ETV Bharat / state

ಕಿಕ್ ಬ್ಯಾಕ್ ಸಂಸ್ಕೃತಿ ನಮ್ಮದಲ್ಲ, ಅದು ಕಾಂಗ್ರೆಸ್​​ನದ್ದು : ಸಚಿವ ಅಶ್ವತ್ಥ್ ನಾರಾಯಣ ತಿರುಗೇಟು - ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆ

ಹೆಚ್​​ಡಿಕೆ-ಆರ್.ಅಶೋಕ್ ಮೈತ್ರಿ ಮಾತುಕತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಲಬುರಗಿಯಲ್ಲಿ ನಮಗೆ ಬಹುಮತ ಬಂದಿಲ್ಲ. ಜೆಡಿಎಸ್ ಸೇರಿ ಐವರು ಗೆದ್ದಿದ್ದಾರೆ. ಜೆಡಿಎಸ್ ನವರಿಗೆ ಕಾಂಗ್ರೆಸ್ ಮೇಲೆ ಅಪನಂಬಿಕೆ ಇದೆ. ಜೆಡಿಎಸ್, ಬಿಜೆಪಿ ಜತೆ ಬರಲು ಮನಸು ಮಾಡಿದ್ದಾರೆ. ಮಾತುಕತೆ ನಡೆಯುತ್ತಿದೆ..

ಸಚಿವ ಅಶ್ವತ್ಥ್ ನಾರಾಯಣ್ ತಿರುಗೇಟು
ಸಚಿವ ಅಶ್ವತ್ಥ್ ನಾರಾಯಣ್ ತಿರುಗೇಟು
author img

By

Published : Sep 11, 2021, 6:55 PM IST

ಬೆಂಗಳೂರು : ಕಿಕ್ ಬ್ಯಾಕ್ ಸಂಸ್ಕೃತಿ ಕಾಂಗ್ರೆಸ್ ನದ್ದೇ ಹೊರತು ನಮ್ಮದಲ್ಲ ಎಂದು ಟೆಂಡರ್‌ನಲ್ಲಿ 34 ಕೋಟಿ ರೂ. ಕಿಕ್ ಬ್ಯಾಕ್ ಆರೋಪಕ್ಕೆ ಸಚಿವ ಅಶ್ವತ್ಥ್ ನಾರಾಯಣ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ವಿರುದ್ಧ ಸಚಿವ ಅಶ್ವತ್ಥ್ ನಾರಾಯಣ ತಿರುಗೇಟು

ನಗರದಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಕೌಶಲ್ಯಾಭಿವೃದ್ಧಿ ಕೇಂದ್ರದ ಲ್ಯಾಬ್ ಉಪಕರಣ ಖರೀದಿಯಲ್ಲಿ ಇಲಾಖೆಯ ಅಧಿಕಾರಿಗಳು ಅಕ್ರಮ ಟೆಂಡರ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡಿದೆ.

ಸುಮ್ಮನೆ ಕೀಳು ಮಟ್ಟದ ಹೇಳಿಕೆ ಕೊಟ್ಟಿದ್ದಾರೆ. ಕಾಂಗ್ರೆಸ್ ಗಾಳಿಯಲ್ಲಿ ಗುಂಡು ಹೊಡೆದಿದೆ. ನಮಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ, ನಿಯಮಾನುಸಾರ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಹೆಚ್​​ಡಿಕೆ-ಆರ್.ಅಶೋಕ್ ಮೈತ್ರಿ ಮಾತುಕತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಲಬುರಗಿಯಲ್ಲಿ ನಮಗೆ ಬಹುಮತ ಬಂದಿಲ್ಲ. ಜೆಡಿಎಸ್ ಸೇರಿ ಐವರು ಗೆದ್ದಿದ್ದಾರೆ. ಜೆಡಿಎಸ್ ನವರಿಗೆ ಕಾಂಗ್ರೆಸ್ ಮೇಲೆ ಅಪನಂಬಿಕೆ ಇದೆ. ಜೆಡಿಎಸ್, ಬಿಜೆಪಿ ಜತೆ ಬರಲು ಮನಸು ಮಾಡಿದ್ದಾರೆ. ಮಾತುಕತೆ ನಡೆಯುತ್ತಿದೆ ಎಂದರು.

ಗುಜರಾತ್‌ನಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ಸಿದ್ಧಾಂತವನ್ನು ನಂಬಿ ಕೆಲಸ ಮಾಡುವ ನಾಯಕರು, ಕಾರ್ಯಕರ್ತರು ನಮ್ಮಲ್ಲಿದ್ದಾರೆ. ಪಕ್ಷದಲ್ಲಿ ಕೆಲವು ಸಲ ಕೆಲವು ನಿರ್ಣಯ ತಗೋಬೇಕಾಗುತ್ತದೆ. ಅದರಂತೆ ಬದಲಾವಣೆಗಳು, ಹೊಸ ನಿರ್ಧಾರಗಳು ಬರುತ್ತವೆ ಎಂದರು.

ಸಿಎಂ ಆಗಲು ವಿಜಯ್ ರೂಪಾನಿಯವರಿಗೆ ಪಕ್ಷ ಅವಕಾಶ ಕೊಟ್ಟಿತ್ತು. ಬೇರೆಯವರಿಗೂ ಪಕ್ಷ ಅವಕಾಶ ಕೊಡುತ್ತದೆ. ಕರ್ನಾಟಕದಲ್ಲಿ ಶಾಂತಿಯುತವಾಗಿಯೇ ಮುಖ್ಯಮಂತ್ರಿ ಬದಲಾವಣೆ ಆಯ್ತು. ಎಲ್ಲ ರಾಜ್ಯಗಳಲ್ಲೂ ಬದಲಾವಣೆ ಆಗುತ್ತದೆ. ಸಮಸ್ಯೆ, ಗೊಂದಲ ಇಲ್ಲ. ವರಿಷ್ಠರು ಕಾಲ ಕಾಲಕ್ಕೆ ನಿರ್ಧಾರ ತಗೋತಾರೆ ಎಂದು ತಿಳಿಸಿದರು.

ಇದನ್ನೂ ಓದಿ : ನಂಜನಗೂಡಿನಲ್ಲಿ ದೇವಸ್ಥಾನ ನೆಲಸಮ... ಬಿಜೆಪಿಗೆ ಹಿಂದುತ್ವ ರಕ್ಷಣೆಯ ನೆ‌ನಪಾಗಲಿಲ್ಲವೇ?: ಸಿದ್ದರಾಮಯ್ಯ ಕಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.