ETV Bharat / state

ಮನೀಶ್ ಶೆಟ್ಟಿ ಕೊಲೆ ಪ್ರಕರಣ.. ಪೊಲೀಸ್ ಕಸ್ಟಡಿಯಲ್ಲಿದ್ದ ಪ್ರಮುಖ ಆರೋಪಿಗೆ ಕೊರೊನಾ ಸೋಂಕು - ಬೆಂಗಳೂರು ಕ್ರೈಮ್​ ಲೇಟೆಸ್ಟ್​ ನ್ಯೂಸ್

ಮನೀಶ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಮುನ್ನ ಪೊಲೀಸರು ಕೋವಿಡ್ ಪರೀಕ್ಷೆಗೊಳಪಡಿಸಿದ್ದರು..

ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗೆ ಕೋವಿಡ್ ಪಾಸಿಟಿವ್​
Covid positive for accused in police custody
author img

By

Published : Dec 30, 2020, 8:57 AM IST

Updated : Dec 30, 2020, 9:06 AM IST

ಬೆಂಗಳೂರು : ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗೆ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಅ.15ರಂದು‌ ಹೆಚ್​​ಪಿ ಸ್ಟ್ರೀಟ್​​ನಲ್ಲಿ ಲೇಡಿಸ್ ಬಾರ್ ಮಾಲೀಕ ಮನೀಶ್ ಶೆಟ್ಟಿ ಎಂಬುವರನ್ನು ಹಳೇ ದ್ವೇಷದ ಹಿನ್ನೆಲೆ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಅ.17ರಂದು ಪ್ರಮುಖ ಆರೋಪಿಗಳ ಬಂಧನವಾಗಿತ್ತು. ತಲೆಮರೆಸಿಕೊಂಡಿದ್ದ ಇನ್ನೂ ಕೆಲ ಆರೋಪಿಗಳನ್ನ ಪೊಲೀಸರು ಮತ್ತೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.

ಓದಿ:ಕೊರೊನಾ ರೂಪಾಂತರ ವೈರಸ್ ​: ಯುಕೆಯಿಂದ ಬಂದ ಮೂವರಿಗೆ ಸೋಂಕು ದೃಢ

ಮನೀಶ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಮುನ್ನ ಪೊಲೀಸರು ಕೋವಿಡ್ ಪರೀಕ್ಷೆಗೊಳಪಡಿಸಿದ್ದರು. ಎರಡು ಬಾರಿ ಕೋವಿಡ್ ಪರೀಕ್ಷೆ ಮಾಡಿಸಿದಾಗಲೂ ಆರೋಪಿಗೆ ಸೋಂಕು ದೃಢಪಟ್ಟಿದೆ.

ಸದ್ಯ ಅಶೋಕನಗರ ಪೊಲೀಸ್​ ಠಾಣೆಗೆ ಸ್ಯಾನಿಟೈಸಿಂಗ್ ಮಾಡಿ ಕೋವಿಡ್ ಪರೀಕ್ಷೆಗೆ ತನಿಖಾಧಿಕಾರಿಗಳು ಕೂಡ ಒಳಪಟ್ಟಿದ್ದಾರೆ.

Last Updated : Dec 30, 2020, 9:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.