ಬೆಂಗಳೂರು: ಪರಿಷತ್ ಚುನಾವಣೆ ಹಿನ್ನೆಲೆ ಅಭ್ಯರ್ಥಿ ಆಯ್ಕೆ ಮತ್ತು ಚುನಾವಣಾ ತಂತ್ರಗಾರಿಕೆ ಸಂಬಂಧ ಭಾನುವಾರ ಮಹತ್ವದ ಸಭೆ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಭಾನುವಾರ ಉಸ್ತುವಾರಿ ಸುರ್ಜೇವಾಲಾ ಅವರ ನೇತೃತ್ವದಲ್ಲಿ, ಬೆಂಗಳೂರಿನ ಕ್ವೀನ್ ಸದಸ್ಯ ಕೆಪಿಸಿಸಿ ಕಚೇರಿಯಲ್ಲಿ ಈ ಮಹತ್ವದ ಸಭೆ ನಡೆದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿದ್ದೇವೆ. ಇಂದು ಹಲವು ಆಕಾಂಕ್ಷಿಗಳ ಬಗ್ಗೆ ಚರ್ಚೆ ಆಗಿದೆ ಎಂದು ಖಂಡ್ರೆ ಪಕ್ರಟಣೆಯಲ್ಲಿ ವಿವರಿಸಿದರು.
ಚುನಾವಣೆ ಗೆಲ್ಲುವ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆದಿದೆ. ಎರಡು ಮೂರು ದಿನಗಳಲ್ಲಿ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿ ಅಂತಿಮ ಮಾಡ್ತೀವಿ. ಕೆಲ ಕ್ಷೇತ್ರಗಳಲ್ಲಿ ಒಂದೊಂದೇ ಹೆಸರು ಹೇಳಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಾರೆ ಎಂಬ ಮಾಹಿತಿ ನೀಡಿದರು.
ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ನಾಲ್ಕು ಸ್ಥಾನಗಳು ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಸದಸ್ಯರನ್ನು ಆಯ್ಕೆ ಮಾಡುವ 21 ಸ್ಥಾನಗಳಿಗೆ ಇದೇ ಬರುವ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ. 2022ರ ಜನವರಿ ಪದಕ್ಕೆ ಸದಸ್ಯತ್ವ ಪೂರ್ಣಗೊಳಿಸಲು ಇರುವ ಒಟ್ಟು 25 ಸದಸ್ಯರಲ್ಲಿ ಕಾಂಗ್ರೆಸ್ ಪಕ್ಷದವರು 13ಮಂದಿ ಇರುವುದು ವಿಶೇಷ. ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಆಡಳಿತ ಪಕ್ಷ ಬಿಜೆಪಿಗಿಂತಲೂ ನಾಲ್ಕು ಸ್ಥಾನ ಕಡಿಮೆ ಹೊಂದಿದೆ.
ಒಂದೊಮ್ಮೆ ಈ ಚುನಾವಣೆಯಲ್ಲಿ ತನ್ನ 13 ಸ್ಥಾನಗಳ ಜೊತೆ ಇನ್ನಷ್ಟು ಹೆಚ್ಚುವರಿ ಸ್ಥಾನಗಳನ್ನು ಗಳಿಸಿದರೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಅವಕಾಶ ಕಾಂಗ್ರೆಸಿಗೆ ಇದೆ. ಪಕ್ಷದ ಗೆಲ್ಲುವ ಅಭ್ಯರ್ಥಿಯ ಹುಡುಕಾಟ ಹಾಗೂ ಹೆಚ್ಚಿನ ವರ್ಣ ಗೆಲ್ಲಿಸಿಕೊಳ್ಳುವ ಕಾರ್ಯತಂತ್ರದ ಕುರಿತು ಸಹ ಇಂದು ಕಾಂಗ್ರೆಸ್ ನಾಯಕರ ಚರ್ಚೆ ನಡೆದಿದೆ. ಆದಷ್ಟು ತ್ವರಿತವಾಗಿ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸುವ ಹೈಕಮಾಂಡಿಗೆ ಪಟ್ಟಿಯನ್ನು ಕಳಿಸಿಕೊಟ್ಟು ಅಲ್ಲಿಂದ ಒಪ್ಪಿಗೆ ಪಡೆದು ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಇಂದು ಬೆಂಗಳೂರಿಗೆ ಆಗಮಿಸಿದ್ದು ಇವರ ಸಮ್ಮುಖದಲ್ಲಿಯೇ ಮಹತ್ವದ ಸಭೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿ ಸುದೀರ್ಘ ಚರ್ಚೆ ನಡೆಸಿದೆ. ಸಂಜೆ ನಾಲ್ಕು ಗಂಟೆ ನಂತರ ಬೆಳಗಾವಿ ವಿಭಾಗ ಮೈಸೂರು ವಿಭಾಗ ಬೆಂಗಳೂರು ವಿಭಾಗದ ಮುಖಂಡರೊಂದಿಗೆ ಕಾಂಗ್ರೆಸ್ ನಾಯಕರು ಸಭೆ ನಡೆಸಿದ್ದಾರೆ. ಸದ್ಯವೇ ಪಕ್ಷದ ಅಭ್ಯರ್ಥಿಗಳ ಪಟ್ಟಿ ಹೊರಬೀಳುವ ನಿರೀಕ್ಷೆ ಹೊಂದಲಾಗಿದೆ.
ಇದನ್ನು ಓದಿ:ಪರಿಷತ್ ಚುನಾವಣೆ ಸ್ಪರ್ಧಿಸದಿರಲು ನಾರಾಯಣಸ್ವಾಮಿ ತೀರ್ಮಾನ?! ಮುಂದಿನ ಆಯ್ಕೆ!