ಬೆಂಗಳೂರು: ಡುಯೆಟ್ ಪಬ್ ಮಾಲೀಕ ಮನೀಶ್ ಶೆಟ್ಟಿ ಮರ್ಡರ್ ಮಿಸ್ಟರಿಯನ್ನು ಆರೋಪಿಗಳು ರಿವೀಲ್ ಮಾಡಿದ್ದಾರೆ. ಮನೀಶ್ ಕೊಲೆಗೂ ಮುನ್ನ ಆರೋಪಿಗಳು ಹಲವು ಕೊಲೆ ಕೇಸ್ ಸ್ಟಡಿ ಮಾಡಿರುವ ವಿಚಾರವನ್ನು ತನೀಕಾಧಿಕಾರಿಗಳ ಎದುರು ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.
ಫೈರಿಂಗ್ ಮಾಡಿದ್ರೆ ಕೆಲವೊಮ್ಮೆ ಎದುರಾಳಿ ಸಾಯೋದು ಅನುಮಾನ ಎಂದು ಅರಿತಿದ್ದ ಆರೋಪಿಗಳು, ಗನ್ನಿಂದ ತಲೆಗೆ, ಎದೆಗೆ ಶೂಟ್ ಮಾಡಿದ್ರೆ ಮಾತ್ರ ಸಾಯುತ್ತಾರೆ ಎನ್ನುವ ವಿಚಾರವನ್ನು ಸ್ಟಡಿ ಮಾಡಿದ್ದರು. ಗನ್ನಿಂದ ಶೂಟ್ ಮಾಡಿದ್ರೆ ಎದುರಾಳಿ ಕುಸಿದು ಬೀಳ್ತಾನೆ, ತದನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡುವ ಬಗ್ಗೆ ಮೊದಲೇ ಸ್ಕೆಚ್ ಹಾಕಿದ್ದರು ಎಂದು ಹೇಳಲಾಗ್ತಿದೆ.
ಹೀಗಾಗಿ ಇದಕ್ಕೆ ಪರವಾನಿಗೆಯಿದ್ದ ಸಿಂಗಲ್ ಬ್ಯಾರಲ್ ಗನ್ ಪಡೆದಿರುವ ವಿಚಾರ ಬಯಲಾಗಿದೆ. ಮನೀಶ್ ಶೆಟ್ಟಿ ಮೇಲೆ ಫೈರಿಂಗ್ ಮಾಡಲು ಬಳಸಿದ್ದ ಗನ್ಗೆ ಲೈಸೆನ್ಸ್ ಇತ್ತು. ಆದರೆ ಫೈರಿಂಗ್ನಲ್ಲಿ ಎಕ್ಸ್ಪರ್ಟ್ಗಳಲ್ಲದ ಕಾರಣ ಒಂದು ಗುಂಡು ಹಾರಿಸಿ ಬಳಿಕ ಮಚ್ಚಿನಿಂದಲೇ ಮನೀಶ್ ಶೆಟ್ಟಿ ಕೊಚ್ಚಿ ಕೊಂದಿದ್ದಾಗಿ ಹೇಳಿದ್ದಾರೆ. ಇನ್ನು ಪೊಲೀಸರ ತನಿಖೆ ವೇಳೆ, ಕಡಬಗೆರೆ ರೌಡಿಶೀಟರ್ ಶ್ರೀನಿವಾಸ್ ಮೇಲೆ 2017ರ ಫೆಬ್ರವರಿಯಲ್ಲಿ ನಡೆದಿದ್ದ ಫೈರಿಂಗ್ ಕೇಸ್ ಜೊತೆಗೆ ಹಲವು ಫೈರಿಂಗ್ ಕೇಸ್ಗಳನ್ನು ಸ್ಟಡಿ ಮಾಡಿದ್ದರು ಎಂದು ಬಾಯ್ಬಿಟ್ಟಿದ್ದಾರೆ. ಯಲಹಂಕದ ಕೊಗಿಲು ಕ್ರಾಸ್ನಲ್ಲಿ ಒಟ್ಟು 6 ರೌಂಡ್ ಫೈಯರ್ ಮಾಡಿದ್ದ ದುಷ್ಕರ್ಮಿಗಳು, ಎರಡು ಬುಲೆಟ್ ಶ್ರೀನಿವಾಸ್ ದೇಹಕ್ಕೆ ಹೊಕ್ಕಿಯೂ ಕೂಡ ಅವರು ಬದುಕುಳಿದಿದ್ರು. ಇಂಥಹ ಹಲವು ಕೇಸ್ ಸ್ಟಡಿ ಮಾಡಿ, ಇದೇ ಕಾರಣಕ್ಕೆ ಬಂದೂಕಿನಿಂದ ಶೂಟ್ ಮಾಡಿದ ತಕ್ಷಣ ಮಚ್ಚಿನಿಂದ ಕೊಚ್ಚಿ ಪರಾರಿಯಾಗಿರುವ ಸಂಗತಿಯನ್ನು ಹೊರಹಾಕಿದ್ದಾರೆ ಎನ್ನಲಾಗ್ತಿದೆ.
ಸದ್ಯ ಮನೀಶ್ ಶೆಟ್ಟಿ ಕೇಸ್ನಲ್ಲಿ ಮತ್ತೊಬ್ಬ ಆರೋಪಿ ಸುನೀಲ್ ಸಿಕ್ಕಿಬಿದ್ದಿದ್ದಾನೆ. ಈತ ನಗರದ ಮೆಹಂದಿ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ. ಮನೀಶ್ ಶೆಟ್ಟಿ ಕೊಲೆಯಾದ ದಿನ, ಈತ ಮನೆಯಿಂದ ಶೆಟ್ಟಿಯನ್ನು ಹಿಂಬಾಲಿಸಿ ಕಾನ್ಫರೆನ್ಸ್ ಕಾಲ್ನಲ್ಲಿ ಹಂತಕರಿಗೆ ಮನೀಶ್ ಶೆಟ್ಟಿ ಮೂಮೆಂಟ್ ಬಗ್ಗೆ ಹೇಳುತ್ತಿದ್ದ ಕಾರಣ ಈತನನ್ನು ಬಂಧಿಸಲಾಗಿದೆ. ಈ ಮರ್ಡರ್ ಪ್ರಕರಣ ಸಂಬಂಧ ಈವರೆಗೆ ಐವರು ಆರೋಪಿಗಳ ಬಂಧನವಾಗಿದ್ದು, ಪ್ರಮುಖ ಆರೋಪಿ ವಿಕ್ಕಿ ಶೆಟ್ಟಿಗೆ ಶೋಧ ನಡೆಸಿದ್ದಾರೆ.
ಏನಿದು ಪ್ರಕರಣ?
ಅಕ್ಟೊಬರ್ 15ರಂದು ಕೇಂದ್ರ ವಿಭಾಗದ ವ್ಯಾಪ್ತಿಯ ಬ್ರಿಗೇಡ್ ರಸ್ತೆ ಹತ್ತಿರದ ಆರ್.ಎಚ್.ಪಿ. ರಸ್ತೆಯ ಡ್ಯುಯೆಟ್ ಬಾರ್ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಮನೀಶ್ ಶೆಟ್ಟಿ ನಿಂತಿದ್ದರು. ಈ ವೇಳೆ ಸ್ಕೂಟರ್ನಲ್ಲಿ ಬಂದು ಆರೋಪಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ರು. ಹೀಗಾಗಿ ಮೊದಲು ಪೊಲೀಸರು ನಾಲ್ವರನ್ನ ಬಂಧಿಸಿದ್ದರು. ತನಿಖೆ ವೇಳೆ ಉಡುಪಿಯ ಹಿರಿಯಡ್ಕ ಸಮೀಪ ಪಾತಕಿ ವಿಕ್ಕಿ ಶೆಟ್ಟಿ ಸಹಚರ ಮಂಗಳೂರಿನ ರೌಡಿ ಶಿಟರ್ ಕಿರಣ್ ಅಲಿಯಾಸ್ ಕಿಶನ್ ಹತ್ಯೆ ಮಾಡಿರುವ ಪ್ರತೀಕಾರವಾಗಿ ಮನೀಶ್ ಕೊಲೆ ಮಾಡಿದ್ದಾಗಿ ತಿಳಿಸಿದ್ದರು.