ETV Bharat / state

ಕೊಲೆ ಆರೋಪಿಗಳಲ್ಲಿ ಮೂವರು ಶಿವಮೊಗ್ಗದವರು, ಇಬ್ಬರ ಬಗ್ಗೆ ಶೋಧ ನಡೆಯುತ್ತಿದೆ: ಗೃಹ ಸಚಿವ ಆರಗ - ಶಿವಮೊಗ್ಗ ಹರ್ಷ ಕೊಲೆ ಪ್ರಕರಣ

ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ ಸಂಬಂಧ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂಧಿಸಿರುವವರಲ್ಲಿ ಮೂವರು ಶಿವಮೊಗ್ಗದವರಾಗಿದ್ದಾರೆ. ಇಬ್ಬರಿಗಾಗಿ ಶೋಧ ನಡೆಸುತ್ತಿದೆ ಎಂದಿದ್ದಾರೆ..

Minister Araga Jnanendra gave information about shimoga youth murder case
ಶಿವಮೊಗ್ಗ ಹರ್ಷ ಕೊಲೆ ಪ್ರಕರಣ ಸಂಬಂಧ ಸಚಿವ ಆರಗ ಜ್ಞಾನೇಂದ್ರ ಮಾಹಿತಿ
author img

By

Published : Feb 21, 2022, 7:43 PM IST

Updated : Feb 21, 2022, 8:34 PM IST

ಬೆಂಗಳೂರು : ಹಿಂದುಪರ ಸಂಘಟನೆಯ ಯುವಕ ಹರ್ಷನ ಕೊಲೆ ಕೇಸ್​ನಲ್ಲಿ ಬಂಧನ ಆಗಿರುವವರಲ್ಲಿ ಮೂವರು ಶಿವಮೊಗ್ಗದವರಾಗಿದ್ದಾರೆ. ಇಬ್ಬರ ಬಗ್ಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಹರ್ಷ ಕೊಲೆ ಪ್ರಕರಣ ಸಂಬಂಧ ಸಚಿವ ಆರಗ ಜ್ಞಾನೇಂದ್ರ ಮಾಹಿತಿ

ಶಕ್ತಿಭವನದಲ್ಲಿ ಸಿಎಂ ಭೇಟಿಯಾಗಿ ಮಾತನಾಡಿದ ಅವರು, ಶಿವಮೊಗ್ಗ ಘಟನೆ ಬಗ್ಗೆ ಸಿಎಂಗೆ ವಿವರಣೆ ಕೊಟ್ಟಿದ್ದೇನೆ. ಮತ್ತೆ ಸಭೆ ಸೇರೋಣ ಎಂದು ಅವರು ಹೇಳಿದ್ದಾರೆ. ಪೊಲೀಸರು ಇಬ್ಬರ ಬಗ್ಗೆ ಶೋಧ ನಡೆಸಿದ್ದಾರೆ. ಇದರ ಹಿಂದೆ ಇನ್ನಷ್ಟು ಜಾಲ ಇರುವ ಬಗ್ಗೆಯೂ ತನಿಖೆ ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ 5 ಮಂದಿ ಅಂತಾ ಕಾಣುತ್ತಿದೆ. ಹಿಜಾಬ್ ಪ್ರಕರಣಕ್ಕೂ ಇದಕ್ಕೂ ಲಿಂಕ್ ಇದ್ಯಾ ಎಂಬುದರ ಬಗ್ಗೆಯೂ ತನಿಖೆ ಮಾಡುತ್ತಿದ್ದಾರೆ ಎಂದರು.

ಪೊಲೀಸರು ಸಂಯಮದಿಂದ ವರ್ತಿಸಿದ್ದಾರೆ. ಒಂದು ವೇಳೆ ಫೈರ್ ಮಾಡಿದ್ರೆ ಇನ್ನೊಂದು ನಾಲ್ಕು ಹೆಣಗಳು ಬೀಳುತ್ತಿದ್ದವು. ಆ ಕೆಲಸ‌ವನ್ನು ನಮ್ಮ ಪೊಲೀಸರು ಮಾಡಲಿಲ್ಲ. ಸಂಯಮ ಕಾಯ್ದುಕೊಂಡಿದ್ದಾರೆ. ಸಂಯಮ ಮೀರಿ ವರ್ತಿಸಿ ಫೈರಿಂಗ್ ಮತ್ತು ಲಾಠಿಚಾರ್ಜ್​​ ಮಾಡಿದರೆ ಇನ್ನಷ್ಟು ಅನಾಹುತಗಳು ಸಂಭವಿಸುತ್ತಿತ್ತು ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಶಾಲಾ ಕಾಲೇಜು ಆರಂಭ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಪರಿಸ್ಥಿತಿ ನೋಡಿಕೊಂಡು ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು. ಯುವಕನ ಕೊಲೆ ಪ್ರಕರಣವನ್ನು ಎನ್​​ಐಎ ತನಿಖೆಗೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, ಹಿರಿಯ ಪೊಲೀಸ್​​ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಧಿಕಾರಿಗಳು ನೀಡುವ ವರದಿ ನೋಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಎಸ್​​​​ಡಿಪಿಐ, ಪಿಎಫ್​​ಐ ಬ್ಯಾನ್ ವಿಚಾರವಾಗಿ ಮಾತನಾಡಿ, ಅದಕ್ಕೆ ಆದ ಕಾನೂನು ಇದೆ. ಸಮಯಾವಕಾಶ ನೋಡಿಕೊಂಡು ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ, ಎಚ್ಚರದಿಂದ ಇರುವಂತೆ ಎಲ್ಲಾ ಜಿಲ್ಲಾ ಎಸ್ಪಿಗಳಿಗೆ ಸೂಚನೆ ನೀಡಲಾಗಿದೆ. ಜನರು ಭಾವುಕತೆಗೆ ಒಳಗಾಗಬಾರದು ಎಂದು ಗೃಹ ಸಚಿವರು ಮನವಿ ಮಾಡಿದರು.

ಇದನ್ನೂ ಓದಿ: ಶಿವಮೊಗ್ಗ ಹರ್ಷ ಕೊಲೆ ಪ್ರಕರಣ: ಎನ್ಐಎ ತನಿಖೆಗೆ ವಿಶ್ವ ಹಿಂದೂ ಪರಿಷತ್​ ಆಗ್ರಹ

Last Updated : Feb 21, 2022, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.