ದೇವನಹಳ್ಳಿ : ಜರ್ಮನಿಯಿಂದ ಬೆಂಗಳೂರಿನ ವಿದೇಶಿ ಅಂಚೆ ಕಚೇರಿಗೆ ಬಂದ ಪಾರ್ಸೆಲ್ ತಪಾಸಣೆ ನಡೆಸಿದಾಗ 1.89 ಕೋಟಿ ಮೌಲ್ಯದ 2.59 ಕೆ.ಜಿ MDMA ಮಾದಕ ವಸ್ತು ಪತ್ತೆಯಾಗಿದೆ. ಈ ಸಂಬಂಧ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಿದೇಶಿ ಪ್ರಜೆಯನ್ನ ಬಂಧಿಸಿದ್ದಾರೆ.
ಜರ್ಮನಿಯಿಂದ ವಿದೇಶಿ ಅಂಚೆ ಕಚೇರಿಗೆ ಬಂದ ಪಾರ್ಸೆಲ್ಗಳನ್ನ ತಪಾಸಣೆ ಮಾಡುವ ಸಮಯದಲ್ಲಿ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಈ ಡ್ರಗ್ಸ್ ಜಾಲವನ್ನ ಪತ್ತೆ ಮಾಡಿದ್ದಾರೆ. ಮಾತ್ರೆ ರೂಪದ ಮಿಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್ (MDMA) ಡ್ರಗ್ಸ್ನ್ನ ಪಾರ್ಸೆಲ್ ಮೂಲಕ ಬೆಂಗಳೂರಿಗೆ ಕಳಿಸಲಾಗಿತ್ತು.
ಸೈಕೋ ಆಕ್ಟಿವ್ ಡ್ರಗ್ಎಂದು ಕರೆಯಲಾಗುವ ಈ ಡ್ರಗ್ಸ್ ಅನ್ನು ಮನರಂಜನಾ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತದೆ. ಇದರ ಬೆಲೆ ದುಬಾರಿ ಇದ್ದು ನಶೆಯ ಕಾರಣಕ್ಕೆ ಯುವಕರು ಹೆಚ್ಚಾಗಿ ಬಳಸುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಿ ಪ್ರಜೆಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ