ETV Bharat / state

ಚಂದ್ರು ಹತ್ಯೆ ಪ್ರಕರಣ : ಹೀಗಿದೆ ಗೃಹ ಸಚಿವ ಆರಗ ಜ್ಞಾನೇಂದ್ರ, ಸಿಟಿ ರವಿ ಪ್ರತಿಕ್ರಿಯೆ - Minister Araga Jnanendra reacts

ಕಾಂಗ್ರೆಸ್ ಮತ್ತು‌ ಜೆಡಿಎಸ್‌ನವರು ಅಲ್ಪಸಂಖ್ಯಾತರ ಮತಗಳಿಗೆ ಬಲೆ ಬೀಸಿ‌ ಕೂತಿದ್ದಾರೆ. ಅವರಿಗೆ ಬೇರೇನೂ ಬೇಡ. ಜನರ ನೆಮ್ಮದಿ ಬೇಕಾಗಿಲ್ಲ. ಜನಕ್ಕೆ ಸತ್ಯ ಹೇಳೋದು ಬೇಕಾಗಿಲ್ಲ. ಎರಡೂ ಪಕ್ಷದವರು ಓಲೈಕೆ ರಾಜಕಾರಣದಲ್ಲಿ ಕಳೆದು ಹೋಗುತ್ತಿದ್ದಾರೆ ಎಂದರು..

Araga Jnanendra, CT Ravi
ಗೃಹ ಸಚಿವ ಆರಗ ಜ್ಞಾನೇಂದ್ರ, ಸಿಟಿ ರವಿ
author img

By

Published : Apr 6, 2022, 12:51 PM IST

ಬೆಂಗಳೂರು : ಚಂದ್ರು ಹತ್ಯೆ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ. ಆರೋಪಿಗಳು ಉರ್ದು ಮಾತನಾಡಲು ಹೇಳಿದ್ದಾರೆ. ಆದರೆ, ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಎಂದಿದ್ದಾನೆ. ಅದಕ್ಕೆ ಆತನನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ. ಆತ ದಲಿತ ಹುಡುಗ. ಪ್ರಕರಣ ಸಂಬಂಧ ಪೊಲೀಸರು ಕೆಲವರನ್ನ ಬಂಧಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ(ಮಂಗಳವಾರ) ನಡೆದ ಚಂದ್ರು ಹತ್ಯೆ ಪ್ರಕರಣ ಕುರಿತು ಎಲ್ಲಾ ಮಾಹಿತಿ ತೆಗೆದುಕೊಂಡಿದ್ದೇವೆ. ಅಮಾನುಷವಾಗಿ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾರೆ. ಕೆಲ ಆರೋಪಿಗಳ ಬಂಧಿಸಿದ್ದು ಪ್ರಕರಣದ ತನಿಖೆಯಾಗುತ್ತಿದೆ ಎಂದರು.

ಹಿಂದೂ ಪರ ಸಂಘಟನೆಗಳಿಂದ ಮುಸ್ಲಿಂ ವ್ಯಾಪಾರ ನಿರ್ಬಂಧ ಅಭಿಯಾನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅಲ್ಲಲ್ಲಿ ಅನೇಕ‌ ಹೇಳಿಕೆಗಳು ಬರುತ್ತಿವೆ. ಹಿಜಾಬ್‌ನಿಂದ ಪ್ರಾರಂಭವಾಗಿ ಬೇರೆ ಬೇರೆ ವಿಚಾರಗಳ ಚರ್ಚೆ ನಡೆಯುತ್ತಿದೆ. ಇವುಗಳಿಂದ ಕಾನೂನು ಸುವ್ಯವಸ್ಥೆಗೆ ಭಂಗ ಬಂದರೆ ಗೃಹ ಇಲಾಖೆಯಿಂದ ಕ್ರಮಕೈಗೊಳ್ಳಲಾಗುತ್ತದೆ. ಕಾನೂನು ಸುವ್ಯವಸ್ಥೆ ಹದಗೆಡುವ ಯಾವುದೇ ವಿಚಾರವಿದ್ದರೂ ಕ್ರಮ ಖಚಿತ. ಸರ್ಕಾರ, ಗೃಹ ಇಲಾಖೆ ಎಲ್ಲದರ ಮೇಲೆ ಕಣ್ಣಿಟ್ಟಿದೆ ಎಂದರು.

ಚಂದ್ರು ಹತ್ಯೆ ಪ್ರಕರಣ.. ಮಾಜಿ ಸಚಿವ ಸಿ ಟಿ ರವಿ ಪ್ರತಿಕ್ರಿಯೆ ನೀಡಿರುವುದು..

ಕಾಂಗ್ರೆಸ್ ಮತ್ತು‌ ಜೆಡಿಎಸ್‌ನವರು ಅಲ್ಪಸಂಖ್ಯಾತರ ಮತಗಳಿಗೆ ಬಲೆ ಬೀಸಿ‌ ಕೂತಿದ್ದಾರೆ. ಅವರಿಗೆ ಬೇರೇನೂ ಬೇಡ. ಜನರ ನೆಮ್ಮದಿ ಬೇಕಾಗಿಲ್ಲ. ಜನಕ್ಕೆ ಸತ್ಯ ಹೇಳೋದು ಬೇಕಾಗಿಲ್ಲ. ಎರಡೂ ಪಕ್ಷದವರು ಓಲೈಕೆ ರಾಜಕಾರಣದಲ್ಲಿ ಕಳೆದು ಹೋಗುತ್ತಿದ್ದಾರೆ ಎಂದರು.

ಇದನ್ನೂ ಓದಿ: ಬೆಂಗಳೂರು: ತಡರಾತ್ರಿ ಅಪರಿಚಿತರಿಂದ ಯುವಕನ ಕೊಲೆ

ಕನ್ನಡ ಕಾರಣದಿಂದ ಕೊಲೆಯಾಗಿದ್ದರೆ ಪಾಕಿಸ್ತಾನಕ್ಕೆ ಓಡಿಸಿ : ಕನ್ನಡ ಕಾರಣಕ್ಕೆ ಚಂದ್ರು ಕೊಲೆಯಾಗಿದ್ದರೆ ಅಪರಾಧಿಗಳನ್ನು ಪಾಕಿಸ್ತಾನಕ್ಕೆ ಓಡಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಗ್ರಹಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರು ಮಾವು ತೆಗೆದುಕೊಳ್ಳದಂತೆ ಅಭಿಯಾನ ನಡೆಯುತ್ತಿದೆ. ಈ ರೀತಿಯ‌ ನಿಲುವನ್ನು ನಮ್ಮ ಪಕ್ಷ ಸಮರ್ಥಿಸಿಕೊಳ್ಳುವುದಿಲ್ಲ.

ಆದರೆ, ದುಃಖದ ಸಂಗತಿ ಏನು ಅಂದರೆ ಕನ್ನಡ ಮಾತಾಡಿದ ಅಂತಾ ಚಂದ್ರು ಹತ್ಯೆಯಾಗಿದೆ. ಯಾವ ದೇಶದಲ್ಲಿ ನಾವು ಇದ್ದೇವೆ. ವ್ಯಕ್ತಿಗತ ಆಧಾರದಲ್ಲಿ ನೋಡಬಾರದು. ಇದರ ಹಿಂದೆ ಪ್ರಚೋದನೆಕಾರಿಯಾದ ಅಂಶ ಇದೆ. ಇವತ್ತು ಗೋರಿಪಾಳ್ಯದಲ್ಲಿ ನಡೆದಿದೆ. ಮೊನ್ನೆ ಕಾಶ್ಮೀರದಲ್ಲಿ ನಡೆದಿದ್ದು, ನಾಳೆ ದೇಶದ ಯಾವ ಭಾಗದಲ್ಲಾದರೂ ನಡೆಯಬಹುದು.

ಇದನ್ನು ನಾನು ಖಂಡಿಸುತ್ತೇನೆ. ಇದರ ಬಗ್ಗೆ ಬುದ್ದಿ ಜೀವಿಗಳು ಮೌನವಾಗಿದ್ದಾರೆ. ಸತ್ತವನು ಹಿಂದೂ ಆದರೆ ಅವರ ಕಣ್ಣಲ್ಲಿ ಕಣ್ಣೀರು ಬರೋದಿಲ್ಲ. ಸತ್ತವರು ಹಿಂದೂ ಆದರೆ ಸಿದ್ದರಾಮಯ್ಯ ಸಂತಾಪ ಸೂಚಿಸುವುದಿಲ್ಲ. ಅವರ ಆಷಾಢಭೂತಿತನಕ್ಕೆ ನಾನು ಧಿಕ್ಕಾರ ಹೇಳುತ್ತೇನೆ ಎಂದು ಸಿದ್ದರಾಮಯ್ಯ ವಿರುದ್ದ ಸಿ.ಟಿ ರವಿ ಕಿಡಿಕಾರಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವಕನ ಕೊಲೆ: ಶಾಹಿದ್ ಹೆಸರಿನ ಮೂವರು ಆರೋಪಿಗಳು ಪೊಲೀಸರ ವಶಕ್ಕೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.