ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿ.ಪ್ಯಾಕ್ ಸಂಸ್ಥೆ ಹಮ್ಮಿಕೊಂಡಿದ 'ಮೊಳೆ ಮುಕ್ತ ಮರ ಬೆಂಗಳೂರು ಅಭಿಯಾನ'ಕ್ಕೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಚಿತ್ರಕಲಾ ಪರಿಷತ್ತು (ಶಿವಾನಂದ ವೃತ್ತ) ಬಸ್ ನಿಲ್ದಾಣ ಹತ್ತಿರ ನಿನ್ನೆ ಚಾಲನೆ ನೀಡಿದರು.
ನಗರದಲ್ಲಿ ಮರಗಳ ಮೇಲೆ ಬಿತ್ತಿಪತ್ರಗಳನ್ನು ಅಂಟಿಸಲು ಮೊಳೆ, ಸ್ಟ್ಯಾಪ್ಲರ್ ಮೂಲಕ ಪಿನ್ ಹೊಡೆದಿದ್ದಾರೆ. ಅಲ್ಲದೆ ಕೇಬಲ್ಗಳನ್ನು ಮರಗಳಿಗೆ ಸುತ್ತಿದ್ದಾರೆ. ಇದರ ವಿರುದ್ಧ ಬಿಪ್ಯಾಕ್ ಸಂಸ್ಥೆ ನಡೆಸುತ್ತಿರುವ 'ಮೊಳೆ ಮುಕ್ತ ಮರ ಬೆಂಗಳೂರು ಅಭಿಯಾನ' ಶ್ಲಾಘನೀಯ ಎಂದು ಆಯುಕ್ತರು ಹೇಳಿದರು.
ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ತಡೆಗೆ ವಿಪಕ್ಷಗಳು ಚಿಂತಿಸಿದ್ದವು: ಆರ್. ಅಶೋಕ್
ಈ ಬಗ್ಗೆ ಟ್ವೀಟ್ ಮಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಮರಗಳು ಕೂಡ ಮನುಷ್ಯರು ಇದ್ದ ಹಾಗೆ. ಮನುಷ್ಯರಿಗೆ ನೋವಾದ ಹಾಗೆಯೇ ಮರಗಳಿಗೂ ಕೂಡ ನೋವಾಗುತ್ತದೆ. ಮರಕ್ಕೆ ಮೊಳೆ, ಕೇಬಲ್, ತಂತಿಗಳನ್ನು ಸುತ್ತಿದರೆ ಗಾಯವಾಗಿ ಸರಿಯಾಗಿ ಆಹಾರ, ನೀರು, ಪೌಷ್ಟಿಕಾಂಶ ಸಿಗದೆ ಒಣಗಲಿವೆ. ಆದ್ದರಿಂದ ಮರಗಳ ಮೇಲೆ ಬಿತ್ತಿಪತ್ರಗಳು ಅಂಟಿಸುವುದು, ಮೊಳೆ ಹೊಡೆಯುವುದನ್ನು ನಿಷೇಧಿಸಿದ್ದರೂ ಸಹ ಬಿತ್ತಿಪತ್ರಗಳನ್ನು ಅಂಟಿಸಲಾಗುತ್ತಿದೆ. ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಕ್ರಮಕೈಗೊಳ್ಳಲಾಗುತ್ತಿದೆ. ಜೊತೆಗೆ ಮರಗಳಿಗೆ ಹಾನಿ ಮಾಡುವ, ಮೊಳೆ/ಸ್ಟ್ಯಾಪ್ಲರ್ನಲ್ಲಿ ಪಿನ್ ಹೊಡೆಯುವ ಸಂಬಂಧ ಕಾನೂನಿನಲ್ಲಿ ತಿದ್ದುಪಡಿ ತಂದು ಶಿಕ್ಷಾರ್ಹ ಅಪರಾದವನ್ನಾಗಿ ಮಾಡಿದರೆ ಈ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ.