ನೆಲಮಂಗಲ : ಕೋವಿಡ್-19 ವೈರಸ್ ವಿಚಾರದ ವ್ಯಾಪ್ತಿ ಅರಿತು ನಟ ವಿನೋದ್‌ರಾಜ್ ತಮ್ಮ ಸುತ್ತಮುತ್ತ ಹಳ್ಳಿಯ ಗೋಡೆಗಳಿಗೆ ಸ್ವತಃ ತಾವೇ ಔಷಧಿ ಸಿಂಪಡಿಸಿ ಎಲ್ಲರೂ ಎಚ್ಚರದಿಂದ ಇರುವಂತೆ ವಿನಂತಿಸಿಕೊಂಡಿದ್ದಾರೆ.
ರಾಸಾಯನಿಕ ತುಂಬಿದ ಔಷಧಿ ಸಿಂಪಡನೆಯಿಂದ ಇನ್ನಿತರ ರೋಗಾಣುಗಳು ಸಹ ಹರಡದಂತೆ ಕ್ರಮ ತೆಗೆದುಕೊಂಡಂತಾಗಿದೆ. ಕಾರಣ ಬೇಸಿಗೆಯಲ್ಲಿ ಕೆಲವು ಸಾಂಕ್ರಾಮಿಕ ರೋಗ ತಡೆಗಟ್ಟುವುದರ ಬಗ್ಗೆ ಸಹ ಗಮನ ಹರಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದಲ್ಲಿ ಖುದ್ದಾಗಿ ಈ ಕೆಲಸ ಮಾಡಿ ಸುರಕ್ಷತೆಗೆ ಮುಂದಾಗಿದ್ದಾರೆ. ಹಿರಿಯ ನಟಿ ಡಾ.ಲೀಲಾವತಿ ಸಹ ಈ ಸಂದರ್ಭದಲ್ಲಿ ಹಾಜರಿದ್ದು, ಜನರ ಯೋಗಕ್ಷೇಮದ ಬಗ್ಗೆ ಕಾಳಜಿವಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಡಾ.ಲೀಲಾವತಿ ಅವರು ಮಾತನಾಡಿ, ಎಲ್ಲರೂ ಚೆನ್ನಾಗಿ ಬಾಳಬೇಕು. ದೇವರು ಕಷ್ಟ ಕೊಟ್ಟಿದ್ದಾನೆ. ಕೋವಿಡ್ ವೈರಸ್ ನಮ್ಮ ಕರ್ಮ. ಸರ್ಕಾರದ ಕಾನೂನನ್ನು ಯಾರೂ ಮೀರಬೇಡಿ. ಮನೆಯಲ್ಲೇ ಇದ್ದು ಸಹಕರಿಸಿ, ನೀವು ಇರುವ ಜಾಗವನ್ನು ಶುದ್ಧವಾಗಿ ಇಟ್ಟುಕೊಳ್ಳಿ. ಮಾಸ್ಕ್ ಧರಿಸಿ, ಪೊಲೀಸರು ಹೊಡೆಯದ ರೀತಿ ನಾವು ವರ್ತಿಸೋಣ ಎಂದು ಮನವಿ ಮಾಡಿದ್ದಾರೆ.