ETV Bharat / state

ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗರ ಸಭೆ: ಸಿಎಂ ಪಟ್ಟಕ್ಕೆ ಪರೋಕ್ಷವಾಗಿ ಸಮುದಾಯದ ಆಶೀರ್ವಾದ ಕೇಳಿದ ಡಿಕೆಶಿ

ಒಕ್ಕಲಿಗ ಮೀಸಲಾತಿ ಸಭೆಯಲ್ಲಿ ಸಿಎಂ ಪಟ್ಟಕ್ಕೆ ಆಶೀರ್ವಾದ ಮಾಡಿ ಎಂದು ಸಮುದಾಯವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಹೇಳಿದರು.

author img

By

Published : Nov 27, 2022, 5:27 PM IST

meeting-of-vokkaliga-for-increase-reservation
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಬೆಂಗಳೂರು: ಒಕ್ಕಲಿಗ ಮೀಸಲಾತಿ ಹೆಚ್ಚಳ ಹೋರಾಟ ಸಂಬಂಧ ಒಕ್ಕಲಿಗರ ಸಂಘದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಸಿಎಂ ಅವಕಾಶ ನೀಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಜತೆಗೂಡಿ ಮೀಸಲಾತಿಗೆ ಹೋರಾಡಬೇಕು. ನಮ್ಮ‌ ನಡುವಿನ ವೈಷಮ್ಯ ಮರೆತು ಹೋರಾಟ ಮಾಡಬೇಕು. ಒಗ್ಗಟ್ಟಿನಲ್ಲಿ ಯಶಸ್ಸಿದೆ, ಯಶಸ್ಸು ಸುಮ್ನೆ ಬರಲ್ಲ. ಸರ್ಕಾರ, ಪಕ್ಷಗಳ ನಿಲುವು ಅನೇಕ ಇರುತ್ತವೆ. ನಾವು ಯಾರ ಹಕ್ಕನ್ನೂ ಕೇಳುತ್ತಿಲ್ಲ. ಸಮುದಾಯದ ಜನಸಂಖ್ಯೆ ಆಧರಿಸಿ ಮೀಸಲಾತಿ ಕೊಡಿ ಅಷ್ಟೇ ಎಂದು ಆಗ್ರಹಿಸಿದರು.

ನಾವು ಯಾರ ಹಕ್ಕನ್ನೂ ಕಿತ್ತುಕೊಳ್ಳಲು ಇಲ್ಲಿ ಸಭೆ ಸೇರಿಲ್ಲ.‌ ನಾವು ಇದೇ ಜಾತಿಯಲ್ಲಿ ಹುಟ್ಬೇಕು ಅಂತ ಅರ್ಜಿ ಹಾಕಿ ಹುಟ್ಟಿಲ್ಲ. ಈ ಸಮುದಾಯದಲ್ಲಿ ಹುಟ್ಟಿದ್ದೇವೆ. ಸಮಾಜಕ್ಕೆ ಒಳ್ಳೆಯದನ್ನು ಮಾಡೋಣ. ನಮ್ಮನ್ನು ಒಕ್ಕಲಿಗರು ಅಂತನೇ ಗುರುತಿಸಿದ್ದಾರೆ ಎಲ್ಲರೂ. ವಿಶ್ವಮಾನವ ತತ್ವ ಇಲ್ಲಿ ಅಳವಡಿಸಲು ಆಗಲ್ಲ. ನನ್ನ ಸಮುದಾಯ ಗುರುತಿಸಿಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ನನ್ನ ಹಿನ್ನೆಲೆ, ಸಂಘಟನೆ ಎಲ್ಲ ನಂತರ. ಅಶೋಕ್​ಗೆ ಸಚಿವ ಸ್ಥಾನ ಸಿಕ್ಕಿದ್ದೂ ಸಮುದಾಯದಿಂದ. ನಮ್ಮ ಹಕ್ಕನ್ನು ನಾವು ಕೇಳ್ತಿದೀವಿ ಅಷ್ಟೇ ಎಂದರು.

ಸಿಎಂ ಪಟ್ಟಕ್ಕೆ ಪರೋಕ್ಷವಾಗಿ ಸಮುದಾಯದ ಆಶೀರ್ವಾದ ಕೇಳಿದ ಡಿಕೆಶಿ

ಸಿಎಂ ಮಾಡಿ ಎಂದು ಪರೋಕ್ಷವಾಗಿ ನುಡಿದ ಡಿಕೆಶಿ: ನಿಮ್ಮ ಶಕ್ತಿ ಉತ್ಸಾಹ ನೋಡಿದರೆ ವಿಧಾನಸೌಧಕ್ಕೆ ತೆಗೆದುಕೊಂಡು ಹೋಗಿ ಕೂರಿಸುವ ತಾಕತ್ತು ಇದೆ. ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಅದನ್ಮು ಕಳೆದುಕೊಳ್ಳಬೇಡಿ. ನಮಗೆ ಪೆನ್ನು ಪೇಪರ್ ಕೊಡಿ. ಅದನ್ನು ಹೇಗೆ ಬಳಸಬೇಕೋ ಅದನ್ನು ನಾವು ಬಳಸುತ್ತೇವೆ. ಈ ಅವಕಾಶವನ್ನು ಕಳೆದುಕೊಳ್ಳಲು ಹೋಗಬೇಡಿ. ಸಮುದಾಯದ ಆಶೀರ್ವಾದ ನನ್ನ ಮೇಲಿರಲಿ ಎಂದು ಮನವಿ ಮಾಡಿದರು.

ನಿಮ್ಮ ಕೈಯಲ್ಲಿ ಅಧಿಕಾರ ಇಲ್ಲ, ಎಂದರೆ ಏನು ಮಾಡೋಕೆ ಆಗಲ್ಲ. ಅಧಿಕಾರ ಕೊಡುವುದು ಬಿಡುವುದು ನಿಮ್ಮ ಕೈಲಿ ಇದೆ. ಸಮಾಜ ನನ್ನ ಕಷ್ಟಕಾಲದಲ್ಲಿ ನಿಂತಿದೆ. ಜೈಲಿಗೆ ಹೋಗಿದ್ದಾಗಲೂ ಜೊತೆ ನಿಂತಿದ್ದಿರಿ. ಇಷ್ಟು ಗಟ್ಟಿ ಆಗಿ ಮಾತಾಡಲು ಶಕ್ತಿ ನೀಡಿದ್ದೀರಿ. ನನಗೆ ಸಮಾಜದ ಮೇಲೆ ಋಣ ಇದೆ. ಆ ಋಣ ತೀರಿಸಬೇಕಿದೆ ಎಂದು ಪರೋಕ್ಷವಾಗಿ ನನಗೆ ಅಧಿಕಾರ ನೀಡಿ ಎಂದು ಉಲ್ಲೇಖಿಸುವ ಪ್ರಯತ್ನಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಮೀಸಲು ಕದನ : ರಿಸರ್ವೇಷನ್ ಹೆಚ್ಚಳಕ್ಕೆ ಒಕ್ಕಲಿಗ ಸಮುದಾಯದಿಂದ ಹೋರಾಟದ ಕಹಳೆ

ಒಕ್ಕಲಿಗ ಸಮುದಾಯ ದೊಡ್ಡ ಹೋರಾಟಕ್ಕೆ ಸಿದ್ಧವಾಗಬೇಕು. ಎಲ್ಲಿಗೆ ಕರೆದರೂ ನಾನು ಬರ್ತೀನಿ. ಸಂಘಟನೆ ಆಗದೇ ಯಶಸ್ಸು ಸಿಗಲ್ಲ. ಮುಂದೆ ಅಥವಾ ಹಿಂದೆ ಅಥವಾ ಮಧ್ಯ ಹೀಗೆ ನಾನು ಎಲ್ಲಿಯಾದರೂ ಇದ್ದು, ಸಮಾಜಕ್ಕೆ ಬೆಂಬಲ ಕೊಡುತ್ತೇನೆ. ಶ್ರೀಗಳು ಶಿವ ಗಳಿಗೆ, ಶಿವ ಮುಹೂರ್ತ ಫಿಕ್ಸ್ ಮಾಡಿದಾರೆ. ಸ್ವಾಮೀಜಿಗಳ ನೇತೃತ್ವದಲ್ಲಿ ನಾವೆಲ್ಲ ಕೂತ್ಕೊಂಡು ಮುಂದಿನ ನಿಲುವು ಬಗ್ಗೆ ನಿರ್ಧರಿಸಿದ್ದೇವೆ. ಮುಂದಿನ ನಿಲುವನ್ನು ಸ್ವಾಮೀಜಿಗಳು ತಿಳಿಸುತ್ತಾರೆ ಎಂದರು.

ಆತ್ಮೀಯ ಮಾತುಕತೆ: ಮೀಸಲಾತಿ ಹೆಚ್ಚಳಕ್ಕಾಗಿನ ಒಕ್ಕಲಿಗ ಸಂಘದಲ್ಲಿ ನಡೆದ ಸಭೆಯಲ್ಲಿ ಡಿಕೆಶಿ, ಸಚಿವ ಡಾ. ಕೆ. ಸುಧಾಕರ್ ಮತ್ತು ಸಚಿವ ಆರ್.ಅಶೋಕ್ ಆತ್ಮೀಯರಾಗಿ ಮಾತುಕತೆ ನಡೆಸಿದರು. ಪರಸ್ಪರ ಕೈ ಕುಲುಕಿ ಕುಶಲೋಪರಿ ವಿಚಾರಿಸಿದರು. ಸಮಾಜದ ಸಭೆಯಲ್ಲಿ ರಾಜಕೀಯ ವೈಷಮ್ಯ ಮರೆತು ಮುಖಂಡರು ನಗುನಗುತ್ತಾ ಮಾತುಕತೆ ನಡೆಸಿದರು. ಮೂವರು ನಾಯಕರು ರಾಜಕೀಯವಾಗಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದರೆ, ಸಭೆಯಲ್ಲಿ ರಾಜಕೀಯ ಮರೆತು ಆತ್ಮೀಯ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿತು.

ಇದನ್ನೂ ಓದಿ: ಒಕ್ಕಲಿಗ ಸಂಘದ ಸಭೆಯಲ್ಲಿ ಭಾಗಿಯಾಗುವೆ, ಮೀಸಲಾತಿ ಚರ್ಚೆಯಾಗಲಿದೆ: ಡಿ ಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.