ETV Bharat / state

ಮೇಕೆದಾಟು ಯೋಜನೆಗೆ ನೂರೆಂಟು ವಿಘ್ನ: ಯೋಜನೆ ಸುಗಮ ಅನುಷ್ಠಾನಕ್ಕೆ ಉಳಿದಿರುವ ಅಡೆತಡೆಗಳೇನು? - Environmental Impact Plan

ಮೇಕೆದಾಟು ಯೋಜನೆ ರಾಜ್ಯದ ಬಹು ನಿರೀಕ್ಷಿತ ಯೋಜನೆಯಾಗಿದೆ. ತಮಿಳುನಾಡಿನ ತೀವ್ರ ವಿರೋಧದ ಮಧ್ಯೆ ಭಾರೀ ಚರ್ಚೆಗೆ ಗ್ರಾಸವಾದ ಯೋಜನೆ ಮೇಕೆದಾಟು ಯೋಜನೆ. ಆದರೆ, ಈ ಯೋಜನೆ ಜಾರಿಗೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿವೆ. ಎಲ್ಲ ಸರ್ಕಾರಗಳು ಯೋಜನೆ ಮುಂದಿರುವ ಅಡೆತಡೆಗಳನ್ನು ಒಂದೊಂದಾಗಿ ನಿವಾರಿಸುತ್ತಾ ಬಂದಿವೆ. ಆದರೂ ಇನ್ನೂ ಯೋಜನೆ ಹಾದಿಯಲ್ಲಿ ಕೆಲ ಅಡೆತಡೆಗಳು ಉಳಿದುಕೊಂಡಿವೆ.

ಅಡೆತಡೆ
ಅಡೆತಡೆ
author img

By

Published : Jun 21, 2021, 4:46 PM IST

ಬೆಂಗಳೂರು: ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆ‌ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಯೋಜನೆ ಎದುರಿಗಿರುವ ಹಲವು ಅಡ್ಡಿಗಳಲ್ಲಿ ಎನ್​ಜಿಟಿ ಕಳೆದ ವಾರವಷ್ಟೇ ಒಂದನ್ನು ಇತ್ಯರ್ಥ ಮಾಡಿದೆ. ಸದ್ಯ ಮೇಕೆದಾಟು ಯೋಜನೆಯ ಸುಗಮ ಅನುಷ್ಠಾನದ ಹಾದಿಯಲ್ಲಿ ಇನ್ನೂ ಕೆಲ ಅಡೆತಡೆಗಳು ಉಳಿದು ಕೊಂಡಿವೆ.

ಮೇಕೆದಾಟು ಯೋಜನೆ ರಾಜ್ಯದ ಬಹು ನಿರೀಕ್ಷಿತ ಯೋಜನೆಯಾಗಿದೆ. ತಮಿಳುನಾಡಿನ ತೀವ್ರ ವಿರೋಧ ಮಧ್ಯೆ ಭಾರೀ ಚರ್ಚೆಗೆ ಗ್ರಾಸವಾದ ಯೋಜನೆ ಮೇಕೆದಾಟು ಯೋಜನೆ. ಆದರೆ ಈ ಯೋಜನೆ ಜಾರಿಗೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿವೆ. ಎಲ್ಲ ಸರ್ಕಾರಗಳು ಯೋಜನೆ ಮುಂದಿರುವ ಅಡೆತಡೆಗಳನ್ನು ಒಂದೊಂದಾಗಿ ನಿವಾರಿಸುತ್ತಾ ಬಂದಿವೆ. ಆದರೂ ಇನ್ನೂ ಯೋಜನೆ ಹಾದಿಯಲ್ಲಿ ಕೆಲ ಅಡೆತಡೆಗಳು ಉಳಿದು ಕೊಂಡಿವೆ.

ಏನಿದು ಮೇಕೆದಾಟು ಯೋಜನೆ?:
ಇದು ಕುಡಿಯುವ ನೀರು ಹಾಗೂ ವಿದ್ಯುತ್‌ ಉತ್ಪಾದನೆ ಉದ್ದೇಶಕ್ಕಾಗಿ 9,000 ಕೋಟಿ ರೂ. ವೆಚ್ಚದ ಅಣೆಕಟ್ಟು ಯೋಜನೆಯಾಗಿದೆ. ರಾಮನಗರ ಜಿಲ್ಲೆಯ ಮುಗ್ಗೂರು ಅರಣ್ಯ ವಲಯದ ವಾಚಿಂಗ್‌ ಟವರ್‌ ಗುಡ್ಡೆಯಿಂದ ಹನೂರು ಅರಣ್ಯ ವಲಯದ ಗುಡ್ಡೆಯ ನಡುವೆ ಒಂಟಿಗುಂಡು ಸ್ಥಳದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣ ಆಗಲಿದೆ ಎನ್ನಲಾಗುತ್ತಿದೆ.

ಈ ಒಂಟಿಗುಂಡು ಸ್ಥಳ ಮೇಕೆದಾಟು ಮತ್ತು ಸಂಗಮದ ಮಧ್ಯದಲ್ಲಿದೆ. ಅಣೆಕಟ್ಟು ನಿರ್ಮಾಣವಾಗುವ ಸ್ಥಳದಿಂದ 2ಕಿ.ಮೀ ದೂರದಲ್ಲಿರುವ ಮೇಕೆದಾಟು ಬಳಿ ಜಲ ವಿದ್ಯುತ್‌ ಕೇಂದ್ರ ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ.

ಬೆಂಗಳೂರಿಗೆ ನೀರು ಒದಗಿಸಲು ಚಿಂತನೆ

5252.40 ಹೆಕ್ಟೇರ್ ಪ್ರದೇಶದಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಉದ್ದೇಶಿಸಲಾಗಿದೆ. 99 ಮೀಟರ್‌ ಎತ್ತರದ, 674.5 ಮೀಟರ್ ಉದ್ದದ ಅಣೆಕಟ್ಟೆಯಲ್ಲಿ 67.2 ಟಿಎಂಸಿ ನೀರು ಸಂಗ್ರಹಿಸುವ ಯೋಜನೆ ಇದಾಗಿದೆ. 4.75 ಟಿಎಂಸಿ ಹೆಚ್ಚುವರಿ ನೀರನ್ನು ಬೆಂಗಳೂರಿನ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲಾಗುವುದು. ಜೊತೆಗೆ 400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಗುರಿ ಹೊಂದಲಾಗಿದೆ.

ಯೋಜನೆಯಡಿ ಸುಪ್ರೀಂಕೋರ್ಟ್​ನಿಂದ ಹಂಚಿಕೆಯಾಗಿರುವ ಸುಮಾರು 24 ಟಿಎಂಸಿ ನೀರನ್ನು ಕುಡಿಯುವ ನೀರಿಗಾಗಿ ಬೆಂಗಳೂರು ನಗರಕ್ಕೆ ಮಾತ್ರ ಹಂಚಿಕೆ ಮಾಡಲಾಗಿದ್ದು, ನೀರಾವರಿ ಬಳಕೆಗೆ ಯಾವುದೇ ಅವಕಾಶ ಕಲ್ಪಿಸಿಲ್ಲ. ಯೋಜನೆಯ ಕಾರ್ಯಸಾಧು ವರದಿ ಪ್ರಕಾರ ಒಟ್ಟು 5252.40 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗುವ ಯೋಜನೆಗೆ 3181.9 ಹೆಕ್ಟೇರ್ ಕಾವೇರಿ ವನ್ಯಜೀವಿ ಅಭಯಾರಣ್ಯದ ಪ್ರದೇಶ ಬೇಕಾಗಿದೆ.

ಜೊತೆಗೆ 1869.5 ಹೆಕ್ಟೇರ್ ಅರಣ್ಯ ಭೂಮಿ ಸ್ವಾಧೀನ ಪಡಿಸಬೇಕಾಗಿದೆ. ಇನ್ನು 201 ಹೆಕ್ಟೇರ್ ಜಮೀನು ಕಂದಾಯ ಹಾಗೂ ಖಾಸಗಿ ಭೂಮಿಯಾಗಿದೆ. ಒಟ್ಟು 5 ಹಳ್ಳಿಗಳಾದ ಮಡವಾಳ, ಕೊಂಗೆದೊಡ್ಡಿ, ಸಂಗಮ, ಮುಥತ್ತಿ, ಬೊಮ್ಮಸಂದ್ರ ಮುಳುಗಡೆಯಾಗಲಿದೆ.

ಯೋಜನೆಯ ಸದ್ಯದ ಸ್ಥಿತಿಗತಿ ಹೇಗಿದೆ?:
ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆಯನ್ನು ನೀಡಿದೆ. ಮೇಕೆದಾಟು ಯೋಜನೆಯ 9,000 ಕೋಟಿ ರೂ. ಮೊತ್ತದ ವಿವರವಾದ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗದ ಅನುಮೋದನೆ ಕೋರಿ 18-01-2019ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಜಲ ಆಯೋಗವು 25-01-2019 ರ ಪತ್ರದಲ್ಲಿ ಮೇಕೆದಾಟು ಯೋಜನೆ ವಿವರವಾದ ಯೋಜನಾ ವರದಿಯನ್ನು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ಕಳುಹಿಸಿ ಅಭಿಪ್ರಾಯವನ್ನು ಕೋರಲಾಗಿದೆ.

ಯೋಜನೆಗೆ ಅವಶ್ಯವಿರುವ EIA & EMP ವರದಿಗಳನ್ನು ತಯಾರಿಸಲು Terms of Reference (TOR) ಅರ್ಜಿಯನ್ನು ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MOEF) ವೆಬ್ ಸೈಟ್ ನಲ್ಲಿ 20-06-2019ಗೆ ಅಪ್ಲೋಡ್​ ಮಾಡಲಾಗಿದೆ. ಅದರಂತೆ, ಈ ಪ್ರಸ್ತಾವನೆಯನ್ನು 19-07-2019 ರಂದು Expert Appraisal committee ಸಭೆಯಲ್ಲಿ ಸೂಚಿಸಿದಂತೆ ಹೆಚ್ಚುವರಿ ಮಾಹಿತಿಗಳನ್ನು 4-10-2019 ರಂದು MoEF ವೆಬ್ ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ‌ ಎಂದು ಜಲಸಂಪನ್ಮೂಲ ಇಲಾಖೆ ಮಾಹಿತಿ ನೀಡಿದೆ.

ಯೋಜನೆ ಮುಂದಿರುವ ಅಡ್ಡಿಗಳೇನು?:
ಸದ್ಯ ಸಮಗ್ರ ಯೋಜನಾ ವರದಿಯ ಪರಿಶೀಲನೆ ಕೇಂದ್ರ ಜಲ ಆಯೋಗದ ಮುಂದೆ ಇದೆ. ಹಾಗೆಯೇ ಅರಣ್ಯ ಮತ್ತು ಪರಿಸರ ಸಚಿವಾಲಯದ ಸಂಕೀರ್ಣ ಒಪ್ಪಿಗೆ ಪ್ರಕ್ರಿಯೆ ಇನ್ನೂ ಬಾಕಿ ಉಳಿದುಕೊಂಡಿದೆ.

ಕೇಂದ್ರ ಜಲ ಆಯೋಗದ CWMAಯಿಂದ ಪ್ರಸ್ತಾವನೆಗೆ ಅಗತ್ಯ ಷರಾಗಳನ್ನು ಪಡೆದು ಹಾಗೂ ಕೇಂದ್ರ ಜಲ ಆಯೋಗದ ವಿವಿಧ ನಿರ್ದೇಶನಾಲಯಗಳ ಅನುಮೋದನೆ ಪಡೆಯಬೇಕಿದೆ. ಯೋಜನೆಯಡಿ ಮುಳುಗಡೆಯಾಗಲಿರುವ ಒಟ್ಟಾರೆ ಪ್ರದೇಶದಲ್ಲಿ ಶೇ.96 ರಷ್ಟು ಅರಣ್ಯ ಪ್ರದೇಶವಿದ್ದು, ಅದರಲ್ಲಿ ಶೇ.63 ರಷ್ಟು ವನ್ಯಜೀವಿ ಅರಣ್ಯ ಪ್ರದೇಶವಿದೆ.

ಈ ಕುರಿತು ಪರಿಸರ ಪ್ರಭಾವದ ಮೌಲ್ಯಮಾಪನ (Environmental Impact Assessment) ಹಾಗೂ ಪರಿಸರಕ್ಕೆ ಉಂಟಾಗಬಹುದಾದ ಪರಿಸರ ಪ್ರಭಾವ ಪರಿಣಾಮಗಳ ಕುರಿತು Environmental Impact Plan ಅಧ್ಯಯನಗಳ ಉಲ್ಲೇಖಾ ನಿಬಂಧನೆಗಳು (Terms of Reference) ಪ್ರಸ್ತಾವನೆಯನ್ನು ಭಾರತ ಸರ್ಕಾರದ MOEFಗೆ ಕಳುಹಿಸಲಾಗಿದ್ದು, ಅನುಮೋದನೆ ಪಡೆಯಬೇಕಾಗಿದೆ.

ಸದ್ಯ ಯೋಜನೆ ಮುಂದಿರುವ ದೊಡ್ಡ ತೊಡಕು ಮೇಕೆದಾಟು ಯೋಜನೆ ಪ್ರಶ್ನಿಸಿ ತಮಿಳುನಾಡು ಸರ್ಕಾರ 2018ರಲ್ಲಿ ಸುಪ್ರೀಂಕೋರ್ಟ್​​ ನಲ್ಲಿ ಸಲ್ಲಿಸಿರುವ ಅರ್ಜಿ. ಸುಪ್ರೀಂ‌ಕೋರ್ಟ್ ನಲ್ಲಿ ಈ ಅರ್ಜಿ ವಿಚಾರಣೆ ಪ್ರಗತಿಯಲ್ಲಿದೆ. ತಮಿಳುನಾಡು ಸರ್ಕಾರದ ತೀವ್ರ ಆಕ್ಷೇಪವನ್ನು ರಾಜ್ಯದ ಕಾನೂನು ತಂಡ ನ್ಯಾಯಾಲಯದಲ್ಲಿ ಅಂಕಿ- ಅಂಶ ಸಮೇತವಾಗಿ ಸಮರ್ಥವಾಗಿ ಎದುರಿಸಬೇಕು. ವಾದ - ವಿವಾದ ನಡೆಯುತ್ತಿದ್ದು, ಈ ಅರ್ಜಿ ಇತ್ಯರ್ಥವಾಗಲು ಇನ್ನೂ ಕೆಲ ತಿಂಗಳು ಬೇಕಾಗಬಹುದು ಎಂದು ಜಲಸಂಪನ್ಮೂಲ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.