ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದರೂ, ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಹಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ನಗರದ ಮಾರುಕಟ್ಟೆಗಳು ಹೆಚ್ಚು ಜನರು ಭೇಟಿ ನೀಡುವ ಪ್ರದೇಶಗಳಾಗಿವೆ. ಹೀಗಾಗಿ ಮಾರುಕಟ್ಟೆ, ಮಾಲ್ಗಳು, ಸೂಪರ್ ಮಾರುಕಟ್ಟೆಗಳಲ್ಲಿ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ಪ್ರಮುಖ ಮಾರ್ಗಸೂಚಿಗಳು
- ಕಂಟೈನ್ಮೆಂಟ್ ವಲಯದಲ್ಲಿರುವ ಮಾರುಕಟ್ಟೆಗಳು ಬಂದ್ ಆಗಿಯೇ ಇರಬೇಕು.
- 65 ವರ್ಷ ಮೇಲ್ಪಟ್ಟವರು, ಹತ್ತುವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಗರ್ಭಿಣಿಯರು ಹಾಗೂ ಇತರೆ ಖಾಯಿಲೆ ಇರುವವರು ಮಾರುಕಟ್ಟೆಗಳಿಗೆ ಬಾರದೆ ಆದಷ್ಟು ಮನೆಯಲ್ಲೇ ಇರುವಂತೆ ತಿಳಿಸಲಾಗಿದೆ.
- ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಆರೋಗ್ಯ ಸೇತು ಆ್ಯಪ್ ಬಳಕೆ, ಪದೇ ಪದೇ ಕೈತೊಳೆಯುವುದನ್ನು ಅಂಗಡಿ, ಮಳಿಗೆಗಳ ಮಾಲೀಕರು, ಸಿಬ್ಬಂದಿ ಪಾಲಿಸಬೇಕು.
- ಪ್ರತೀದಿನ ಅಂಗಡಿ, ಮಳಿಗೆಗಳನ್ನು ಸ್ಯಾನಿಟೈಸ್ ಮಾಡುವುದು
- ಸ್ಯಾನಿಟೈಸರ್ ಬಳಕೆ, ಶೌಚಾಲಯಗಳ ಸ್ವಚ್ಛತೆ ಕಾಪಾಡುವುದು
- ಮಾರುಕಟ್ಟೆ ಸಂಘಗಳು ಕೋವಿಡ್ ಮಾರ್ಗಸೂಚಿಗಳ ಪಾಲನೆ ಬಗ್ಗೆ ಗಮನಹರಿಸಬೇಕು
- ಬಳಸಿದ ಮಾಸ್ಕ್, ತ್ಯಾಜ್ಯಗಳನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸುವುದು
- ಥರ್ಮಲ್ ಸ್ಕ್ರೀನಿಂಗ್, ಉಚಿತ ಮಾಸ್ಕ್ ವಿತರಣೆ, ಕೈ ತೊಳೆಯಲು ಜಾಗ, ಕೋವಿಡ್ ಮುನ್ನೆಚ್ಚರಿಕೆಗಳ ಬಗ್ಗೆ ಫಲಕಗಳ ಪ್ರದರ್ಶನ
- ಮಾಸ್ಕ್ ಹಾಕದವರಿಗೆ ದಂಡ ವಿಧಿಸುವುದು
- ಮಾರುಕಟ್ಟೆ ಮಳಿಗೆಗಳನ್ನು ದಿನಬಿಟ್ಟು ದಿನ, ಬೇರೆ ಬೇರೆದಿನಗಳಲ್ಲಿ ತೆರೆಯುವುದು
- ಅತಿಹೆಚ್ಚು ಕೋವಿಡ್ ಪ್ರಕರಣ ಕಂಡುಬಂದರೆ ಮಾರುಕಟ್ಟೆಗಳನ್ನು ಮುಚ್ಚುವುದು
- ಮಾರುಕಟ್ಟೆಗಳಲ್ಲಿ ಕ್ಯೂ ಸಿಸ್ಟಂ ಜಾರಿಗೆ ತರುವುದು
- ಸಂಪರ್ಕ ತಡೆಗೆ ಡಿಜಿಟಲ್ ಪೇಮೆಂಟ್ ಉತ್ತೇಜಿಸುವುದು
ಇವೇ ಮೊದಲಾದ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಮಾರುಕಟ್ಟೆಯ ವ್ಯಾಪಾರಸ್ಥರು ಹಾಗೂ ಸಾರ್ವಜನಿಜರು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾರ್ಗಸೂಚಿ ಹೊರಡಿಸಿದೆ.