ETV Bharat / state

ಹಾಲಿ, ಮಾಜಿ ಶಾಸಕರು ಸೇರಿದಂತೆ ಬಿಜೆಪಿ, ಜೆಡಿಎಸ್​​ನ ಹಲವರು ಕಾಂಗ್ರೆಸ್​ಗೆ ಬರ್ತಾರೆ: ಸಿಎಂ - ಹಾಲಿ ಮಾಜಿ ಶಾಸಕರು

CM Siddaramaiah on Operation Hasta: ಮೊನ್ನೆ ನಡೆದ ಬ್ರೇಕ್​ಫಾಸ್ಟ್ ಸಭೆಯಲ್ಲಿ ಆಪರೇಷನ್ ಹಸ್ತದ ಬಗ್ಗೆ ಚರ್ಚೆಯೇ ಆಗಿಲ್ಲ. ಅಲ್ಲಿ ಲೋಕಸಭಾ ಚುನಾವಣೆ ಮತ್ತು ಬರ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

many-people-from-bjp-jds-will-join-congress-including-current-and-former-mlas-cm-siddaramaiah
ಹಾಲಿ, ಮಾಜಿ ಶಾಸಕರು ಸೇರಿದಂತೆ ಬಿಜೆಪಿ, ಜೆಡಿಎಸ್​​ನಿಂದ ಹಲವರು ಕಾಂಗ್ರೆಸ್​ಗೆ ಬರುತ್ತಾರೆ: ಸಿಎಂ
author img

By ETV Bharat Karnataka Team

Published : Nov 6, 2023, 4:43 PM IST

Updated : Nov 6, 2023, 5:38 PM IST

ಬಿಜೆಪಿ, ಜೆಡಿಎಸ್​​ನ ಹಲವರು ಕಾಂಗ್ರೆಸ್​ಗೆ ಬರ್ತಾರೆ: ಸಿಎಂ

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್​​ನಿಂದ ಬಹಳಷ್ಟು ಜನ‌ ಕಾಂಗ್ರೆಸ್​ಗೆ ಬರುತ್ತಾರೆ. ಹಾಲಿ ಶಾಸಕರುಗಳೂ ಹಾಗೂ ಮಾಜಿಗಳು ಬರ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹ ಕಚೇರಿಯಲ್ಲಿಂದು ಮಾತನಾಡಿದ ಅವರು, ಬರುವವರನ್ನೆಲ್ಲರನ್ನೂ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ನೋ ಆಪರೇಷನ್​, ಪಕ್ಷದ ಸಿದ್ಧಾಂತ ಒಪ್ಪಿ ಬರುವವರು ಬಿಜೆಪಿಯವರಾಗಿರಲಿ ಅಥವಾ ಜೆಡಿಎಸ್​ನವರಾಗಿರಲಿ, ಅವರನ್ನು ಕಾಂಗ್ರೆಸ್​​ಗೆ ಸೇರಿಸಿಕೊಳ್ಳುತ್ತೇವೆ ಎಂದರು.

ಪ್ರಧಾನಿ ಮೋದಿಗೆ ಸಿಎಂ ತಿರುಗೇಟು: ಮಧ್ಯಪ್ರದೇಶ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಕರ್ನಾಟಕ ಸರ್ಕಾರದ ವಿರುದ್ಧ ಮಾಡಿದ ಭಾಷಣಕ್ಕೆ ತಿರುಗೇಟು ನೀಡಿದ ಸಿಎಂ, ಮೋದಿಯವರು ರಾಜಕೀಯ ಭಾಷಣ ಮಾಡಿದ್ದಾರೆ. ರಾಜಕೀಯ ಅರೋಪ ಮಾಡುತ್ತ ಊಹಾಪೋಹದ ಹೇಳಿಕೆ ಕೊಟ್ಟಿದ್ದಾರೆ. ಪಾಪ ಅವರು ನಿರಾಶರಾಗಿದ್ದು, ರಾಜ್ಯಕ್ಕೆ 48 ಬಾರಿ ಬಂದರೂ, ಅವರು ಹೋದ ಕಡೆಯಲ್ಲಾ ಸೋತರು. ರೊಡ್ ಶೋ, ಸಾರ್ವಜನಿಕ ಸಭೆ ಮಾಡಿದಲ್ಲೆಲ್ಲ ಸೋತಿದ್ದಾರೆ. ಹಾಗಾಗಿ ಇಲ್ಲಿಯವರೆಗೆ ವಿರೋಧ ಪಕ್ಷದ ನಾಯಕನನ್ನು ಮಾಡಲು ಆಗಿಲ್ಲ. ಅಷ್ಟರಮಟ್ಟಿಗೆ ಬಿಜೆಪಿ ದಿವಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಡಿಸಿಎಂ, ಸಿಎಂ ಲೂಟಿ ಮಾಡುತ್ತಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, 40% ಲೂಟಿ ಮಾಡುತ್ತಿದ್ದಾರೆ ಅಂತ ಹೇಳಿದ್ದು ಯಾರು? ಆಗ ಯಾವ ಸರ್ಕಾರ ಇತ್ತು. ಆಗ ನರೇಂದ್ರ ಮೋದಿ ಪಕ್ಷವೇ ಇದ್ದಿದ್ದು. ನಮ್ಮ ಮೇಲೆ ಆ ತರ ಹೇಳಿದ್ರಾ? ಅದಕ್ಕೆ ನಾವೆಲ್ಲ ತನಿಖೆ ಮಾಡಿಸುತ್ತಿದ್ದೇವೆ. ಈ ದೇಶದ ಪ್ರಧಾನಿಯಾಗಿ ಅದರ ಬಗ್ಗೆ ಹೇಳಬೇಕಲ್ವಾ? ಅವರಿಗೆ ಏನಾದರೂ ದಾಖಲಾತಿ ಇದ್ದರೆ ಹೇಳಲಿ. ಒಬ್ಬ ಪ್ರಧಾನಿಯಾಗಿದ್ದುಕೊಂಡು ಸುಳ್ಳು ಹೇಳಬಾರದು, ಲಘುವಾಗಿ ಮಾತನಾಡಬಾರದು. ಅವರಿಗೆ ಐಬಿ (ಇಂಟೆಲಿಜೆನ್ಸ್ ಬ್ಯೂರೋ), ರಾ (ಆರ್‌ಎಡಬ್ಲ್ಯೂ), ಕೇಂದ್ರ ತನಿಖಾ ದಳ (ಸಿಬಿಐ) ಇದೆ. ಅದರ ಮೂಲಕ ತನಿಖೆ ಮಾಡಲಿ. ದೇಶ ಇವತ್ತು ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಇನ್ನೂ ಕೂಡ ಅವರಿಗೆ ಬರಗಾಲದ ಪರಿಹಾರ ಕೊಡಲು ಆಗಿಲ್ಲ. ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ನಮ್ಮಿಂದ ಸಾಧ್ಯವಿಲ್ಲ ಅಂತಾ ಪ್ರಧಾನಿ ಮೋದಿ ಹೇಳಿದ್ದರು. ಈಗ ನಾವು ಜಾರಿ ಮಾಡಿಲ್ವಾ? ಈ ರೀತಿ ಹೇಳಿಕೆ ಕೊಡುತ್ತಾರೆ ಅಂತಾ ನಾನು ನಿರೀಕ್ಷೆ ಮಾಡಿರಲಿಲ್ಲ. ಇದೆಲ್ಲ ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಸಿಎಂ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ, ಅಮಿತ್​ ಶಾ ರಿಂದ ದುಡ್ಡು ಕೊಡಿಸಲಿ: ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಅವರ ರೈತ ಸಾಂತ್ವನ ಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅವರು ರೈತ ಸಾಂತ್ವನ ಯಾತ್ರೆ ಮಾಡಲಿ ಸಂತೋಷ. ಅವರು ಬರದ ವರದಿಯನ್ನು ಕೊಡಲಿ, ನಾವು ಪರಿಗಣಿಸುತ್ತೇವೆ. ಹಾಗೆಯೇ ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ದುಡ್ಡು ಬಿಡುಗಡೆ ಮಾಡಿಸಲಿ. ಲೋಕಸಭೆ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿದ್ದಾರೆ, ಅವರ ಮಾತನ್ನು ಪ್ರಧಾನಿ ಕೇಳುತ್ತಾರೆ ಎಂದರು.

ಚಿಟ್ ಫಂಡ್​​ಗೆ ಗ್ಯಾರಂಟಿ ಹಣ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸದ್ಯ ಆ ರೀತಿ ಯಾವುದೇ ಯೋಜನೆಗಳಿಲ್ಲ. ಪಂಚ ಗ್ಯಾರಂಟಿ ಮೂಲಕ ಜನರ ಖಾತೆಗೆ ಹಣ ಹಾಕುತ್ತಿದ್ದೇವೆ. ಅವರು ಅದನ್ನು ಯಾವುದಕ್ಕಾದರೂ ಬಳಕೆ ಮಾಡಬಹುದು. ಡಿಬಿಟಿ ಮೂಲಕ ನಾವು ದುಡ್ಡು ಕಳಿಸುತ್ತೇವೆ. ಈ ಯೋಜನೆ ಹಾಗೆಯೇ ಮುಂದುವರೆಯುತ್ತದೆ. ಆ ಹಣವನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಅದು ಅವರಿಗೆ ಬಿಟ್ಟ ವಿಚಾರ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಲೋಕಸಭೆ ಚುನಾವಣೆ ಮುನ್ನ ಅಥವಾ ಚುನಾವಣೆ ಬಳಿಕ ಸಿಎಂ ಬದಲಾವಣೆ ಫಿಕ್ಸ್ ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಅವರಿಗ್ಯಾಕೆ ನಮ್ಮ ಪಕ್ಷದ ಬಗ್ಗೆ ಚಿಂತೆ? ನಮ್ಮ ಹೈಕಮಾಂಡ್ ಇದೆ, ಅವರು ತೀರ್ಮಾನ ಮಾಡ್ತಾರೆ. ಅವರು ತೀರ್ಮಾನ ಮಾಡುವುದನ್ನು ಹೇಳುವುದಕ್ಕೆ ಇವನ್ಯಾರು ಎಂದು ತಿರುಗೇಟು ನೀಡಿದರು‌.

ರಾಜ್ಯದ ಜನ ಕೂಲ್ ಆಗಿದ್ರೆ ನಾನೂ ಕೂಲ್: ಇವತ್ತು ತುಂಬಾ ಕೂಲ್ ಆಗಿದ್ದೀರಿ ಸಿಎಂ ಸರ್ ಎಂದು ಕೇಳಿದ್ದಕ್ಕೆ, ನೀವು (ಮಾಧ್ಯಮದವರು) ಕೂಲ್ ಆಗಿದ್ರೆ ನಾನೂ ಕೂಲಾಗಿರುತ್ತೇವೆ. ರಾಜ್ಯದ ಜನ ಕೂಲ್ ಆಗಿದ್ರೆ ನಾವೂ ಕೂಲ್ ಆಗಿರುತ್ತೇವೆ ಎಂದು ಪ್ರತಿಕ್ರಿಯಿಸಿದರು. ಜನ ಖುಷಿಯಲ್ಲಿ‌ ಇದ್ದಾರೆ, ಆದ್ರೆ ಬಿಜೆಪಿ ಮತ್ತು ಜೆಡಿಎಸ್​​ನವರಿಗೆ ಸಹಿಸಿಕೊಳ್ಳೇಕೆ ಆಗುತ್ತಿಲ್ಲ, ಹತಾಶರಾಗಿದ್ದಾರೆ ಎಂದು ಹೇಳಿದ್ರು.

ಇದನ್ನೂ ಓದಿ: ಇನ್ಮುಂದೆ ರಾಜ್ಯದೆಲ್ಲೆಡೆ ಕೃಷಿ ಪಂಪ್​ಸೆಟ್​ಗಳಿಗೆ ಏಳು ತಾಸು ನಿರಂತರ ವಿದ್ಯುತ್ ಪೂರೈಕೆ: ಸಿಎಂ ಘೋಷಣೆ

Last Updated : Nov 6, 2023, 5:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.