ETV Bharat / state

ಬಿಬಿಎಂಪಿ ಕೌನ್ಸಿಲ್​ ಸಭೆಯಲ್ಲಿ ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ - ಬೆಂಗಳೂರು ಬಿಬಿಎಂಪಿ ಕೌನ್ಸಿಲ್​

ಬಿಬಿಎಂಪಿ ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮತ್ತೆ ಜೆಡಿಎಸ್ ನಾಯಕರು ಬಿಜೆಪಿ ವಿರುದ್ಧ ಮುಗಿಬಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಅಧಿಕಾರದ ಅವಧಿಯಲ್ಲಿ ಕರೆದ ಕಸದ ಟೆಂಡರ್​​ಅನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂದು ಆರೋಪಿಸಿ ಗದ್ದಲ ಆರಂಭಿಸಿದರು.

Mayor humiliation by BJP member
ಬಿಜೆಪಿ ಸದಸ್ಯನಿಂದ ಮೇಯರ್​ ಅವಮಾನ
author img

By

Published : Feb 29, 2020, 9:48 PM IST

ಬೆಂಗಳೂರು: ಬಿಬಿಎಂಪಿ ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮತ್ತೆ ಜೆಡಿಎಸ್ ನಾಯಕರು ಬಿಜೆಪಿ ವಿರುದ್ಧ ಮುಗಿಬಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಅಧಿಕಾರದ ಅವಧಿಯಲ್ಲಿ ಕರೆದ ಕಸದ ಟೆಂಡರ್​​ಅನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂದು ಆರೋಪಿಸಿ ಗದ್ದಲ ಆರಂಭಿಸಿದರು.

ಇನ್ನು ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿರುವ ವೈಟ್ ಟಾಪಿಂಗ್, ಟೆಂಡರ್ ಶೂರ್, ಇಂದಿರಾ ಕ್ಯಾಂಟೀನ್​ಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ತನಿಖೆ ನಡೆಸಿ, ಮೂರು ತಿಂಗಳೊಳಗೆ ವರದಿ ನೀಡಬೇಕು ಎಂದು ಆಗ್ರಹಿಸಿದ್ದರು. ಆದ್ರೆ ಸದ್ಯ 6 ತಿಂಗಳಾದ್ರೂ ಇನ್ನು ಯಾವುದೇ ರೀತಿಯ ತನಿಖಾ ವರದಿ ಕೂಡ ಬಂದಿಲ್ಲ. ನಾವು ಮಾಡಿರುವುದೇ ಸರಿ ಎಂದು ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್ ಕೌನ್ಸಿಲ್ ಸಭೆಯಲ್ಲಿ ಹೇಳಿದರು.

ಗದ್ದಲ ಕೋಲಾಹಲದ ನಡುವೆ ಮಾತಾಡಿದ ಶಾಸಕ ಸತೀಶ್ ರೆಡ್ಡಿ, ಬಿಬಿಎಂಪಿ ಅಧಿಕಾರ ಇರೋದು ಇನ್ನು ಆರು ತಿಂಗಳು ಮಾತ್ರ. ಸುಮ್ಮನೆ ಸಮಯ ವ್ಯರ್ಥ ಮಾಡದೆ ಅಭಿವೃದ್ಧಿ ಕಡೆ ಗಮನ ಹರಿಸಿ ಎಂದು ಸಲಹೆ ನೀಡಿದ್ರು.

ಉಮೇಶ್ ಶೆಟ್ಟಿ ಮಾತಿಗೆ ಗದ್ದಲ -ಪ್ರತಿಭಟನೆ

ಕಸದ ಟೆಂಡರ್ ವಿಚಾರ ಚರ್ಚೆ ನಡೆಯುತ್ತಿದ್ದಾಗ ಬಿಜೆಪಿ ಸದಸ್ಯ ಉಮೇಶ್ ಶೆಟ್ಟಿ, ಕಸದ ಟೆಂಡರ್ ವಿಚಾರವಾಗಿ ಕಾಂಗ್ರೆಸ್ ಆಡಳಿತ ಸಮಿತಿ ರಚಿಸಿತ್ತು. ಆದ್ರೆ ವಿಶೇಷ ಸಮಿತಿ ರಚನೆಗೆ ಮೇಯರ್​​ಗೆ ಅಧಿಕಾರ ಇದಿಯಾ ಎಂದು ಮೇಯರ್ ಅವರನ್ನು ಪ್ರಶ್ನಿಸಿದರು.

ಬಿಜೆಪಿ ಸದಸ್ಯನಿಂದ ಮೇಯರ್​ ಅವಮಾನ ಆರೋಪ

ಅಧಿಕಾರ ಇಲ್ಲ ಅಂತ ಹೇಳೋಕೆ ನೀವ್ಯಾರು ಎಂದು ಪ್ರತಿಪಕ್ಷ ನಾಯಕರು ಪ್ರತಿಭಟನೆ ಮಾಡಿದ್ರು. ಅಲ್ಲದೆ ಮೇಯರ್ ಅಧಿಕಾರ ಪ್ರಶ್ನಿಸಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು‌. ಇದರಿಂದ ಸಭೆಯನ್ನು ಮೇಯರ್ ಮುಂದೂಡಿದ್ರು. ಸಭೆ ಪುನಃ ಆರಂಭವಾದ ಬಳಿಕವೂ ಗದ್ದಲ ಮುಂದುವರಿಯುತು. ಹೀಗಾಗಿ ಹೆಚ್ಚಿನ ಚರ್ಚೆಗಳು ನಡೆಯದೆ ಗದ್ದಲದಲ್ಲೇ ಸಭೆ ಮುಗಿಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.