ETV Bharat / state

ಲಾಕ್​ಡೌನ್​ ಎಫೆಕ್ಟ್​ .. ಗಂಟುಮೂಟೆ ಹೊತ್ತು ಬೆಂಗಳೂರಿನಿಂದ ತವರಿನತ್ತ ಜನರ ಪಯಣ

ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕುವ ಭೀತಿಯಿಂದ ಸಾವಿರಾರು ಜನ ಬೆಂಗಳೂರಿನಿಂದ ರೈಲ್ವೆ ಮೂಲಕ ತಮ್ಮ ತಮ್ಮ ಊರಿಗೆ ಹೋಗಲು ಗಂಟುಮೂಟೆಯೊಂದಿಗೆ ರೈಲ್ವೆ ಷ್ಟೇಷನ್​ನಲ್ಲಿ ಕಾದು ಕುಳಿತಿರುವ ದೃಶ್ಯಗಳು ಕಂಡುಬರುತ್ತಿವೆ. ನಾಳೆಯಿಂದ 14 ದಿನಗಳ ಕಾಲ ಸರ್ಕಾರ ಲಾಕ್​ಡೌನ್​ ಘೋಷಿಸಿರುವ ಹಿನ್ನೆಲೆ ಕಾರ್ಮಿಕರು ಸೇರಿದಂತೆ ಜನರು ತಮ್ಮ ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

Many people going to hometown from Bangalore
ಲಾಕ್​ಡೌನ್​ ಭೀತಿಗೆ ರಾಜಧಾನಿಯಿಂದ ತಮ್ಮೂರಿನತ್ತ ಜನರ ಪ್ರಯಾಣ
author img

By

Published : May 9, 2021, 12:56 PM IST

ಬೆಂಗಳೂರು: ಕ್ಷಣಕ್ಷಣಕ್ಕೂ ರಾಜಧಾನಿ ಬೆಂಗಳೂರು ಬಿಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಗಂಟುಮೂಟೆ ಕಟ್ಟಿಕೊಂಡು ಊರಿನತ್ತ ಮುಖ ಮಾಡುತ್ತಿರುವವರಿಂದ ರೈಲು ನಿಲ್ದಾಣದಲ್ಲಿ ಜನರ ಸಂಖ್ಯೆ ಹೆಚ್ಚಾಗಿದೆ.

ಲಾಕ್​ಡೌನ್​ ಭೀತಿಗೆ ರಾಜಧಾನಿಯಿಂದ ತಮ್ಮೂರಿನತ್ತ ಜನರ ಪ್ರಯಾಣ

ಕೇವಲ ಅಂತಾ​ರಾಜ್ಯ ಮಾತ್ರವಲ್ಲದೇ ಅಂತರ್​ಜಿಲ್ಲೆಗೆ ಓಡಾಡುವವರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬರುತ್ತಿದೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಿದೆ. ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವ ಮುನ್ನ ತಮ್ಮೂರು ಸೇರಿದರಾಯ್ತೆಂದು ಜನರು ಸಾಗುತ್ತಿದ್ದಾರೆ.

ಕಾಯ್ದಿರಿಸದ ಟಿಕೆಟ್ ಝೋನ್​ನಲ್ಲಿ ಕೂಡ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಸಾವಿರಾರು ಜನ ದಿಢೀರನೇ ರಾಜಧಾನಿಯಿಂದ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ. ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ಬ್ಯಾಗುಗಳನ್ನು ಹಿಡಿದು ಸಾಗುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

ಇದನ್ನೂ ಓದಿ:ಉದ್ಯೋಗ ಕಳ್ಕೊಂಡು ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಿ: ಸಿಎಂಗೆ ಸಿದ್ದರಾಮಯ್ಯ ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.