ETV Bharat / state

CCTV Video: ಸಾಲಿನಲ್ಲಿ ಬನ್ನಿ ಎಂದಿದ್ದಕ್ಕೆ ಮಹಿಳೆಗೆ ಮನಬಂದಂತೆ ಥಳಿಸಿದ ವ್ಯಕ್ತಿ - ನಾಮಧಾರಿ ಸೂಪರ್ ಮಾರ್ಕೆಟ್

ಸೂಪರ್ ಮಾರ್ಕೆಟ್​​ನಲ್ಲಿ ದಿನಸಿ ಖರೀದಿಗೆ ಆಗಮಿಸಿದ್ದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದು, ಆರೋಪಿ ಕಿಶೋರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

man-attacks-women-in-super-market-at-bangalore
ಸಾಲಿನಲ್ಲಿ ಬನ್ನಿ ಎಂದಿದಕ್ಕೆ ಮಹಿಳೆಗೆ ಮನಬಂದಂತೆ ಥಳಿಸಿದ ವ್ಯಕ್ತಿ
author img

By

Published : Sep 8, 2021, 11:51 AM IST

Updated : Sep 8, 2021, 12:48 PM IST

ಬೆಂಗಳೂರು: ದಿನಸಿ ಪದಾರ್ಥ ಕೊಂಡುಕೊಳ್ಳಲು ವ್ಯಕ್ತಿಯನ್ನು ಸರತಿ ಸಾಲಿನಲ್ಲಿ ಬರುವಂತೆ ಹೇಳಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಮಹಿಳೆಗೆ ಮನಬಂದಂತೆ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೈಕೋ ಲೇಔಟ್ ಠಾಣಾ ವ್ಯಾಪ್ತಿಯ 8ನೇ ಕ್ರಾಸ್​​ನಲ್ಲಿರುವ ನಾಮಧಾರಿ ಸೂಪರ್ ಮಾರ್ಕೆಟ್​​​ನಲ್ಲಿ ಕಳೆದ ಭಾನುವಾರ ಹಲ್ಲೆ ಘಟನೆ ನಡೆದಿದೆ‌‌. ಮಹಿಳೆ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕಿಶೋರ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸಾಲಿನಲ್ಲಿ ಬನ್ನಿ ಎಂದಿದ್ದಕ್ಕೆ ಮಹಿಳೆಗೆ ಮನಬಂದಂತೆ ಥಳಿಸಿದ ವ್ಯಕ್ತಿ

ದಿನಸಿ ಖರೀದಿಗಾಗಿ ಮಹಿಳೆ ಸೂಪರ್ ಮಾರ್ಕೆಟ್​ಗೆ ಹೋಗಿದ್ದಾರೆ. ಕೊರೊನಾ ಹಿನ್ನೆಲೆ ಸ್ಟೋರ್​​ ಒಳಗೆ ಎಲ್ಲ ಗ್ರಾಹಕರನ್ನು ಬಿಟ್ಟಿರಲಿಲ್ಲ.‌ ಹಂತ - ಹಂತವಾಗಿ ದಿನಸಿ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು.‌ ಸರತಿ ಸಾಲಿನಲ್ಲಿ ನಿಲ್ಲದೇ ವ್ಯಕ್ತಿಯೋರ್ವ ಮುಂದೆ ಬಂದಿದ್ದಾನೆ. ಇದನ್ನು ಪ್ರಶ್ನಿಸಿದ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ.

ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನ ಬಂಧಿಸಿದ್ದಾರೆ. ವ್ಯಕ್ತಿ ಹಲ್ಲೆ ಮಾಡಿರುವ ದೃಶ್ಯ ಸೂಪರ್​​​ಮಾರ್ಕೆಟ್​ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಲಾಂಗು - ಮಚ್ಚು ತೋರಿಸಿ ದರೋಡೆ ಯತ್ನ ಆರೋಪ.. ಮೂವರು ಯುವಕರ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

Last Updated : Sep 8, 2021, 12:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.