ETV Bharat / state

ಊರಿಗೆ ಸೇರುವ ಹಂಬಲ: ಬೆವರಿನ ಹಣವೆಲ್ಲ ಪ್ರಯಾಣಕ್ಕೆ ಸುರಿಯುತ್ತಿರುವ ಕಾರ್ಮಿಕರು - ರಾಜ್ಯ ಸರ್ಕಾರ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಊರಿಗೆ ವಾಪಸ್ಸಾಗಲು ಇಚ್ಚಿಸುತ್ತಿರುವ ಕಾರ್ಮಿಕರನ್ನು ಕಳುಹಿಸಿಕೊಡಲು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಹಾಗಿದ್ದೂ ಕೆಲ ವಲಸೆ ಕಾರ್ಮಿಕರು ತುರ್ತಾಗಿ ಊರುಗಳನ್ನು ಸೇರಿಕೊಳ್ಳಲು ತಾವು ದುಡಿದ ಹಣವವನ್ನೆಲ್ಲಾ ಖರ್ಚು ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಕೈಯಲ್ಲಿದ್ದ ಹಣವನ್ನೆಲ್ಲ ಖರ್ಚು ಮಾಡಿಕೊಳ್ಳದೆ ಸರ್ಕಾರ ಕಲ್ಪಿಸುವ ಸಾರಿಗೆ ಮೂಲಕವೇ ಊರು ಸೇರಿಕೊಳ್ಳುವ ಆಲೋಚನೆಯಲ್ಲಿ ನಿರಾಶ್ರಿತರ ಶಿಬಿರಗಳಲ್ಲಿ ಕಾಯುತ್ತಾ ಕುಳಿತಿದ್ದಾರೆ.

migrant workers
ಕಾರ್ಮಿಕರು
author img

By

Published : Jun 5, 2020, 12:02 AM IST

ಬೆಂಗಳೂರು: ನಾಲ್ಕು ಕಾಸು ಸಂಪಾದಿಸುವ ಆಸೆಯಿಟ್ಟುಕೊಂಡು ನಗರಕ್ಕೆ ಬಂದಿದ್ದ ವಲಸೆ ಕಾರ್ಮಿಕರು ಇದೀಗ ದುಡಿದ ಹಣವನ್ನೆಲ್ಲಾ ಮತ್ತೆ ತಮ್ಮ ಊರಿಗೆ ವಾಪಸ್ಸಾಗಲು ಖರ್ಚು ಮಾಡುತ್ತಿದ್ದಾರೆ.

ಲಾಕ್​ಡೌನ್ ಬಳಿಕ ಕೆಲಸವು ಇಲ್ಲದೆ, ಸಂಪಾದನೆಯೂ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ಸೋಂಕು ತಮ್ಮನ್ನು ಸೋಕುವ ಮುನ್ನ ತಮ್ಮ ಊರುಗಳಿಗೆ ವಾಪಸ್​ ಆಗಬೇಕು ಎಂದು ಹಂಬಲಿಸುತ್ತಿದ್ದಾರೆ. ಅದಕ್ಕಾಗಿ ತಾವು ಈವರೆಗೆ ದುಡಿದ ಹಣವನ್ನೆಲ್ಲಾ ಖರ್ಚು ಮಾಡಲು ಮುಂದಾಗಿದ್ದಾರೆ. ಖಾಸಗಿ ಬಸ್​, ಟ್ಯಾಕ್ಸಿಗಳ ಮೂಲಕ ಊರು ತಲುಪಲು ಮಾಮೂಲಿ ದರಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಹಣ ಕೊಡುತ್ತಿದ್ದಾರೆ. ಹೀಗೆ ತಾವು ದುಡಿದ ಅಲ್ಪ ಸ್ವಲ್ಪ ಹಣವನ್ನು ಊರಿಗೆ ವಾಪಸ್ ಆಗಲಿಕ್ಕೆ ಖರ್ಚು ಮಾಡುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದಾದರೂ ಚಾಲಕ ಮತ್ತು ಪ್ರಯಾಣಿಕರ ನಡುವಿನ ಒಪ್ಪಂದದಿಂದ ಸಾಧ್ಯವಾಗುತ್ತಿಲ್ಲ.

ಊರಿಗೆ ಹೋಗುವ ಆಸೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಂತು ಅಂತರ್​ ರಾಜ್ಯ ಸರಕು ಸಾಗಣೆ ವಾಹನಗಳಿಗೆ ಕೈ ಬೀಸುತ್ತಿದ್ದಾರೆ. ತಾವು ತಲುಪು ಬೇಕಿರುವ ರಾಜ್ಯದ ಮಾಹಿತಿ ನೀಡಿ ಚಾಲಕರು ಕೇಳಿದಷ್ಟು ಹಣ ನೀಡಿ ಅವರೊಂದಿಗೆ ತೆರಳುತ್ತಿದ್ದಾರೆ. ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮೂಲದ ವಲಸೆ ಕಾರ್ಮಿಕರು ಟ್ರಕ್​ಗಳ ಜೊತೆಗೆ ಟ್ಯಾಕ್ಸಿಗಳ ಮೂಲಕವೂ ಊರಿಗೆ ಹೋಗುತ್ತಿದ್ದಾರೆ. ಆದರೆ ಉತ್ತರ ಭಾರತ ಮೂಲದ ಒಡಿಶಾ, ಬಿಹಾರ, ಉತ್ತರ ಪ್ರದೇಶ, ಅಸ್ಸೋಂ ನಂತಹ ದೂರದ ರಾಜ್ಯಗಳಿಗೆ ತೆರಳಲು ಕಾರ್ಮಿಕರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ಸಾರ್ವಜನಿಕ ಬಸ್ ಅಥವಾ ರೈಲುಗಳ ಮೂಲಕ ತಮ್ಮ ಊರುಗಳಿಗೆ ಯಾವಾಗ ಕಳುಹಿಸಿಕೊಡುತ್ತದೆ ಎಂದು ನಿರಾಶ್ರಿತರ ಶಿಬಿರಗಳಲ್ಲಿ ಕಾಯುತ್ತಾ ಕುಳಿತಿದ್ದಾರೆ.

ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಮತ್ತು ಗೌರವಯುತವಾಗಿ ಅವರ ಊರುಗಳಿಗೆ ಕಳುಹಿಸಿಕೊಡಬೇಕೆಂದು ಪ್ರತಿ ಪಕ್ಷಗಳು ಆಗ್ರಹಿಸುತ್ತಿವೆ. ಹೈಕೋರ್ಟ್ ಕೂಡ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡುತ್ತಿದೆ. ರಾಜ್ಯ ಸರ್ಕಾರ ವಲಸೆ ಕಾರ್ಮಿಕರನ್ನು ರೈಲು ಮತ್ತು ಬಸ್​ಗಳ ಮೂಲಕ ಕಳುಹಿಸಲು ಅಗತ್ಯ ವ್ಯವಸ್ಥೆ ಮಾಡುತ್ತಿದೆ. ಅದಕ್ಕಾಗಿಯೇ ರಾಜ್ಯದಿಂದ ಹೊರಹೋಗುವ ಕಾರ್ಮಿಕರು ತಮ್ಮ ಹೆಸರುಗಳನ್ನು ಸೇವಾಸಿಂಧು ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದೆ.

ಕಷ್ಟಪಟ್ಟು ದುಡಿದಿರುವ ಹಣವನ್ನು ಪ್ರಯಾಣಕ್ಕೆ ಕರ್ಚು ಮಾಡಲು ಮನಸ್ಸು ಒಪ್ಪದ ಕಾರ್ಮಿಕರು ಸರ್ಕಾರ ಕಲ್ಪಿಸುವ ರೈಲು ಬಸ್​ಗಳಲ್ಲೇ ಊರು ತಲುಪಲು ನಿರ್ಧರಿಸಿದ್ದಾರೆ. ಹೀಗೆ ತಮ್ಮ ಊರು ತಲುಪಲು 12 ಲಕ್ಷಕ್ಕೂ ಅಧಿಕ ಜನ ತಮ್ಮ ಹೆಸರು ಮತ್ತು ವಿವರಗಳನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಹೀಗೆ ನೋಂದಾಯಿಸಿಕೊಂಡ ವಲಸೆ ಕಾರ್ಮಿಕರಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ 200 ರೈಲುಗಳ ಮೂಲಕ ಊರು ಸೇರಿದ್ದಾರೆ. ಸರ್ಕಾರ ಸಾವಿರಕ್ಕೂ ಹೆಚ್ಚು ಬಸ್​ಗಳ ಮೂಲಕ ಸುಮಾರು 30 ಸಾವಿರ ಕಾರ್ಮಿಕರನ್ನು ಕಳುಹಿಸಿಕೊಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.