ಬೆಂಗಳೂರು: 2021ರ ಡಿಸೆಂಬರ್ 22ರಂದು ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದ ಕಡೆಗೆ ಸುರಂಗ ಮಾರ್ಗವನ್ನು ಪ್ರಾರಂಭಿಸಿರುವ ಉರ್ಜಾ ಟಿಬಿಎಂ 900 ಮೀ. ಸುರಂಗ ಮಾರ್ಗವನ್ನು ಪೂರ್ಣಗೊಳಿಸಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಸುಮಾರು 6 ತಿಂಗಳ ನಂತರ ಶುಕ್ರವಾರ 900 ಮೀಟರ್ ಸುರಂಗ ಕೊರೆದು ಉರ್ಜಾ ಟಿಬಿಎಂ ಹೊರ ಬಂದಿದೆ.
2021ರ ಡಿಸೆಂಬರ್ 22ರಂದು ಕಂಟೋನ್ಮೆಂಟ್ ನಿಲ್ದಾಣದಿಂದ ಆರಂಭಿಸಿ, ಪಾಟರಿ ಟೌನ್ ನಿಲ್ದಾಣದ ಕಡೆ ಸುರಂಗ ಪ್ರವೇಶಿಸಿತ್ತು. ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಸುರಂಗ ಮಾರ್ಗ ಇದಾಗಿದೆ. ಶಿವಾಜಿನಗರದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ಸ್ಟೇಷನ್ ಬಳಿ ಬ್ರೇಕ್ ಥ್ರೂ ಆಗಿತ್ತು. ಮೊದಲ ಊರ್ಜಾ ಬ್ರೇಕ್ ಥ್ರೂ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ವೀಕ್ಷಿಸಿದ್ದರು ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ
ಇದನ್ನೂ ಓದಿ: ಇಂದಿನಿಂದ ಮಹಾನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ; ನಿಯಮ ಮೀರಿದರೆ ದಂಡವೆಷ್ಟು ಗೊತ್ತಾ?!