ETV Bharat / state

ನಿಶ್ಚಯಿಸಿದ್ದ ಮದುವೆ ರದ್ದು.. ವಿವಾಹವಾಗ್ಬೇಕಿದ್ದ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ.. - ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ಹುಡುಗಿಯನ್ನು ನೋಡುವ ಸಲುವಾಗಿ ಹೈದರಾಬಾದ್​​ನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ. ಈ ಸಮಯದಲ್ಲಿ ಹುಡುಗಿ ಕುಟುಂಬದವರು ಮದುವೆ ಕ್ಯಾನ್ಸಲ್ ಮಾಡಿರುವ ವಿಷಯ ತಿಳಿದಿದೆ..

Doddaballapur
ರೈಲಿಗೆ ತಲೆಕೊಟ್ಟು ಆತ್ಮಹತ್ಯೆ  ಮಾಡಿಕೊಂಡ ಮದುವೆ ನಿಶ್ಚಯವಾಗಿದ್ದ ವ್ಯಕ್ತಿ
author img

By

Published : Jan 31, 2021, 5:07 PM IST

ದೊಡ್ಡಬಳ್ಳಾಪುರ : ಆಂಧ್ರಪ್ರದೇಶದ ಹಿಂದೂಪುರ ಹುಡುಗನ ಮದುವೆ ಬೆಂಗಳೂರಿನ ಹುಡುಗಿ ಜೊತೆ ನಿಶ್ಚಯವಾಗಿತ್ತು. ಆದರೆ, ಹುಡುಗಿ ಕುಟುಂಬದವರು ಮದುವೆ ಕ್ಯಾನ್ಸಲ್ ಮಾಡಿದ್ದಾರೆ. ಈ ವಿಷಯ ತಿಳಿದು ಮದುವೆ ನಿಶ್ಚಯವಾಗಿದ್ದ ವ್ಯಕ್ತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಮದುವೆ ನಿಶ್ಚಯವಾಗಿದ್ದ ವ್ಯಕ್ತಿ

ದೊಡ್ಡಬಳ್ಳಾಪುರ ನಗರದ ಮುತ್ತೂರು ಸಮೀಪ ಈ ಘಟನೆ ನಡೆದಿದೆ. ಆಂಧ್ರದ ಅನಂತಪುರ ಜಿಲ್ಲೆಯ ಧರ್ಮಾವರಂ ತಾಲೂಕಿನ ಯರಗುಂಟಪಲ್ಲಿ ನಿವಾಸಿ ಹರಿ (28) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೃತ ವ್ಯಕ್ತಿಗೆ ಬೆಂಗಳೂರಿನ ಹುಡುಗಿ ಜೊತೆ ಮದುವೆ ನಿಶ್ಚಯವಾಗಿತ್ತು.

ಹುಡುಗಿಯನ್ನು ನೋಡುವ ಸಲುವಾಗಿ ಹೈದರಾಬಾದ್​​ನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ. ಈ ಸಮಯದಲ್ಲಿ ಹುಡುಗಿ ಕುಟುಂಬದವರು ಮದುವೆ ಕ್ಯಾನ್ಸಲ್ ಮಾಡಿರುವ ವಿಷಯ ತಿಳಿದಿದೆ.

ಬಳಿಕ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದಲ್ಲಿ ಇಳಿದು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.