ETV Bharat / state

ಹಿಜಾಬ್ ವಿವಾದ: ಪ್ರಚೋದನೆ ಕೊಟ್ಟವರ ವಿರುದ್ಧ ಕಾನೂನು ರೀತಿಯ ಕ್ರಮಕ್ಕೆ ನಿರ್ಧಾರ: ಬಿ ಸಿ ನಾಗೇಶ್ - ಬೆಂಗಳೂರಿನಲ್ಲಿ ಹಿಜಾಬ್ ವಿಚಾರವಾಗಿ ಸಚಿವ ಬಿ ಸಿ ನಾಗೇಶ್ ಹೇಳಿಕೆ

ಯಾರೇ ಗೊಂದಲ, ಗಲಭೆ, ಗಲಾಟೆಗೆ ಪ್ರಚೋದನೆ ಕೊಟ್ಟಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಕೋರ್ಟ್​​​ನಲ್ಲಿ ಪ್ರಕರಣವಿದೆ, ತೀರ್ಪಿನ ಬಳಿಕ‌ ಕ್ರಮಕೈಗೊಳ್ಳುತ್ತೇವೆ ಎಂದು ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.

ಬಿ ಸಿ ನಾಗೇಶ್
ಬಿ ಸಿ ನಾಗೇಶ್
author img

By

Published : Feb 9, 2022, 4:23 PM IST

Updated : Feb 9, 2022, 4:59 PM IST

ಬೆಂಗಳೂರು : ರಾಜ್ಯದಲ್ಲಿ ಹಿಜಾಬ್ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ಹಿಜಾಬ್ ಕಿಡಿ ತಣ್ಣಗಾಗಲು ಇತ್ತ ರಾಜ್ಯ ಸರ್ಕಾರ ಇಂದಿನಿಂದ ಮೂರು ದಿನಗಳ ಕಾಲ 8ನೇ ತರಗತಿಯಿಂದ ಹಿಡಿದು ರಜೆ ಘೋಷಣೆ ಮಾಡಲಾಗಿದೆ. ಇತ್ತ ಪ್ರಚೋದನೆ ಕೊಟ್ಟವರ ವಿರುದ್ಧ ಕಾನೂನು ರೀತಿಯ ಕ್ರಮಕ್ಕೆ ನಿರ್ಧರಿಸಲಾಗಿದೆ ಅಂತ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಸಚಿವ ಬಿ.ಸಿ ನಾಗೇಶ್ ಹೇಳಿಕೆ

ಯಾರೇ ಗೊಂದಲ, ಗಲಭೆ, ಗಲಾಟೆಗೆ ಪ್ರಚೋದನೆ ಕೊಟ್ಟಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಕೋರ್ಟ್ ನಲ್ಲಿ ಪ್ರಕರಣವಿದೆ, ತೀರ್ಪಿನ ಬಳಿಕ‌ ಕ್ರಮಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ. ಇನ್ನು ನಿನ್ನೆ 47 ಕಡೆ ಮಾತ್ರ ಗಲಭೆ ನಡೆದಿದ್ದು, ಬೇರೆಡೆ ಪ್ರತಿಭಟನೆಗಳು ಮಾತ್ರ ನಡೆದಿದೆ.

ಪಿಯುಸಿಯಲ್ಲಿ 5 ಸಾವಿರಕ್ಕೂ ಹೆಚ್ಚು ಕಾಲೇಜಗಳು ಇವೆ. ಡಿಗ್ರಿ ಜೊತೆ ಪಿಯು ಇರೋ ಕಡೆ ಗಲಾಟೆ ನಡೆದಿದೆ. SDPI ಬಗ್ಗೆ ನಮಗೆ ಅನುಮಾನ ಇದೆ ಅಷ್ಟೇ, ತಪಿತಸ್ಥರ ವಿರುದ್ಧ ಕ್ರಮ ಕೈ ಗೊಳ್ಳುತ್ತೇವೆ. ಈ ಘಟನೆ ಬೇರೆ ಕಡೆ ಡೈವರ್ಟ್ ಮಾಡಲು ನೋಡಿದ್ರು. ಆದರೆ ಆಸೆ ಈಡೇರಲಿಲ್ಲ, ನಿನ್ನೆ ಘಟನೆ ನಡೆದ ಕಡೆ ಅರೆಸ್ಟ್ ಮಾಡಲಾಗಿದೆ ಎಂದರು.

ನಿರ್ದೇಶಕರ ವರ್ಗಾವಣೆ.. ಕಾಗೆ ಕೂರಕ್ಕೂ, ಕೊಂಬೆ ಮುರಿಯಕ್ಕೂ ಇರೋ ಸಂಬಂಧ ಅಷ್ಟೇ:

ಇನ್ನು ಪಿಯು ಬೋರ್ಡ್ ನ ನಿರ್ದೇಶಕಿ ಸ್ನೇಹಲ್​ರ ವರ್ಗಾವಣೆ ವಿಚಾರವಾಗಿ ಉತ್ತರಿಸಿದ ಸಚಿವರು, ಸ್ನೇಹಲ್ ವರ್ಗಾವಣೆ ಕಾಗೆ ಕೂರಕ್ಕೂ, ಕೊಂಬೆ ಮುರಿಯಕ್ಕೂ ಇರೋ ಸಂಬಂಧ ಅಷ್ಟೇ.

ಪಿಯುಸಿಯಲ್ಲಿ ಸಾಕಷ್ಟು ದಿನ ಕೆಲ್ಸ ಮಾಡಿದ್ದೇನೆ, ಡಿಸಿ ಕೆಲಸಕ್ಕೆ ಉತ್ಸಾಹ ಹೊಂದಿದ್ದು, ಈ ಬಗ್ಗೆ CS ಬಳಿ ಕೂಡ ಚರ್ಚೆ ನಡೆಸಿದ್ದರು ಅನ್ನೋ ಮಾಹಿತಿ ನನ್ನ ಕಿವಿಗೆ ಬಿದಿದ್ದೆ. ಆ ಕಾರಣಕ್ಕೆ ವರ್ಗಾವಣೆಯಾಗಿದೇ ವಿನಃ ಸಮವಸ್ತ್ರ ವಿಚಾರಕ್ಕೂ ಇವರ ವರ್ಗಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದರು.

ಹಿಜಾಬ್ ಕಿಡಿ ಹತ್ತಲು ಕಾರಣವಾಗಿದ್ದು ಏನು?

ಡಿಸೆಂಬರ್ ಕೊನೆ ವಾರದಲ್ಲಿ ಈ ಹಿಜಾಬ್ ವಿವಾದ ಶುರುವಾಯ್ತು. 12 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಮುಂದಾದರು, ಆದರೆ, ಆಡಳಿತ ಮಂಡಳಿಯು ಇದನ್ನ ನಿರಾಕರಿಸಿದರು. ಪ್ರಾಂಶುಪಾಲರ ಮನವೊಲಿಕೆ ಬಳಿಕ ಇದರಲ್ಲಿ 6 ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸಿ ತರಗತಿಗೆ ಆಗಮಿಸಿದರು.

ಆದರೆ, ಉಳಿದ 6 ವಿದ್ಯಾರ್ಥಿನಿಯರಿಗೆ ಸಾಕಷ್ಟು ಮನವೊಲಿಸುವ ಕೆಲಸ ಕೂಡ ಆಯ್ತು. ಕೆಲವರ ಪ್ರಚೋಧನೆಗೆ ಒಳಗಾದ ಅಮಾಯಾಕ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಪಟ್ಟು ಹಿಡಿದರು. ಕುರಾನ್ ಪ್ರಕಾರ ಇಸ್ಲಾಂ ಧರ್ಮದಲ್ಲಿ ಕಡ್ಡಾಯವಾಗಿ ಧರಿಸಬೇಕು ಅಂತ ವಾದ ಮಾಡಿದ್ದರು.

ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮಗಳ ಆಚರಣೆಗೆ ಅವಕಾಶವಿಲ್ಲ, ಬದಲಿಗೆ ಜ್ಞಾನಕ್ಕಾಗಿ ಅಷ್ಟೇ ಇರುವುದು. ಸಮಾನತೆಯನ್ನ ಕಾಪಾಡಲು ಸಮವಸ್ತ್ರ ಪಾಲನೆ ಮುಂದುವರೆಸಲು, ಕರ್ನಾಟಕ ಶಿಕ್ಷಣ ಕಾಯ್ದೆ 11 ರ ಪ್ರಕಾರ ಎಸ್ಡಿಎಂಸಿ ಮಾತ್ರ ಸಮವಸ್ತ್ರ ನಿರ್ಧರಿಸಲು ಅವಕಾಶ ಇದೆ.

ಉಡುಪಿಯಲ್ಲಿ ಶಿಕ್ಷಣ ಕಾಯ್ದೆ ಜಾರಿ ಆಗುವ ಮುನ್ನವೇ 1985ರಲ್ಲೇ ಸಮವಸ್ತ್ರವನ್ನ ಮುಂದುವರೆಸಿಕೊಂಡು ಬರ್ತಿದೆ. ಈಗಲೂ ಸಹ 6 ಜನ ವಿದ್ಯಾರ್ಥಿಗಳಿಗೆ ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ ಅಂದರು.

ಸಮವಸ್ತ್ರ ನೀತಿಯಲ್ಲಿ ಏನಿದೆ..?

1985ರ ಶಿಕ್ಷಣ ಕಾಯ್ದೆ ಹಾಗೂ 1985ರ ಶಿಕ್ಷಣ ನಿಯಮಾವಳಿಗಳ ಪ್ರಕಾರ ಎಲ್ಲ ಶಿಕ್ಷಣ ಸಂಸ್ಥೆಗಳು ಅದರದ್ದೇ ಆದ ಸಮವಸ್ತ್ರ ಅನುಸರಿಸಲು ಸರ್ವ ಸ್ವಾತಂತ್ಯ್ರರು. ಒಮ್ಮೆ ಸಮವಸ್ತ್ರ ತಂದರೆ ಅದನ್ನ 5 ವರ್ಷಗಳ ಕಾಲ ಬದಲಾವಣೆ ಮಾಡಲು ಸಾಧ್ಯವಿಲ್ಲ. 2021-22 ನೇ ದಾಖಲಾತಿ ಮಾರ್ಗಸೂಚಿಯ ಪ್ರಕಾರ, ಸರ್ಕಾರ/ಪದವಿ ಪೂರ್ವ ಶಿಕ್ಷಣ/ ಶಿಕ್ಷಣ ಕಾಯ್ದೆಯಲ್ಲಿ ಪದವಿ ಪೂರ್ವ ಶಿಕ್ಷಣದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಿರುವುದಿಲ್ಲ.

ಆದರೆ, ಕೆಲವು ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರು ಸಮವಸ್ತ್ರವನ್ನ ಕಡ್ಡಾಯಗೊಳಿಸಿರುವುದು ನಿಯಮಬಾಹಿರವಾಗಿರುತ್ತದೆ ಅಂತ ತಿಳಿಸಿದೆ. ಮೇಲ್ಕಂಡ ಸೂಚನೆಗಳನ್ನು ಉಲ್ಲಂಘಿಸಿದ್ದಲ್ಲಿ ಗಂಭೀರವಾಗಿ ಪರಿಗಣಿಸಲಾಗುತ್ತೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ : ಹಿಜಾಬ್​ ಧರಿಸುವ ಬಗ್ಗೆ ಮಧ್ಯಂತರ ಆದೇಶಕ್ಕೆ ಹೈಕೋರ್ಟ್​ ನಕಾರ..ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗ

Last Updated : Feb 9, 2022, 4:59 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.