ETV Bharat / state

ಬೆಂಗಳೂರಿನ ಮಾಲ್​ವೊಂದರಲ್ಲಿ ಯುವತಿಗೆ ವ್ಯಕ್ತಿಯಿಂದ ಲೈಂಗಿಕ ಕಿರುಕುಳ.. ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು - ಮಾಲ್​ಯೊಂದರಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತನೆ

ಬೆಂಗಳೂರಿನ ಮಾಲ್​ವೊಂದರಲ್ಲಿ ಯುವತಿಯೊಂದಿಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

Man who misbehaved with women in the mall
ಮಾಲ್​ನಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ
author img

By ETV Bharat Karnataka Team

Published : Oct 30, 2023, 11:18 AM IST

Updated : Oct 30, 2023, 11:40 AM IST

ಬೆಂಗಳೂರು: ವ್ಯಕ್ತಿಯೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಭಾನುವಾರ ಸಂಜೆ ನಗರದ ಪ್ರತಿಷ್ಠಿತ ಮಾಲ್​ವೊಂದರಲ್ಲಿ ನಡೆದಿದೆ. ಸಂಜೆ 6.30ರ ಸುಮಾರಿಗೆ ಮಾಲ್​ನಲ್ಲಿದ್ದ ಮಹಿಳೆಯರು, ಯುವತಿಯರನ್ನು ಆಕ್ಷೇಪಾರ್ಹವಾಗಿ ಸ್ಪರ್ಶಿಸಿ ವಿಕೃತವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಯುವಕನೊಬ್ಬ ಗಮನಿಸಿ ವಿಡಿಯೋ ಮಾಡಿದ್ದಾನೆ.

ಇನ್​​ಸ್ಟಾಗ್ರಾಂ ಪೋಸ್ಟ್​​​ನಲ್ಲಿರುವುದಿಷ್ಟು: ’’ಮಾಲ್​ನಲ್ಲಿ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸುತ್ತಿದ್ದನು. ಅನುಮಾನಗೊಂಡು ಹಿಂಬಾಲಿಸಿದಾಗ ಆರೋಪಿ ನಿರಂತರವಾಗಿ ಕಿರುಕುಳ ನೀಡುತ್ತಾ ಓಡಾಡುತ್ತಿರುವುದು ಕಂಡು ಬಂದಿತು. ಆರೋಪಿಯ ಅಸಭ್ಯ ವರ್ತನೆಯನ್ನು ವಿಡಿಯೋ ಮಾಡಿಕೊಂಡ ಮಾಲ್​ನ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿಗೆ ತಿಳಿಸಿದ್ದೆ. ಭದ್ರತಾ ಸಿಬ್ಬಂದಿ ಆರೋಪಿಗಾಗಿ ಮಾಲ್​ನಲ್ಲಿ ಹುಡುಕಾಟ ನಡೆಸಿದ್ರು. ಆದ್ರೆ ಆರೋಪಿ ಅಷ್ಟರಲ್ಲೇ ಪರಾರಿಯಾಗಿದ್ದನು. ಮಾಲ್​ನ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿ ಈ ಘಟನೆ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ‘‘ ಎಂದು ಯುವಕ ತನ್ನ ಇನ್​​ಸ್ಟಾಗ್ರಾಂ​ನಲ್ಲಿ ಬರೆದುಕೊಂಡಿದ್ದಾನೆ.

ಇನ್ನು ಈ ಘಟನೆಯ ಸಂಬಂಧ ಈವರೆಗೆ ಯಾರೂ ಸಹ ಲಿಖಿತ ದೂರು ನೀಡಿಲ್ಲ. ಆದರೆ, ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಯುವಕ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ಮಾಗಡಿ ರೋಡ್ ಠಾಣಾ ಪೊಲೀಸರ ಗಮನಕ್ಕೆ ಬಂದಿದ್ದು, ಈ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳ ಮಕ್ಕಳಿಗೆ ಅಧಿಕಾರ ಕೊಟ್ಟರೆ ನಾವೇನು ಮಾಡಬೇಕು : ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನೆ

Last Updated : Oct 30, 2023, 11:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.