ಬೆಂಗಳೂರು : ಉಸಿರಾಟದ ತೊಂದರೆಯಿಂದ ಬೀದಿ ಬದಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿ ಇದೀಗ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ. ಕಮಲನಗರ ಮಾರ್ಕೆಟ್ ಬೀದಿಯಲ್ಲಿ 40 ವರ್ಷದ ವ್ಯಕ್ತಿ ಉಸಿರಾಟ ಸಮಸ್ಯೆಯಿಂದ ನರಳಾಡುತ್ತಿದ್ದ.
ಆದರೆ, ಈ ವೇಳೆ ಜನರು ಕೋವಿಡ್ ಎಂಬ ಭೀತಿಯಲ್ಲಿ ಆತನ ಹತ್ತಿರವೂ ಸುಳಿಯಲು ಹಿಂದು-ಮುಂದು ನೋಡುತ್ತಿದ್ದರು. ನಂತರ ಬಿಬಿಎಂಪಿಯ ಎಂ.ಶಿವರಾಜು ಅವರಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಎಂ. ಶಿವರಾಜು, ಉಸಿರಾಟದ ತೊಂದರೆಯಿಂದ ನರುಳುತ್ತಿದ್ದ ವ್ಯಕ್ತಿಯನ್ನು ಆ್ಯಂಬುಲೆನ್ಸ್ ಮೂಲಕ ಮಲ್ಲೇಶ್ವರದ ಕೆ ಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಇದಾದ ಕೆಲವೇ ಗಂಟೆಯಲ್ಲಿ ಆತ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಉಸಿರಾಟದ ತೊಂದರೆಯಿಂದ ಬಿದ್ದು ನರಳಾಡಿದ ವ್ಯಕ್ತಿ... ಜನ ಮಾಡಿದ್ದೇನು ನೋಡಿ!