ETV Bharat / state

ನ.17ರಿಂದ ಸ್ನಾತಕೋತ್ತರ ಪದವಿ ತರಗತಿ ಆರಂಭ.. ಸಾಮಾಜಿಕ ಅಂತರ‌ಕ್ಕೆ 'ಸಿಸಿಟಿವಿ' ಕಣ್ಗಾವಲು.. - Postgraduate Classes started at November 17

ಈಗಾಗಲೇ ಭಾಗಶಃ ನಗರದ ಕಾಲೇಜುಗಳ ಆವರಣ ಹಾಗೂ ತರಗತಿಯೊಳಗೆ ಸಿಸಿಟಿವಿ ಅಳವಡಿಕೆ ಇದ್ದು, ಇದರ ಸಹಾಯದ ಮೂಲಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ? ಇಲ್ಲವೇ? ಎಂಬುದನ್ನ ಗಮನಿಸಬಹುದಾಗಿದೆ..

masters-degree-class-starts-on-november-17
ನವೆಂಬರ್ 17ರಿಂದ ಸ್ನಾತಕೋತ್ತರ ಪದವಿ ತರಗತಿ ಆರಂಭ
author img

By

Published : Nov 8, 2020, 2:32 PM IST

ಬೆಂಗಳೂರು : ಶಾಲೆ ಆರಂಭ ಕುರಿತು ಇದೀಗ ಚರ್ಚೆ ನಡೆಯುತ್ತಿರುವಾಗಲೇ ರಾಜ್ಯ ಸರ್ಕಾರ ಮೊದಲ ಹಂತವಾಗಿ ಉನ್ನತ ಶಿಕ್ಷಣ ಸಂಸ್ಥೆಗಳ ತರಗತಿಗಳನ್ನು ನವೆಂಬರ್ 17ರಿಂದ ಆರಂಭಿಸಲು ನಿರ್ಧರಿಸಿದೆ. ಜತೆಗೆ ಕೊರೊನಾ ನಿಯಂತ್ರಣ ಕ್ರಮಗಳಿಗೆ ಗಮನ ಹರಿಸಿದೆ.

ಪ್ರೊ.ಎಂ.ಆರ್. ದೊರೆಸ್ವಾಮಿ ಮಾತನಾಡಿದರು

ರಾಜ್ಯದಲ್ಲಿ ಎಲ್ಲ ಪದವಿ, ಸ್ನಾತಕೋತ್ತರ,ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳು ಪುನಾರಂಭವಾಗುತ್ತಿವೆ. ಕೊರೊನಾ ಕಾರಣದಿಂದ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಕೈಸ್ವಚ್ಛತೆ ಬಗ್ಗೆ ಜಾಗೃತೆ ಮೂಡಿಸುವುದು ಅಗತ್ಯವಾಗಿರುವುದರಿಂದ ಕಾಲೇಜಿಗೆ ಬರುವವರ ಮೇಲೆ ನಿಗಾ ಇರಿಸಲು ಸಿಸಿಟಿವಿ ಕಣ್ಗಾವಲು ಇರಲಿದೆ.‌

ಈಗಾಗಲೇ ಭಾಗಶಃ ನಗರದ ಕಾಲೇಜುಗಳ ಆವರಣ ಹಾಗೂ ತರಗತಿಯೊಳಗೆ ಸಿಸಿಟಿವಿ ಅಳವಡಿಕೆ ಇದ್ದು, ಇದರ ಸಹಾಯದ ಮೂಲಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ? ಇಲ್ಲವೇ? ಎಂಬುದನ್ನ ಗಮನಿಸಬಹುದಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪಿಇಎಸ್ ಕಾಲೇಜಿನ ಮುಖ್ಯಸ್ಥರು ಹಾಗೂ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ, ಈಗಾಗಲೇ ಎಲ್ಲ ಶಾಲಾ-ಕಾಲೇಜಿನಲ್ಲೂ ಸಿಸಿ ಕ್ಯಾಮೆರಾಗಳ ಅಳವಡಿಕೆ ಕಡ್ಡಾಯವಾಗಿದೆ.

ಇದರೊಟ್ಟಿಗೆ ಆಯಾ ಕಾಲೇಜಿನ ಪ್ರಿನ್ಸಿಪಾಲ್‌ರ ಅಧ್ಯಕ್ಷತೆಯಲ್ಲಿ ಕಮಿಟಿ ಮಾಡಿಕೊಂಡು ಜವಾಬ್ದಾರಿ ಹೊರಬೇಕು. ಇವರು ವಿದ್ಯಾರ್ಥಿಗಳಿಗೆ ಕೊರೊನಾ ಮಾರ್ಗಸೂಚಿಯ ಬಗ್ಗೆ ವಿವರಿಸಬೇಕು. ಅಂದರೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡುವಂತೆ ತಿಳಿ ಹೇಳಬೇಕು. ತಪ್ಪದೇ ಇದನ್ನ ಪಾಲಿಸುವಂತೆ ಕಮಿಟಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.