ಬೆಂಗಳೂರು : ಬೀದಿ ನಾಯಿಯನ್ನು ಕೂಡಿ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ವಿದ್ಯಾರಣ್ಯಪುರದ ರಾಮಚಂದ್ರಪುರ ಬಳಿ ನಡೆದಿದೆ.
ನೀಲಂ ಎಂಬಾಕೆ ಪ್ರತಿನಿತ್ಯ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದರು. ಆದರೆ, ಇಂದು ಊಟ ಹಾಕುತ್ತಿದ್ದ ನಾಯಿಯನ್ನು ಸುಧಾಕರನ್ ಎಂಬಾತ ತನ್ನ ಮನೆಯ ಟೆರೆಸ್ ಮೇಲೆ ಕಟ್ಟಿ ಹಾಕಿದ್ದ. ಇದನ್ನು ಗಮನಿಸಿದ ಮಹಿಳೆ, ನಾಯಿಯನ್ನು ಯಾಕೆ ಟೆರೆಸ್ ಮೇಲೆ ಕಟ್ಟಿ ಹಾಕಿದ್ದೀಯ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ, ಇದು ನನ್ನ ಮನೆ, ನನ್ನ ನಾಯಿ, ನನ್ನಿಷ್ಟ ಎಂದು ಸುಧಾಕರ್ ಮಹಿಳೆಗೆ ದಬಾಯಿಸಿದ್ದಾನೆ. ಅಲ್ಲದೆ, ಟೆರೆಸ್ ಮೇಲೆ ಬಂದ್ರೆ ಕೊಂದು ಬಿಡ್ತೀನಿ ಎಂದು ಆವಾಜ್ ಹಾಕಿದ್ದಾನೆ. ಈ ವೇಳೆ ಹಠ ಬಿಡದ ಮಹಿಳೆ, ನಾಯಿಯನ್ನು ಬಿಡಿಸಿಕೊಂಡು ಬರಲು ಟೆರೆಸ್ ಮೇಲೆ ತೆರಳಿದ್ದರು. ಆಗ ಸುಧಾಕರ್ ಆಕೆಯ ಮೇಲೆ ಪೈಪ್ನಿಂದ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಸದ್ಯ ನಾಯಿ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವಿದ್ಯಾರಣ್ಯಪುರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.