ETV Bharat / state

ಮಾತಾ ಅಮೃತಾನಂದಮಯಿ ಟ್ರಸ್ಟ್​​ಗೆ ಜಮೀನು ಹಂಚಿಕೆ ವಿವಾದ : ಕ್ರಮ ಜರುಗಿಸುವ ಬದಲು, ನಿಯಮವನ್ನೇ ಬದಲಿಸಿದ ಸರ್ಕಾರ - ಮಾತಾ ಅಮೃತಾನಂದಮಯಿ

ಮಾತಾ ಅಮೃತಾನಂದಮಯಿ ಟ್ರಸ್ಟ್ ವಿಧವೆಯರಿಗೆ ಮನೆ ಮತ್ತು ಬಡವರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದಾಗಿ ಹೇಳಿ ರಾಜ್ಯ ಸರ್ಕಾರದಿಂದ ಬೆಂಗಳೂರಿನ ಕಸವಹಳ್ಳಿಯಲ್ಲಿ 22 ಎಕರೆ ಜಮೀನನ್ನು 2000ನೇ ಇಸವಿಯಲ್ಲಿ ಪಡೆದಿತ್ತು. ಆದರೆ, ಉದ್ದೇಶಿತ ಜಮೀನಿನಲ್ಲಿ ಮನೆ, ಆಸ್ಪತ್ರೆ ನಿರ್ಮಿಸುವ ಬದಲು ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದೆ. ಈ ಹಿನ್ನೆಲೆಯಲ್ಲಿ, ಟ್ರಸ್ಟ್ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಪಿಐಎಲ್ ಸಲ್ಲಿಸಲಾಗಿದೆ..

court
court
author img

By

Published : Jun 25, 2021, 7:27 PM IST

ಬೆಂಗಳೂರು : ಜಮೀನು ಹಂಚಿಕೆ ಷರತ್ತುಗಳನ್ನು ಉಲ್ಲಂಘಿಸಿರುವ ಮಾತಾ ಅಮೃತಾನಂದಮಯಿ ಟ್ರಸ್ಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸುವ ಬದಲು ನಿಯಮಗಳನ್ನೇ ಬದಲಿಸಿರುವ ಸರ್ಕಾರದ ನಡೆಗೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಗರದ ವರ್ತೂರು ಹೋಬಳಿಯ ಕಸವನಹಳ್ಳಿಯಲ್ಲಿ ಸರ್ಕಾರದಿಂದ ಪಡೆದ ಜಮೀನನ್ನು ಮಾತಾ ಅಮೃತಾನಂದಮಯಿ ಟ್ರಸ್ಟ್ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಕವಿತಾ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

ಈ ವೇಳೆ ಟ್ರಸ್ಟ್ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ ಸರ್ಕಾರ ಭೂಮಿ ಹಂಚಿಕೆ ನಿಯಮಗಳನ್ನು ಪರಿಷ್ಕರಿಸಿದೆ ಎಂದರು. ವರದಿ ಪರಿಶೀಲಿಸಿದ ಪೀಠ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಹಿಂದಿನ ವಿಚಾರಣೆ ಸಂದರ್ಭದಲ್ಲಿ ಸರ್ಕಾರವೇ ಟ್ರಸ್ಟ್ ನಿಯಮ ಉಲ್ಲಂಘಿಸಿದೆ ಎಂದು ಹೇಳಿತ್ತು. ಅದರಂತೆ ನ್ಯಾಯಾಲಯ ಏಪ್ರಿಲ್ 23ರಂದು ಟ್ರಸ್ಟ್ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಆದೇಶಿಸಿದೆ. ಆದರೆ, ಕಂದಾಯ ಇಲಾಖೆ ಏಪ್ರಿಲ್ 29ರಂದು ಭೂಮಿ ಹಂಚಿಕೆಯ ಷರತ್ತುಗಳನ್ನೇ ಬದಲಿಸಿದೆ, ಇದು ನಿಜಕ್ಕೂ ಅಚ್ಚರಿಯ ಬೆಳವಣಿಗೆ ಎಂದಿತು.

ಅಲ್ಲದೇ, ನ್ಯಾಯಾಲಯ ಕಾನೂನು ಕ್ರಮಕ್ಕೆ ಆದೇಶಿಸಿದ ಬಳಿಕ ಸರ್ಕಾರ ಈ ರೀತಿ ಷರತ್ತುಗಳನ್ನು ಸಡಿಲಿಕೆ ಮಾಡಿರುವುದು ಕೋರ್ಟ್ ಆದೇಶ ಮೀರಿ ನಡೆದುಕೊಂಡಿರುವುದನ್ನು ತಿಳಿಸುತ್ತದೆ. ಹೀಗಾಗಿ, ನ್ಯಾಯಾಲಯದ ಗಮನಕ್ಕೆ ತರದೇ ಜಮೀನು ಹಂಚಿಕೆ ಷರತ್ತುಗಳನ್ನು ಬದಲಿಸಿದ್ದು ಹೇಗೆ ಮತ್ತು ಏಕೆ ಎಂಬ ಕುರಿತು ಮುಂದಿನ ಒಂದು ವಾರದೊಳಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿವರಣೆ ನೀಡಬೇಕು ಎಂದು ತಾಕೀತು ಮಾಡಿ, ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ :

ಮಾತಾ ಅಮೃತಾನಂದಮಯಿ ಟ್ರಸ್ಟ್ ವಿಧವೆಯರಿಗೆ ಮನೆ ಮತ್ತು ಬಡವರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದಾಗಿ ಹೇಳಿ ರಾಜ್ಯ ಸರ್ಕಾರದಿಂದ ಬೆಂಗಳೂರಿನ ಕಸವಹಳ್ಳಿಯಲ್ಲಿ 22 ಎಕರೆ ಜಮೀನನ್ನು 2000ನೇ ಇಸವಿಯಲ್ಲಿ ಪಡೆದಿತ್ತು. ಆದರೆ, ಉದ್ದೇಶಿತ ಜಮೀನಿನಲ್ಲಿ ಮನೆ, ಆಸ್ಪತ್ರೆ ನಿರ್ಮಿಸುವ ಬದಲು ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದೆ. ಈ ಹಿನ್ನೆಲೆಯಲ್ಲಿ, ಟ್ರಸ್ಟ್ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಪಿಐಎಲ್ ಸಲ್ಲಿಸಲಾಗಿದೆ.

ಅರ್ಜಿ ವಿಚಾರಣೆ ವೇಳೆ ಖುದ್ದು ಸರ್ಕಾರವೇ ಮಾತಾ ಅಮೃತಾನಂದಮಯಿ ಟ್ರಸ್ಟ್ ಷರತ್ತು ಉಲ್ಲಂಘಿಸಿರುವುದಾಗಿ ನ್ಯಾಯಾಲಯಕ್ಕೆ ವರದಿ ನೀಡಿತ್ತು. ಅದನ್ನು ಪರಿಶೀಲಿಸಿದ ಪೀಠ, ಟ್ರಸ್ಟ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಕೈಗೊಂಡ ಕ್ರಮಗಳ ಕುರಿತು ಜೂನ್ 24ರೊಳಗೆ ವರದಿ ಸಲ್ಲಿಸುವಂತೆ 2021ರ ಏಪ್ರಿಲ್ 23ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನಿರ್ದೇಶಿಸಿತ್ತು. ಇದೀಗ ಸರ್ಕಾರ ಭೂ ಹಂಚಿಕೆ ನಿಯಮಗಳನ್ನೇ ಬದಲಿಸಿರುವುದು ಪೀಠದ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಕೋವಿಡ್​ 3ನೇ ಅಲೆಯಲ್ಲಿ ಟಾರ್ಗೆಟ್ ಆಗುವ ಜಿಲ್ಲೆಗಳಿವು.. ನಿರ್ಲಕ್ಷ್ಯ ತೋರಿದ್ರೆ ಆಪತ್ತು ಖಚಿತ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.