ಬೆಂಗಳೂರು: ನಿನ್ನೆಯಷ್ಟೇ ಐತಿಹಾಸಿಕ ಕರಗ ಉತ್ಸವದ ಪೂರ್ವ ಸಿದ್ಧತೆ ಕುರಿತು ಸಭೆ ನಡೆಸಿದ ಬಿಬಿಎಂಪಿ, ಇಂದು ಆಯುಕ್ತರು ಹಾಗೂ ಪಾಲಿಕೆ ಸದಸ್ಯರು, ಸಮಾಜದ ಮುಖಂಡರ ಜೊತೆ ಮೇಯರ್ ಗೌತಮ್ ಕುಮಾರ್, ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ, ಕರಗ ಶಕ್ತ್ಯೋತ್ಸವ, ಮೆರವಣಿಗೆ ನಡೆಯುವ ವೇಳೆ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸ್ಥಳ ಪರಿಶೀಲನೆ ನಡೆಸಲಾಯಿತು.
ಬಿಬಿಎಂಪಿಯ ಆರೋಗ್ಯ ಇಲಾಖೆಯ ಅಧಿಕಾರಿಗಳು. ಜಂಟಿ ಆಯುಕ್ತರು, ಚೀಫ್ ಇಂಜಿನಿಯರ್ಗಳು, ಬೆಸ್ಕಾಂನ ಹಿರಿಯ ಅಧಿಕಾರಿಗಳು ಹಾಗೂ ಟ್ರಾಫಿಕ್ ಡಿಸಿಪಿ ಮೇಯರ್ ಗೌತಮ್ ಕುಮಾರ್ಗೆ ಸಾಥ್ ನೀಡಿದ್ದಾರೆ.
ಏಪ್ರಿಲ್ 8 ರಂದು ಕರಗ ಉತ್ಸವ ನಡೆಯಲಿದೆ. ಕಬ್ಬನ್ ಪಾರ್ಕ್ ನಲ್ಲಿರುವ ಕರಗದ ಕುಂಟೆ, ಕರಗ ನಡೆಯುವ ದೇವಾಲಯ, ಕಲ್ಯಾಣಿ ಹಾಗೂ ರಸ್ತೆಗಳ ಸ್ವಚ್ಛತೆ ಕುರಿತು ಪರಿಶೀಲನೆ ಮಾಡಿದರು. ಈ ವೇಳೆ ಭಕ್ತಾಧಿಗಳು ಕರಗ ನಡೆಯಲೇಬೇಕು ಎಂದು ಕರಗ ಇತಿಹಾಸದ ಬಗ್ಗೆ ಮಾಹಿತಿ ನೀಡಿ ,ಮನವಿ ಪತ್ರ ಸಹ ಸಲ್ಲಿಕೆ ಮಾಡಿದರು.
ಕೊರೊನಾ ವೈರೆಸ್ , ಕಾಲರ ಹಿನ್ನೆಲೆಯಲ್ಲಿ ಕರಗ ನಿಗದಿತ ದಿನಕ್ಕೆ ಮಾಡಬೇಕಾ, ಮುಂದೂಡಬೇಕಾ ಎಂಬ ಬಗ್ಗೆ ಚರ್ಚೆ ನಡೆದಿದೆ.