ETV Bharat / state

ಕಾಮಗಾರಿಗಳನ್ನು ವೇಗವಾಗಿ ಮುಗಿಸಿ: ಅಧಿಕಾರಿಗಳಿಗೆ ಮೇಯರ್​​​​ ಗಂಗಾಂಬಿಕೆ ಸೂಚನೆ

author img

By

Published : Aug 6, 2019, 8:12 AM IST

ಕೆ.ಆರ್ ಪುರಂನ ಹೊರಮಾವು ವಾರ್ಡ್‌ನಲ್ಲಿರುವ ಪಾಲಿಕೆ ಕಚೇರಿಗೆ ದಿಢೀರ್​​​ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್​​,​ ಕಾಮಗಾರಿಗಳನ್ನು ವೇಗವಾಗಿ ಮುಗಿಸುವಂತೆ ಸೂಚಿಸಿದ್ದಾರೆ.

ಪಾಲಿಕೆ ಕಚೇರಿಗೆ ಮೇಯರ್​​ ದಿಢೀರ್​​​ ಭೇಟಿ

ಬೆಂಗಳೂರು: ರಸ್ತೆ, ಕುಡಿಯುವ ನೀರು, ಒಳಚರಂಡಿ ಕಾಮಗಾರಿಗಳನ್ನು ವೇಗವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಮೇಯರ್ ಗಂಗಾಂಬಿಕೆ ಸೂಚಿಸಿದ್ದಾರೆ. ಕೆ.ಆರ್ ಪುರಂನ ಹೊರಮಾವು ವಾರ್ಡ್‌ನಲ್ಲಿರುವ ಪಾಲಿಕೆ ಕಚೇರಿಗೆ ದಿಢೀರ್​​​ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಳೆದೊಂದು ವಾರದ ಹಿಂದೆ ಹೊರಮಾವು ವಾರ್ಡ್​ನಲ್ಲಿ ಬರುವ ಜಯಂತಿನಗರ, ಕಲ್ಕೆರೆ ರಸ್ತೆ, ಹೊರಮಾವು ಮುಖ್ಯರಸ್ತೆಗಳು ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ರು. ಇದೇ ವಿಷಯವಾಗಿ ಹೊರಮಾವು ಬಿಬಿಎಂಪಿ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು.

ಅಧಿಕಾರಿಗಳ ಮಧ್ಯೆ ಕೋ ಆರ್ಡಿನೇಷನ್ ಇಲ್ಲದೇ ಇದ್ದಾಗ ಸಮಸ್ಯೆಗಳು ಉದ್ಭವಿಸುತ್ತವೆ. ಇದನ್ನು ಸರಿಪಡಿಸಿಕೊಂಡು ಸಾರ್ವಜನಿಕರ ಸಮಸ್ಯೆಗಳನ್ನು ವೇಗವಾಗಿ ಬಗೆಹರಿಸಬೇಕಿದೆ. ಹೊರಮಾವು ಭಾಗದ ಕೆಲವು ಹಳ್ಳಿಗಳು 110 ಹಳ್ಳಿಗೆ ಸೇರಿರುವುದರಿಂದ ಕಾಮಗಾರಿ ಹಂತ ಹಂತವಾಗಿ ಮಾಡಲಾಗುತ್ತದೆ ಎಂದರು.

ಪಾಲಿಕೆ ಕಚೇರಿಗೆ ಮೇಯರ್​​ ದಿಢೀರ್​​​ ಭೇಟಿ

ಸಾರ್ವಜನಿಕರು ಮನೆ ಮನೆಗೆ ನೀರಿನ ಸಂಪರ್ಕ, ಯುಜಿಡಿ ಸಂಪರ್ಕವನ್ನು ಆದಷ್ಟು ಬೇಗ ತೆಗೆದುಕೊಂಡರೆ ರಸ್ತೆಗಳಿಗೆ ಡಾಂಬರು ಹಾಕುವ ಕೆಲಸ ಮಾಡಬಹುದು. ಹೀಗಾಗಿ ಸಾರ್ವಜನಿಕರು ಸಹಕಾರ ಅಗತ್ಯ ಎಂದು ಮನವಿ ಮಾಡಿದ್ರು.

Intro:ಕೆ ಆರ್ ಪುರ,ಹೊರಮಾವು

ಕಾಮಗಾರಿಗಳನ್ನು ವೇಗವಾಗಿ ಮುಗಿಸುವಂತೆ ಸೂಚನೆ.
.

ರಸ್ತೆ ,ಕುಡಿಯುವ ನೀರು , ಒಳಚರಂಡಿ ಕಾಮಗಾರಿಗಳನ್ನು ಯಾವುದೇ ಕಾರಣಕ್ಕೂ ನಿಧಾನ ಮಾಡದೆ ವೇಗವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಮೇಯರ್ ಗಂಗಾಂಭಿಕೆ ಸೂಚಿಸಿದರು, ಇಂದು ಬೆಳ್ಳಂಬೆಳಗ್ಗೆ ಕೆಆರ್ ಪುರಂನ ಹೊರಮಾವು ವಾರ್ಡ್ ನಲ್ಲಿರುವ ಪಾಲಿಕೆ ಕಚೇರಿಗೆ ದಿಡೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು...

ಕಳೆದು ಒಂದು ವಾರದ ಹಿಂದೆ ಹೊರಮಾವು ವಾರ್ಡ್್ ನಲ್ಲಿ ಬರುವ ಜಯಂತಿನಗರ, ಕಲ್ಕೆರೆ ರಸ್ತೆ , ಹೊರಮಾವು ಮುಖ್ಯರಸ್ತೆಗಳು ಹದಗೆಟ್ಟಿದ್ದ ಹಿನ್ನೆಲೆ ಸ್ಥಳೀಯರು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಇದೇ ವಿಷಯವಾಗಿ ಹೊರಮಾವು ಬಿಬಿಎಂಪಿ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

Body:ಅಧಿಕಾರಿಗಳ ಮಧ್ಯೆ ಕೋ ಆರ್ಡಿನೇಷನ್ ಇಲ್ಲದೇ ಇದ್ದರೆ ಮಾತ್ರ ಸಮಸ್ಯೆಗಳು ಉದ್ಬವವಾಗುತ್ತದೆ. ಇದನ್ನು ಸರಿಪಡಿಸಿಕೊಂಡು ಸಾರ್ವನಿಕರ ಸಮಸ್ಯೆಗಳನ್ನು ವೇಗವಾಗಿ ಬಗೆಹರಿಸಬೇಕಿದೆ.
ಹೊರಮಾವು ಭಾಗದ ಕೆಲವು ಹಳ್ಳಿಗಳು 110 ಹಳ್ಳಿಗೆ ಸೇರಿರುವುದರಿಂದ ಕಾಮಗಾರಿ ಹಂತ ಹಂತವಾಗಿ ಮಾಡಲಾಗುತ್ತದೆ.
ಸಾರ್ವಜನಿಕರು ಮನೆ ಮನೆಗೆ ನೀರಿನ ಸಂಪರ್ಕ, ಯುಜಿಡಿ ಸಂಪರ್ಕ ಆದಷ್ಟು ಬೇಗ ತೆಗೆದುಕೊಂಡರೆ ರಸ್ತೆಗಳಿಗೆ ಡಾಂಬರು ಹಾಕುವ ಕೆಲಸ ಮಾಡಬಹುದು ಸಾರ್ವಜನಿಕರು ಕೂಡಾ ನಮ್ಮ ಜೊತೆ ಕೈಜೋಡಿಸಬೇಕಿದೆ

ನಾಳೆ ಮಧ್ಯಾಹ್ನ ಬಿಡಬ್ಲ್ಯೂ ಎಸ್ ಎಸ್ ಬಿ, ಮೇಜರ್ ರಸ್ತೆ, ಜೆಸಿ ಹಾಗೂ ಸ್ಥಳೀಯರ ಸಭೆ ಕರೆದಿದ್ದು ಈ ಸಭೆಯಲ್ಲಿ ಕಾಮಗಾರಿ ವೇಗಕ್ಕೆ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು.

Conclusion:ರಸ್ತೆ ಮತ್ತು ಒಳಚರಂಡಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದ್ದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಮೇಯರ್ ಭರವಸೆಯನ್ನೆನೋ ನೀಡಿದ್ದಾರೆ ಆದರೇ ಅಧಿಕಾರಿಗಳ ತಮ್ಮ ಜವಾಬ್ದಾರಿ ಅರಿತು ಕಾಮಗಾರಿಗಳನ್ನು
ಮುಗಿಸುತ್ತಾರಾ ಕಾದು ನೋಡಬೇಕಿದೆ....

ಬೈಟ್ ....ಗಂಗಾಂಭಿಕೆ ಮೇಯರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.