ETV Bharat / state

ಮಲ್ಲತ್ತಹಳ್ಳಿ ಕೆರೆ ನಿರ್ವಹಣೆಗೆ ಅಧಿಕಾರಿಗಳ ನಿರ್ಲಕ್ಷ್ಯ: ಬಿಬಿಎಂಪಿ, ಪಿಸಿಬಿ ವಿರುದ್ಧ ದೂರು

ಮಲ್ಲತ್ತಹಳ್ಳಿ ಕೆರೆ ಕಲುಷಿತವಾದ ಕಾರಣ ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದಾರೆ.

Mallathahalli lake contaminated, Mallathahalli lake contaminated news, Mallathahalli lake contaminated issue, ಮಲ್ಲತ್ತಹಳ್ಳಿ ಕೆರೆ ಕಲುಷಿತ, ಮಲ್ಲತ್ತಹಳ್ಳಿ ಕೆರೆ ಕಲುಷಿತ ಸುದ್ದಿ, ಮಲ್ಲತ್ತಹಳ್ಳಿ ಕೆರೆ ಕಲುಷಿತ ವಿವಾದ,
ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ವಿರುದ್ಧ ದೂರು
author img

By

Published : Mar 13, 2020, 5:37 PM IST

ಬೆಂಗಳೂರು: ಮಲ್ಲತ್ತಹಳ್ಳಿ ಕೆರೆ ನಗರದ ಬೃಹತ್ ಗಾತ್ರದ ಕೆರೆ. ಈ ಕೆರೆ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ರೂ, ಜನರ ತೆರಿಗೆ ಹಣ ನೀರಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ ಅನ್ನೋದು ಸಾರ್ವಜನಿಕರ ಆರೋಪ.

ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ವಿರುದ್ಧ ದೂರು

ಮಲ್ಲತ್ತಹಳ್ಳಿ ಕೆರೆ ತುಂಬ ನಗರದ ಒಳಚರಂಡಿಯ ಕೊಳಚೆ ನೀರು ಸೇರಿಕೊಂಡಿದೆ. ಈ ಕೆರೆಯ ನಿರ್ವಹಣೆ ಬಿಡಿಎಯಿಂದ, ಬಿಬಿಎಂಪಿಗೆ ಹಸ್ತಾಂತರವಾದ ಮೇಲೂ ಕೆರೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಕಾಣದೆ ಸೊರಗುತ್ತಿದೆ.

ಸುಮಾರು 22 ಎಕರೆ ವಿಸ್ತೀರ್ಣದ ಬೃಹತ್ ಕೆರೆ ಇದಾಗಿದ್ದು, ಈಗಾಗಲೇ ಬಿಡಿಎ 25 ಕೋಟಿ ರುಪಾಯಿ ವೆಚ್ಚ ಮಾಡಿ ಕೆರೆ ಅಭಿವೃದ್ಧಿ ಮಾಡಿದೆ. ಆದ್ರೆ ಕೆರೆಯ ಸದ್ಯದ ದುಸ್ಥಿತಿ ನೋಡಿದ್ರೆ, ಅಭಿವೃದ್ಧಿಗೆ ನೀಡಿದ ಹಣ ದುರುಪಯೋಗ ಆಗಿರುವುದು ಖಚಿತವಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಆರೋಪಿಸಿದ್ದಾರೆ.

ಲೋಕಾಯುಕ್ತ ಕಾಯ್ದೆ ಅಡಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ:

ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆರೆ ದುಸ್ಥಿತಿಗೆ ತಲುಪಿದೆ. ಇದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯ ಬೇಜವಾಬ್ದಾರಿಯೂ ಕಾರಣ. ಹೀಗಾಗಿ ಲೋಕಾಯುಕ್ತ ಕಾಯಿದೆಯಡಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ದೂರು ಸಲ್ಲಿಸಲಾಗಿದೆ ಎಂದರು.

ಇನ್ನು, ಕೆರೆ ಸುತ್ತಲು ವಾಸಿಸುವ ಜನರಿಗೆ ಸೊಳ್ಳೆ, ಹಾವಿನ ಕಾಟವೂ ಹೆಚ್ಚಾಗಿದೆ. ವಾಯುವಿಹಾರಕ್ಕೂ ಕೆರೆಯ ಸುತ್ತಲ ಪರಿಸರ ಯೋಗ್ಯವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.