ಬೆಂಗಳೂರು: ನಗರದಲ್ಲಿ ಸಂಚರಿಸುವವರು ಮಾಸ್ಕ್ ಧರಿಸಿಯೇ ಹೊರಗಡೆ ಬರಬೇಕು. ಇಲ್ಲವಾದರೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಪಾಲಿಕೆ ವಿಶೇಷ ಆಯುಕ್ತ ರಂದೀಪ್ ಖಚಿತಪಡಿಸಿದ್ದಾರೆ.
ನಾಳೆಯಿಂದಲೇ (ಮೇ 1) ಈ ಹೊಸ ನಿಯಮ ಜಾರಿಯಾಗಲಿದೆ. ಕೊರೊನಾ ಭೀತಿ ಹೆಚ್ಚಾಗಿರುವ ಕಾರಣ ಮುಖಕ್ಕೆ ಮಾಸ್ಕ್ ಕಡ್ಡಾಯ ಮಾಡಿರುವ ಸರ್ಕಾರ, ಮೊದಲ ಹಂತದಲ್ಲಿ 1 ಸಾವಿರ ರೂಪಾಯಿ ದಂಡ ವಿಧಿಸಲು ಸೂಚನೆ ನೀಡಿದೆ. ಪೊಲೀಸ್ ಇಲಾಖೆ, ಬಿಬಿಎಂಪಿ ಮಾರ್ಷಲ್ ಹಾಗೂ ಬಿಬಿಎಂಪಿ ಹೆಲ್ತ್ ಇನ್ಸ್ಪೆಕ್ಟರ್ಗಳಿಗೆ ದಂಡ ಹಾಕುವ ಅಧಿಕಾರವಿದೆ ಎಂದು ತಿಳಿಸಿದ್ದಾರೆ.
2ನೇ ಬಾರಿಯೂ ಇದೇ ರೀತಿ ತಪ್ಪು ಮರುಕಳಿಸಿದರೆ 2 ಸಾವಿರ ರೂಪಾಯಿ ದಂಡ ಬೀಳಲಿದೆ. ಸರ್ಕಾರದ ಆದೇಶ ಪ್ರತಿ ನಾಳೆ ಸಿಗಲಿದೆ ಎಂದು ವಿಶೇಷ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.