ ಬರಲು ವಲಸಿಗರಿಗೂ ಸೇರಿದಂತೆ ಎಲ್ಲರಿಗೂ ಮುಕ್ತ ಆಹ್ವಾನ ಇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೆ ಕಾಂಗ್ರೆಸ್ಗೆ ಸೇರುವಂತ ಜರೂರತ್ತು ಇಲ್ಲ. ಈಗಾಗಲೇ ಡೈವರ್ಸ್ ತಗೊಂಡು ಬಂದಾಗಿದೆ ಎಂದರು.
ಕಾಂಗ್ರೆಸ್ನವರಿಗೆ ಅಭ್ಯರ್ಥಿಗಳೇ ಇಲ್ಲ. ಹಳೇ ಗಂಡನ ಪಾದವೇ ಗತಿ ಅನ್ನೋ ತರಾ ಕರೀತಿದಾರೆ. ಆದರೆ, ನಾವು ಮರಳಿ ಪಕ್ಷಕ್ಕೆ ಹೋಗಲ್ಲ. ನಾವು ಇಲ್ಲಿ ಚೆನ್ನಾಗಿದ್ದೇವೆ. ಸಿದ್ದರಾಮಯ್ಯ ವೀರಾವೇಶದಿಂದ ವಿಧಾನಸಭೆಯಲ್ಲಿ ಮಾತಾಡಿದ್ದು ಕೇಳಿದೀವಲ್ಲ. ಅದಾದ ಮೇಲೂ ನಾವು ಯಾಕೆ ಹೋಗ್ತೀವಿ ಎಂದು ಡಿಕೆಶಿ ಆಹ್ವಾನಕ್ಕೆ ಸಚಿವ ಪಾಟೀಲ್ ಟಾಂಗ್ ನೀಡಿದರು.
ಇದನ್ನೂ ಓದಿ: ದಾರಿ ತಪ್ಪಿದ ಪಕ್ಷಕ್ಕೆ.. ದಾರಿ ತಪ್ಪಿದ ಮಗ ಸಿದ್ದರಾಮಯ್ಯ ನಾಯಕ: ಸಾರಿಗೆ ಸಚಿವ ಶ್ರೀರಾಮುಲು ವಾಗ್ದಾಳಿ