ETV Bharat / state

ಡಿಕೆಶಿ ಭೇಟಿ ರಾಜಕೀಯ ಕಾರಣಕ್ಕಲ್ಲ.. ಈ ರೀತಿ ಬಿಂಬಿಸಲಾಗುತ್ತಿದೆ ಎಂದು ಗೊತ್ತಿದ್ರೆ ನಾ ಹೋಗುತ್ತಲೇ ಇರಲಿಲ್ಲ: ಸಚಿವ ಆನಂದ್ ಸಿಂಗ್ - ಡಿಕೆಶಿ ನಿವಾಸಕ್ಕೆ ಆನಂದ್​ ಸಿಂಗ್ ಭೇಟಿ

ನನಗೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದ ವಿಚಾರವಾಗಿ ಯಾವುದೇ ಅಸಮಾಧಾನ ಇಲ್ಲ. ಅಸಮಾಧಾನ ಇದೆ ಎಂದು ನಾನು ಹೇಳಿದ್ದೇನಾ? ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪ್ರಶ್ನಿಸಿದ್ದಾರೆ..

Minister-Anand-sing
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತನಾಡಿದರು
author img

By

Published : Jan 31, 2022, 6:49 PM IST

ಬೆಂಗಳೂರು : ಸಂಗಮದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಮಾಡುವ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಲು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದೇನೆ ಹೊರತು ಬೇರೆ ಯಾವುದೇ ರೀತಿಯ ರಾಜಕೀಯ ಕಾರಣ ಇಲ್ಲ. ಈ ರೀತಿಯಲ್ಲಿ ಸುದ್ದಿಯಾಗಲಿದೆ ಎನ್ನುವುದು ಗೊತ್ತಿದ್ದರೆ ಡಿಕೆಶಿ ನಿವಾಸಕ್ಕೆ ಭೇಟಿ ನೀಡುತ್ತಲೇ ಇರಲಿಲ್ಲ ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಡಿಕೆಶಿ ಭೇಟಿ ಮಾಡಿರೋ ಕುರಿತಂತೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸ್ಪಷ್ಟನೆ ನೀಡಿರುವುದು..

ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಅವರ ಮನೆಗೆ ಹೋಗಬಾರದಾ?. ನೀವೇ ಹೇಳಿ. ನಾನು ಏಕೆ ಹೋಗಿದ್ದೆ ಎಂದು ಅವರೇ ಹೇಳಿದ್ದಾರೆ. ಅದರಲ್ಲಿ ಬೇರೆ ಏನಿಲ್ಲ. ಮುನಿರೆಡ್ಡಿಪಾಳ್ಯದಲ್ಲಿ ನಮ್ಮ ಅಳಿಯನ ಮನೆಗೆ ತಿಂಡಿಗೆ ಖಾಸಗಿ ಕಾರಿನಲ್ಲಿ ಹೋಗಿದ್ದೆ.

ಈ ವೇಳೆ ಡಿ. ಕೆ ಶಿವಕುಮಾರ್ ಅವರು ಫೋನ್ ಮಾಡಿದ್ದರು. ಕಾವೇರಿ ಆರತಿ ಬಗ್ಗೆ ವಿಷಯ ಪ್ರಸ್ತಾಪ ಮಾಡಿದರು. ಮನೆಗೆ ಬನ್ನಿ ಮಾತಾಡೋಣ ಅಂದರು. ಹೀಗಾಗಿ, ಖಾಸಗಿ ಕಾರಿನಲ್ಲೇ ಹೋಗಿದ್ದೆ. ಅದನ್ನೇ ಮಾಧ್ಯಮಗಳಲ್ಲಿ ದೊಡ್ಡ ವಿಚಾರ ಮಾಡಲಾಗಿದೆ. ಆ ರೀತಿ ಏನೂ ಇಲ್ಲ ಎಂದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ನನಗೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದ ವಿಚಾರವಾಗಿ ಯಾವುದೇ ಅಸಮಾಧಾನ ಇಲ್ಲ. ಅಸಮಾಧಾನ ಇದೆ ಎಂದು ನಾನು ಹೇಳಿದ್ದೇನಾ?. ನೀವೇ ಏನೇನೋ ಮಾಡಿದರೆ ಹೇಗೆ?, ಕೊಪ್ಪಳಕ್ಕೆ ಸಂತೋಷದಿಂದ ಹೋಗಿದ್ದೇನೆ.

ಮಾಧ್ಯಮಗಳು ನಾನು ಡಿಕೆಶಿ ನಿವಾಸಕ್ಕೆ ಭೇಟಿ ನೀಡಿದ ವಿಚಾರವನ್ನ ಈ ರೀತಿ ಬಿಂಬಿಸಲಾಗುತ್ತದೆ ಎಂದು ಗೊತ್ತಿದ್ದರೆ, ನಾನು ಹೋಗುತ್ತಿರಲಿಲ್ಲ. ಸಂಗಮದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಮಾಡುವ ವಿಚಾರ ಬಿಟ್ಟರೆ ರಾಜಕೀಯವಾಗಿ ಏನೂ ಚರ್ಚೆ ಮಾಡಿಲ್ಲ ಎಂದು ಆನಂದ್ ಸಿಂಗ್ ತಿಳಿಸಿದರು.

ಓದಿ: ಬೀದಿಬದಿ ಆಹಾರ ಪದಾರ್ಥ ಮಾರಾಟ ವ್ಯಾಪಾರಿಗಳಿಗೆ ತರಬೇತಿ, ಪ್ರಮಾಣ ಪತ್ರ : ಬಿಬಿಎಂಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.