ETV Bharat / state

ಗಣೇಶೋತ್ಸವ ಆಚರಣೆ ಮಾರ್ಗಸೂಚಿ ಇನ್ನಷ್ಟು ಮಾರ್ಪಡಿಸುವಂತೆ ಸಿಎಸ್​ಗೆ ಮೇಯರ್ ಮನವಿ - Mayor Gautam Kumar

ಮೇಯರ್ ಗೌತಮ್ ಕುಮಾರ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಭೇಟಿಯಾಗಿ ಗಣೇಶೋತ್ಸವ ಆಚರಣೆ ಮಾರ್ಗಸೂಚಿಯನ್ನು ಮಾರ್ಪಾಡಿಸುವಂತೆ ಮನವಿ ಮಾಡಿದರು.

Bangalore
ಸಿಎಸ್​ಗೆ ಮೇಯರ್ ಮನವಿ
author img

By

Published : Aug 20, 2020, 7:08 PM IST

ಬೆಂಗಳೂರು: ಮೇಯರ್ ಗೌತಮ್ ಕುಮಾರ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್​ನ್ನು ಭೇಟಿಯಾಗಿ ಗಣೇಶೋತ್ಸವ ಆಚರಣೆ ಮಾರ್ಗಸೂಚಿಯನ್ನು ಮಾರ್ಪಾಡಿಸುವಂತೆ ಮನವಿ ಮಾಡಿದರು.

ಗಣೇಶೋತ್ಸವ ಆಚರಣೆ ಮಾರ್ಗಸೂಚಿ ಮಾರ್ಪಡಿಸುವಂತೆ ಮನವಿ ಮಾಡಲಾಯಿತು.

ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಮ್.‌ವಿಜಯ್ ಭಾಸ್ಕರ್​ನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಮೇಯರ್ ಗೌತಮ್ ಕುಮಾರ್​ಗೆ ಗಣೇಶೋತ್ಸವ ಸಮಿತಿಯ ಪ್ರಕಾಶ್ ರಾಜ್ ಸಾತ್ ನೀಡಿದ್ದರು. ಭೇಟಿ ಬಳಿಕ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಗಣೇಶೋತ್ಸವ ಆಚರಣೆ ವಿಚಾರದಲ್ಲಿ ಸಾರ್ವಜನಿಕರ ಅಭಿಪ್ರಾಯಗಳ ಮೇರೆಗೆ ಇಂದು ಸಿಎಸ್ ಭೇಟಿ ಮಾಡಿದ್ದೇವೆ. ಮಾರ್ಗಸೂಚಿಗಳಲ್ಲಿ ಕೆಲ‌ ಮಾರ್ಪಾಡು ಮಾಡುವಂತೆ ಕೋರಿದ್ದೇವೆ ಎಂದರು.

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಒಂದು ವಾರ್ಡ್​ಗೆ ಒಂದೇ ಗಣೇಶ ಎಂದು ಇದೆ. ಆದರೆ ವಾರ್ಡ್​ನಲ್ಲಿ ಹಲವಾರು ಸಂಘ ಸಂಸ್ಥೆಗಳು ಇರುತ್ತವೆ. ಯಾರು ಗಣೇಶೋತ್ಸವ ಆಚರಿಸಬೇಕೆಂಬ ಗೊಂದಲಗಳು ಉಂಟಾಗುತ್ತವೆ. ಇಂತಹ ಗೊಂದಲಗಳನ್ನು ಪರಿಹರಿಸುವಂತೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದೇವೆ ಎಂದರು.

ಈ ಸಂಬಂಧ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಿಎಸ್ ವಿಜಯಭಾಸ್ಕರ್ ತಿಳಿಸಿದ್ದಾರೆ. ಅವರು ಕೆಲ ಮಾರ್ಪಾಡು ಮಾಡಿ ಮಾರ್ಗಸೂಚಿ ಹೊರಡಿಸಲಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.