ETV Bharat / state

ಬೆಂಗಳೂರಿನಲ್ಲಿ ಶೀಘ್ರದಲ್ಲೇ ಜಾರಿಯಾಗುತ್ತಾ ಕಡ್ಡಾಯ ಪಾರ್ಕಿಂಗ್ ರೂಲ್ಸ್? - ಬೆಂಗಳೂರಿನಲ್ಲಿ ಕಡ್ಡಾಯ ಪಾರ್ಕಿಂಗ್ ರೂಲ್ಸ್

ರಾಜಧಾನಿ ಬೆಂಗಳೂರಿನಲ್ಲಿ ಪಾರ್ಕಿಂಗ್, ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಮತ್ತೊಂದು ಮಾಸ್ಟರ್ ಪ್ಲಾನ್ ರೆಡಿಯಾಗ್ತಿದೆ. ವಾಹನ ಪ್ರಿಯರಿಗೆ ಸಾರಿಗೆ ಇಲಾಖೆಯಿಂದ ಶೀಘ್ರದಲ್ಲೇ ಬಿಗ್ ಶಾಕಿಂಗ್ ನ್ಯೂಸ್ ಬರಲಿದೆ.‌.

parking-rules
ಪಾರ್ಕಿಂಗ್ ರೂಲ್ಸ್​
author img

By

Published : Feb 8, 2022, 10:58 PM IST

ಬೆಂಗಳೂರು : ರಾಜಧಾನಿಯಲ್ಲಿ ದಿನ ಕಳೆದಂತೆ ವ್ಯಾಪ್ತಿ ವಿಸ್ತರಣೆ ಆಗ್ತಿದೆ. ವಿಶಾಲವಾಗಿರುವ ಉದ್ಯಾನನಗರಿಯಲ್ಲಿ ಜನಸಂಖ್ಯೆಯು ಹೆಚ್ಚುತ್ತಿದ್ದು, ಜೊತೆಗೆ ವಾಹನಗಳ ಬಳಕೆಯು ಜಾಸ್ತಿಯಾಗಿದೆ.

ಹೀಗಾಗಿ, ಪಾರ್ಕಿಂಗ್ ಸಮಸ್ಯೆಯೇ ದೊಡ್ಡ ಸವಾಲಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತಯಾರಿ ನಡೆದಿದೆ. ಇನ್ಮುಂದೆ ಹೊಸ ಕಾರು ಖರೀದಿ ಮಾಡುವವರು ಯೋಚನೆ ಮಾಡಿ ಖರೀದಿಸಬೇಕಿದೆ‌.‌

ಏಕೆಂದರೆ, ರಾಜಧಾನಿ ಬೆಂಗಳೂರಿನಲ್ಲಿ ಪಾರ್ಕಿಂಗ್, ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಮತ್ತೊಂದು ಮಾಸ್ಟರ್ ಪ್ಲಾನ್ ರೆಡಿಯಾಗ್ತಿದೆ. ವಾಹನ ಪ್ರಿಯರಿಗೆ ಸಾರಿಗೆ ಇಲಾಖೆಯಿಂದ ಶೀಘ್ರದಲ್ಲೇ ಬಿಗ್ ಶಾಕಿಂಗ್ ನ್ಯೂಸ್ ಬರಲಿದೆ.‌

ಇನ್ಮುಂದೆ ನಿಮ್ಮ ನಿವಾಸದಲ್ಲಿ ಪಾರ್ಕಿಂಗ್ ಜಾಗ ಇಲ್ದೇ ಹೋದ್ರೆ ವಾಹನ ರಿಜಿಸ್ಟ್ರೇಷನ್ ಆಗೋದೇ ಇಲ್ಲ!. ನಿವಾಸದಲ್ಲಿ ಪಾರ್ಕಿಂಗ್ ಜಾಗ ಇದ್ರೆ ಮಾತ್ರ ಆರ್​ಟಿಓ ಕಚೇರಿಯಲ್ಲಿ ಕಾರು ನೋಂದಣಿ ಸಾಧ್ಯವಾಗಲಿದೆ. ಇಂತಹ ಕಠಿಣ ರೂಲ್ಸ್ ಜಾರಿ ಮಾಡೋಕೆ ಗಂಭೀರ ಚಿಂತನೆಯನ್ನ ಸರ್ಕಾರ ನಡೆಸಿದೆ.‌

ಇಷ್ಟಕ್ಕೂ ಹೇಗೆ ಇರಲಿದೆ ಈ ಹೊಸ ರೂಲ್ಸ್?

ಹೊಸ ವಾಹನ ಖರೀದಿಸಬೇಕಾದ್ರೆ ಮನೆಯಲ್ಲಿ ಪಾರ್ಕಿಂಗ್ ಜಾಗ ಕಡ್ಡಾಯ ಮಾಡಲಿದ್ದು, ಪಾರ್ಕಿಂಗ್ ಸ್ಥಳದ ಬಗ್ಗೆ ದಾಖಲೆ ನೀಡಿದ್ರೆ ಮಾತ್ರ ಆರ್‌​​ಟಿಒ ಕಚೇರಿಯಲ್ಲಿ ವಾಹನ ನೋಂದಣಿ ಸಾಧ್ಯವಾಗಲಿದೆ.

ಪಾರ್ಕಿಂಗ್ ಜಾಗ ಇಲ್ಲದಿದ್ರೆ ಹೊಸ ವಾಹನ ನೋಂದಣಿಗೆ ಅನುಮತಿ ಸಿಗುವುದಿಲ್ಲ. ಬೆಂಗಳೂರು ನಗರದಲ್ಲಿ ವಾಹನ ಸಂಖ್ಯೆ ಹೆಚ್ಚುತ್ತಿದೆ. ರಾಜಧಾನಿಯೊಂದರಲ್ಲೇ ವಾಹನಗಳ ಸಂಖ್ಯೆ 90 ಲಕ್ಷ ಗಡಿ ದಾಟಿದೆ.‌ ಹೀಗಾಗಿ, ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್ ಮಾಡಲಿದ್ದಾರೆ. ಶೀಘ್ರದಲ್ಲೇ ಅಂತಿಮ ಆದೇಶ ಪ್ರಕಟ ಮಾಡುವ ಸಾಧ್ಯತೆ ಇದ್ದು, ಈಗಾಗಲೇ ಸರ್ಕಾರ ಜೊತೆ ಮಾತುಕತೆಯನ್ನ ಸಾರಿಗೆ ಇಲಾಖೆ ನಡೆಸಿದೆ.

ಕಾರು ಪಾರ್ಕಿಂಗ್ ಜಾಗದ ಬಗ್ಗೆ ಬಿಬಿಎಂಪಿ ಎನ್​ಒಸಿ ಸಹ ಕಡ್ಡಾಯವಾಗಿದೆ. ಒಂದು ವೇಳೆ ಬಿಬಿಎಂಪಿ ಎನ್​ಒಸಿ ನೀಡದಿದ್ರೆ ಕಾರು ನೋಂದಣಿ ಮಾಡಲ್ಲ. ಟೋಯಿಂಗ್​ಗೆ ಬಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪಾರ್ಕಿಂಗ್​ಗೆ ಮತ್ತೊಂದು ಅಸ್ತ್ರ ಪ್ರಯೋಗ ರೆಡಿಯಾಗ್ತಿದೆ.‌

ಒಂದು ವೇಳೆ ಈ ರೂಲ್ಸ್ ಜಾರಿಯಾದರೆ ಅದೆಷ್ಟೋ ಜನರ ಕಾರು ಖರೀದಿ ಕನಸು ಕನಸಾಗಿಯೇ ಉಳಿಯಲಿದೆ. ಅನ್ಯವಾಸಿಗಳೇ ಹೆಚ್ಚಾಗಿರುವ ಬೆಂಗಳೂರಿನಲ್ಲಿ ಕಡ್ಡಾಯ ಪಾರ್ಕಿಂಗ್ ರೂಲ್ಸ್ ಜಾರಿ ಮಾಡಿದರೆ, ಜನರು ವಿರೋಧಕ್ಕೆ ಕಾರಣವಾಗುವುದು ಸತ್ಯ‌. ಆದರೆ, ಯಾವ ರೀತಿಯಲ್ಲಿ ಸಾರಿಗೆ ಇಲಾಖೆ ಅಂತಿಮ ರಿಪೋರ್ಟ್ ತಯಾರಿ ನಡೆಸಲಿದೆ ಕಾದು ನೋಡಬೇಕಿದೆ.

ಓದಿ: ಆಸ್ಕರ್​ ಅವಾರ್ಡ್ ಪಟ್ಟಿಯಲ್ಲಿಲ್ಲ ಜೈಭೀಮ್​ ಸಿನಿಮಾ.. ಅಭಿಮಾನಿಗಳಲ್ಲಿ ಭಾರಿ ಬೇಸರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.