ಬೆಂಗಳೂರು: ಭಾರತದ ಅತಿದೊಡ್ಡ ಮಲ್ಟಿ-ಸ್ಪೆಷಾಲಿಟಿ ಹೆಲ್ತ್‌ಕೇರ್ ಪ್ರೊವೈಡರ್‌ಗಳಲ್ಲಿ ಒಂದಾದ ಮಣಿಪಾಲ್ ಆಸ್ಪತ್ರೆಯು ಇಂದು ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್ನ ಸಂಪೂರ್ಣ ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶವನ್ನು ಪ್ರಕಟಿಸಿದೆ. ಮಣಿಪಾಲ್ ಆಸ್ಪತ್ರೆಗಳಿಗೆ ಮಾಲೀಕತ್ವದ ವರ್ಗಾವಣೆ ಪ್ರಕ್ರಿಯೆ ಅನುಮೋದನೆಗಳ ನಂತರ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಕ್ಲಿನಿಕಲ್ ಮತ್ತು ಸೇವಾ ಗುಣಮಟ್ಟದಲ್ಲಿ ಕೊಲಂಬಿಯಾ ಏಷ್ಯಾದ ಸಾಮರ್ಥ್ಯದಿಂದ ಪೂರಕವಾದ ಮಣಿಪಾಲ್ ಆಸ್ಪತ್ರೆಗಳ ಬಲವಾದ ಕ್ಲಿನಿಕಲ್ ಪರಿಣತಿ ಮತ್ತು ಸೇವೆಗಳ ವಿಸ್ತರಣೆ, ಪ್ರವೇಶವನ್ನು ಸುಧಾರಿಸಲು ಮತ್ತು ಉತ್ತಮ ಗುಣಮಟ್ಟದ ತೃತೀಯ ಮತ್ತು ಕ್ವಾಟರ್ನರಿ ಹೆಲ್ತ್‌ಕೇರ್‌ಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸಲು ಸಮಗ್ರ ಸಂಘಟನೆಯನ್ನು ಅನನ್ಯವಾಗಿ ಇರಿಸಲಾಗುವುದು ಎಂದು ಖಚಿತಪಡಿಸುತ್ತಿದೆ.
ಈ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ (ಎಂಇಎಂಜಿ) ಅಧ್ಯಕ್ಷ ಡಾ.ರಂಜನ್ ಪೈ, ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳು ಮಣಿಪಾಲ್ ಕುಟುಂಬಕ್ಕೆ ಸೇರುತ್ತಿರುವುದು ತುಂಬಾ ಸಂತೋಷ ನೀಡಿದೆ ಮತ್ತು ಅವರ ಆರೋಗ್ಯ ವಿತರಣೆಯ ಅತ್ಯುತ್ತಮ ದಾಖಲೆಯನ್ನು ಹೆಮ್ಮೆಯಿಂದ ಅಂಗೀಕರಿಸಿದ್ದೇವೆ. ದೇಶದಲ್ಲೇ ಉತ್ತಮ ಗುಣಮಟ್ಟ ಹೊಂದಿರುವ ಕೊಲಂಬಿಯಾ ಏಷ್ಯಾವು ಕ್ಲಿನಿಕಲ್ ಶ್ರೇಷ್ಠತೆ, ರೋಗಿಗಳ ಆರೈಕೆಯನ್ನು ಒದಗಿಸುವ ನಮ್ಮ ಬದ್ಧತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಮಗೆ ಮತ್ತು ಕೊಲಂಬಿಯಾ ಏಷ್ಯಾದೊಂದಿಗೆ ಅಸಾಧಾರಣ ಪ್ರಯಾಣದ ಪ್ರಾರಂಭವಾಗಿದೆ ಎಂದು ತಿಳಿಸಿದರು.
ಕೊಲಂಬಿಯಾ ಏಷ್ಯಾ ಆಸ್ಪತ್ರೆ 2005ರಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿ ಆರಂಭವಾಯಿತು. ಪ್ರಸ್ತುತ ಬೆಂಗಳೂರು, ಮೈಸೂರು, ಕೋಲ್ಕತಾ, ಗುರುಗ್ರಾಮ್, ಗಾಜಿಯಾಬಾದ್, ಪಟಿಯಾಲ ಮತ್ತು ಪುಣೆ ಸೇರಿದಂತೆ ದೇಶಾದ್ಯಂತ 11 ಆಸ್ಪತ್ರೆಗಳು ಇವೆ. ನೆಟ್ವರ್ಕ್ 1,300 ಹಾಸಿಗೆಗಳು, 1,200 ವೈದ್ಯರು ಮತ್ತು 4,000 ಉದ್ಯೋಗಿಗಳನ್ನು ಒಳಗೊಂಡಿದೆ.
ವಹಿವಾಟಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಕೊಲಂಬಿಯಾ ಪೆಸಿಫಿಕ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಡಾನ್ ಬಾಟಿ, ಮೊದಲ ದಿನದಿಂದ, ಸಮಗ್ರತೆ ಮತ್ತು ಅಸಾಧಾರಣ ಸೇವೆಯೊಂದಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡಲು ರೋಗಿಯನ್ನು ಮೊದಲ ಸ್ಥಾನದಲ್ಲಿಡುವ ಸಂಸ್ಕೃತಿಯನ್ನು ನಿರ್ಮಿಸುವತ್ತ ನಾವು ಗಮನಹರಿಸಿದ್ದೇವೆ. ಕೊಲಂಬಿಯಾ ಏಷ್ಯಾ ಮತ್ತು ಮಣಿಪಾಲ್ ಆಸ್ಪತ್ರೆಗಳ ಈ ಸಂಯೋಜನೆಯು ಎರಡು ಕಂಪನಿಗಳ ನಡುವಿನ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಇದು ಮುಂದಿನ ಬೆಳವಣಿಗೆಗೆ ಸಹಾಯವಾಗಲಿದೆ ಎಂದು ತಿಳಿಸಿದರು. ಎರಡು ಆಸ್ಪತ್ರೆಗಳ ಸಂಯೋಜನೆಯಿಂದ ಇದೀಗ, 15 ನಗರಗಳಲ್ಲಿ 27 ಆಸ್ಪತ್ರೆಗಳು 7,300ಕ್ಕೂ ಹೆಚ್ಚು ಹಾಸಿಗೆಗಳೊಂದಿಗೆ ಮತ್ತು 4,000ಕ್ಕೂ ಅಧಿಕ ವೈದ್ಯರು ಮತ್ತು 10,000ಕ್ಕೂ ಅಧಿಕ ಉದ್ಯೋಗಿಗಳು ಸೇರಿದ್ದಾರೆ.