ETV Bharat / state

ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಮಹೇಶ್ ಕುಮಠಳ್ಳಿ ಅಧಿಕಾರ ಸ್ವೀಕಾರ - ಮಹೇಶ್ ಕುಮಠಳ್ಳಿ

ಶೇಷಾದ್ರಿಪುರಂನಲ್ಲಿರುವ ಮಂಡಳಿ ಕಚೇರಿಯಲ್ಲಿ ಸರಳವಾಗಿ ಪೂಜೆ ನೆರವೇರಿಸಿದ ಮಹೇಶ್ ಕುಮಠಳ್ಳಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

mahesh kumathalli
mahesh kumathalli
author img

By

Published : Jun 3, 2020, 12:53 PM IST

ಬೆಂಗಳೂರು: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕ ಮಹೇಶ್ ಕುಮಠಳ್ಳಿ ಇಂದು ಅಧಿಕಾರ ಸ್ವೀಕರಿಸಿದರು.

ಶೇಷಾದ್ರಿಪುರಂನಲ್ಲಿರುವ ಮಂಡಳಿ ಕಚೇರಿಯಲ್ಲಿ ಲಾಕ್​​​​​​ಡೌನ್ ಹಿನ್ನಲೆಯಲ್ಲಿ ಸರಳವಾಗಿ ಪೂಜೆ ನೆರವೇರಿಸಿದ ಮಹೇಶ್ ಕುಮಠಳ್ಳಿ ಅಧಿಕಾರ ಸ್ವೀಕಾರ ಮಾಡಿದರು. ಸ್ನೇಹಿತನ ಪದಗ್ರಹಣ ಸಮಾರಂಭದ ವೇಳೆ ಹಾಜರಿದ್ದ ಸಚಿವ ರಮೇಶ್ ಜಾರಕಿಹೊಳಿ ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿ ಶುಭ ಕೋರಿದರು.

ಮಹೇಶ್ ಕುಮಠಳ್ಳಿ ಅಧಿಕಾರ ಸ್ವೀಕಾರ

ಇಂದಿನಿಂದಲೇ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಕೆಲಸ ಕಾರ್ಯ ಆರಂಭಿಸಿರುವ ಕುಮಠಳ್ಳಿ ಕೋವಿಡ್ -19 ಮುಂಜಾಗ್ರತಾ ಕ್ರಮದಲ್ಲಿ ಸರ್ಕಾರಕ್ಕೆ ಅಗತ್ಯ ಸಹಕಾರ ನೀಡಿ ಆರೋಗ್ಯ ಇಲಾಖೆಗೆ ಸಾತ್ ನೀಡುವುದಾಗಿ ತಿಳಿಸಿದ್ದಾರೆ.

mahesh kumathalli
ಸರಳವಾಗಿ ಪೂಜೆ

ಕೊಳಗೇರಿ ಪ್ರದೇಶಗಳ ಅಭಿವೃದ್ಧಿ ಜೊತೆಗೆ ಕೊರೊನಾ ಹಿನ್ನೆಲೆಯಲ್ಲಿ ಕೊಳಗೇರಿ ನಿವಾಸಿಗಳ ಆರೋಗ್ಯ ವಿಚಾರದತ್ತ ಹೆಚ್ಚಿನ ಗಮನ ಹರಿಸುವುದಾಗಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.