ETV Bharat / state

ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸ್ನೇಹಿತನಿಗೆ ಚಾಕು ಇರಿದು ಕೊಲೆ

ಫರಾನ್ ಹಾಗೂ ಯೂಸೂಫ್ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ 10 ಗಂಟೆಗೆ ಇಬ್ಬರೂ ಮಾತನಾಡುತ್ತಿದ್ದಾಗ ಯೂಸೂಫ್ ತಾಯಿಯ ಬಗ್ಗೆ ಫರಾನ್ ಕೆಟ್ಟದಾಗಿ ಬೈದಿದ್ದ ಎನ್ನಲಾಗಿದೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.

man-murdered-his-friend-for-abusing-his-mother-in-bangalore
ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸ್ನೇಹಿತನಿಗೆ ಚಾಕು ಇರಿದು ಕೊಲೆ
author img

By

Published : Apr 16, 2021, 10:46 PM IST

ಬೆಂಗಳೂರು: ತಾಯಿಯ ಕುರಿತು ಕೆಟ್ಟದಾಗಿ ಬೈದಿದಕ್ಕೆ ಆಕ್ರೋಶಗೊಂಡ ಕೋಳಿ ಅಂಗಡಿ ನೌಕರ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆಜಿಹಳ್ಳಿ ನಿವಾಸಿ ಫರಾನ್ (26) ಕೊಲೆಯಾಗಿದ್ದು, ಆರೋಪಿ ಯೂಸೂಫ್ (28) ಪರಾರಿಯಾಗಿದ್ದಾನೆ.

ನಡೆದಿದ್ದೇನು..?

ಫರಾನ್ ಹಾಗೂ ಯೂಸೂಫ್ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.ಅಂಗಡಿಯಲ್ಲಿ ಇಬ್ಬರೂ ಮಾತನಾಡುತ್ತಿದ್ದಾಗ ಯೂಸೂಫ್ ತಾಯಿಯ ಬಗ್ಗೆ ಫರಾನ್ ಕೆಟ್ಟದಾಗಿ ಬೈದಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಇದರಿಂದ ಆಕ್ರೋಶಗೊಂಡ ಯೂಸೂಫ್​ ಅಂಗಡಿಯಲ್ಲಿದ್ದ ಚೂರಿಯಿಂದ ಫರಾನ್ ಕಿವಿಯ ಹಿಂಭಾಗಕ್ಕೆ ಇರಿದಿದ್ದ. ಪರಿಣಾಮ ಗಾಯವಾಗಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ವಿಷಯ ತಿಳಿದು ಕೆಜಿಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಮೃತಪಟ್ಟ ಸುದ್ದಿ ಗೊತ್ತಾಗುತ್ತಿದ್ದಂತೆ ಯೂಸೂಫ್ ಪರಾರಿಯಾಗಿದ್ದಾನೆ.

ಆರೋಪಿಯ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಕೆಜಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಗಲು ದರೋಡೆ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಿದ ಮಾರತ್ತಹಳ್ಳಿ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.