ಬೆಂಗಳೂರು : ಕಳೆದ ಸಾರಿಯ ನನ್ನ ಸೋಲಿಗೆ ಹಲವು ಕಾರಣಗಳಿವೆ. ಅದನ್ನು ಹೇಳಲು ಸಾಧ್ಯವಿಲ್ಲ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ ಕೆಪಿಸಿಸಿ ಕಾರ್ಯಕರ್ತರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು 11 ಬಾರಿ ಚುನಾವಣೆಯಲ್ಲಿ ಗೆದ್ದಿದ್ದೆ. ಕಳೆದ ಬಾರಿ ನಾನು ಸೋಲಬೇಕಾಯ್ತು.
ಆ ಸೋಲಿಗೆ ಹಲವು ಕಾರಣಗಳಿವೆ. ಆ ಕಾರಣಗಳನ್ನ ಇಲ್ಲಿ ಹೇಳೋಕೂ ಆಗಲ್ಲ. ನೀವು ಕೇಳೋಕೂ ಸಮಯಾವಕಾಶವಿಲ್ಲ. 1969ರಲ್ಲಿ ಇಂದಿರಾಗಾಂಧಿ ನಮ್ಮ ಊರಿಗೆ ಬಂದಿದ್ದರು. ಆಗ ನಮ್ಮಂತ ಯುವಕರನ್ನ ಗುರುತಿಸಿದ್ದರು.
ನಾವೆಲ್ಲರೂ ಆಗ 28 ರಿಂದ 35ರ ಆಸುಪಾಸಿನಲ್ಲಿದ್ದೆವು. ನಮ್ಮನ್ನು ಗುರ್ತಿಸಿ ಟಿಕೆಟ್ ಕೊಡದಿದ್ದರೆ ನಾನು ಗೆಲ್ಲಲು ಆಗ್ತಿರಲಿಲ್ಲ. ನಿಷ್ಠೆಯಿಂದ ಕೆಲಸ ಮಾಡಿದರೆ ಒಂದಲ್ಲ ಒಂದು ದಿನ ಪಕ್ಷ ಗುರುತಿಸುತ್ತೆ. ನಾನು ಮೇಲ್ಮನೆ ನಾಯಕನಾಗೋದು ಗೊತ್ತಿರಲಿಲ್ಲ.
ಏಳೆಂಟು ತಿಂಗಳ ಹಿಂದೆ ಸುಳಿವು ಕೊಟ್ಟಿದ್ದರು. ಕೊಟ್ಟ ಮಾತನ್ನ ನಾಯಕರು ಉಳಿಸಿಕೊಳ್ತಾರೆ. ಸೋನಿಯಾ,ರಾಹುಲ್ ಕೊಡುಗೆ ನಾನು ಮರೆಯಲ್ಲ ಎಂದರು. ರೈತ ವಿರೋಧಿ ಕಾಯ್ದೆಗಳನ್ನ ಜಾರಿಗೆ ತಂದಿದ್ದಾರೆ.
ಮೂರು ತಿಂಗಳಿಂದ ಹೋರಾಟ ನಡೆದಿದೆ. ರೈತರ ಕಣ್ಣೀರು ಒರೆಸುವ ಕೆಲಸ ಮೋದಿ ಮಾಡ್ತಿಲ್ಲ. ಈಗ ಖಲಿಸ್ತಾನ್ನವರು ಸೇರಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಕೇಂದ್ರವನ್ನು ಕುಟುಕಿದ್ದಾರೆ.