ETV Bharat / state

ಗಡಿಯಲ್ಲಿ ಮರಾಠಿ ಶಾಲೆ ಆರಂಭಿಸುವ ಮಹಾ ಸಂಚು ವಿಫಲ: ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್

ಕರ್ನಾಟಕ 6 ರಾಜ್ಯಗಳ ಜೊತೆ ಗಡಿ ಹೊಂದಿಕೊಂಡಿದ್ದು, 19 ಜಿಲ್ಲೆಗಳು, 63 ತಾಲೂಕುಗಳು, 980 ಕ್ಕೂ ಹೆಚ್ಚು ಹಳ್ಳಿಗಳು ಗಡಿ ಭಾಗದಲ್ಲಿವೆ. ಇಲ್ಲಿನ ಕನ್ನಡಿಗರಿಗೆ ಭದ್ರತೆ ಒದಗಿಸುವುದೇ ಪ್ರಾಧಿಕಾರದ ಆಶಯ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ತಿಳಿಸಿದ್ದಾರೆ.

author img

By

Published : Dec 2, 2022, 2:44 PM IST

Etv Bharatmaharashtra-govt-plan-to-start-a-marathi-school-on-karnataka-border
ಡಾ.ಸಿ. ಸೋಮಶೇಖರ್

ಬೆಂಗಳೂರು: ಮಹಾರಾಷ್ಟ್ರದ ಗಡಿ ಭಾಗದಲ್ಲಿ ಮರಾಠಿ ಶಾಲೆಗಳಿಗೆ ಕನ್ನಡಿಗ ಮಕ್ಕಳನ್ನು ಹೆಚ್ಚು ಸೇರಿಸಲು ಕುಮ್ಮಕ್ಕು ಕೊಡುವ ಸಂಚನ್ನು ನಾವು ವಿಫಲಗೊಳಿಸಿದ್ದೇವೆ. ಗಡಿ ವಿವಾದದ ಕಾನೂನು ಹೋರಾಟದಲ್ಲಿಯೂ ರಾಜ್ಯಕ್ಕೆ ಜಯ ಸಿಗಲಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಹೇಳಿದ್ದಾರೆ.

ಕೆಂಪೇಗೌಡ ರಸ್ತೆಯಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಾಧಿಕಾರದಲ್ಲಿ ಅಧ್ಯಕ್ಷರಾಗಿ ತಮ್ಮ ಎರಡು ವರ್ಷದ ಅವದಿಯಲ್ಲಿ ಮಾಡಿರುವ ಸಾಧನೆಯ ಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು. ನಂತರ ಪ್ರಾಧಿಕಾರದಲ್ಲಿ ತಮ್ಮ ಅವದಿಯಲ್ಲಿನ ಸಾಧನೆಗಳ ಕುರಿತು ಮಾಹಿತಿ ನೀಡಿದ ಅವರು, 2010 ರಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂತು. 6 ರಾಜ್ಯಗಳ ಜತೆ ನಾವು ಗಡಿ ಹೊಂದಿಕೊಂಡಿದ್ದೇವೆ. 19 ಜಿಲ್ಲೆಗಳು, 63 ತಾಲೂಕುಗಳು, 980 ಕ್ಕೂ ಹೆಚ್ಚು ಹಳ್ಳಿಗಳು ಗಡಿ ಭಾಗದಲ್ಲಿವೆ ಎಂದರು.

ಕನ್ನಡದ ಭದ್ರತೆ ಒದಗಿಸುವುದು ಪ್ರಾಧಿಕಾರದ ಆಶಯ. ಜಿಲ್ಲಾಧಿಕಾರಿಗಳೇ ಇದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅನುದಾನ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ ಅನ್ನೋದನ್ನು ಪರಿಶೀಲನೆ ಮಾಡಲು ಒಂದು ಸಮಿತಿ ರಚನೆ ಮಾಡಿದ್ದೇವೆ. ಜಿಲ್ಲಾಧಿಕಾರಿ ತಿಂಗಳಿಗೆ ಒಂದು ದಿನವಾದರೂ ಗಡಿ ಭಾಗದ ಜಿಲ್ಲೆಗಳಿಗೆ ಹೋಗಬೇಕು ಎಂದು ಸೂಚನೆ ಕೊಟ್ಟಿದ್ದೇನೆ. ಗ್ರಾಮ ವಾಸ್ತವ್ಯದ ಮೂಲಕ ಗಡಿ ಪ್ರದೇಶದ ಜನತೆಯ ಸ್ಥಿತಿಗತಿಯನ್ನು ತಿಳಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಗಡಿಯಲ್ಲಿ ಮರಾಠಿ ಶಾಲೆ ಆರಂಭಿಸುವ ಮಹಾ ಸಂಚು ವಿಫಲ

ಕನ್ನಡ ಹೆಸರು ಬದಲಾವಣೆ ಕೈಬಿಟ್ಟ ಕೇರಳ: ನೆರೆ ರಾಜ್ಯವಾದ ಕೇರಳದ ಗಡಿಯಲ್ಲಿ ಇರುವ ಹಳ್ಳಿಗಳ ಹೆಸರು ಬದಲಾವಣೆ ಮಾಡುವ ಕೆಲಸ ಮಾಡುತ್ತಿದ್ದರು. ಹೀಗಾಗಿ ಅಲ್ಲಿ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಕನ್ನಡದ ಹೆಸರುಗಳ ಬದಲಾವಣೆ ಮಾಡದಂತೆ ಸೂಚಿಸಿದ್ದೇವೆ. ನಮ್ಮ ಸೂಚನೆಗೆ ಅವರು ಮನ್ನಣೆ ನೀಡಿದ್ದು ಹೆಸರು ಬದಲಾವಣೆ ನಿರ್ಧಾರ ಕೈಬಿಟ್ಟಿದ್ದಾರೆ ಎಂದರು.

ಗಡಿ ಜನರ ಸ್ಥಿತಿಗತಿ ಕುರಿತು ವರದಿ: ಗಡಿ ಭಾಗದ ಜನರ ಆರ್ಥಿಕ, ಸಾಮಾಜಿಕ, ಶಿಕ್ಷಣ ಬಗ್ಗೆ ಯಾವುದೇ ರೀತಿಯ ಅಧ್ಯಯನ ನಡೆದ ಬಗ್ಗೆ ಮಾಹಿತಿ ಇಲ್ಲ ಹಾಗಾಗಿ ರಾಜ್ಯದ 8 ವಿಶ್ವವಿದ್ಯಾಲಯಗಳನ್ನು ಸಂಪರ್ಕ ಮಾಡಿದ್ದೇವೆ. ಗಡಿ ಭಾಗದ ಜನತೆಯ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವಿಷಯದ ಕುರಿತು ಅಧ್ಯಯನ ನಡೆಸಿ ವರದಿ ಕೊಡುವಂತೆ ಮನವಿ ಮಾಡಿದ್ದೇವೆ. ಇನ್ನು ಆರು ತಿಂಗಳಿನಲ್ಲಿ ವರದಿ ನಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೊಡಲಿದ್ದಾರೆ. ನಂತರ ನಾವು ಅದನ್ನು ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದ್ದೇವೆ.

ಕಾಸರಗೋಡು, ಗೋವಾ, ಅಕ್ಕಲಕೋಟೆಯಲ್ಲಿ ಕನ್ನಡ ಭವನ: ಕಾಸರಗೋಡು, ಗೋವಾ ಮತ್ತು ಅಕ್ಕಲಕೋಟೆಯಲ್ಲಿ ಕನ್ನಡ ಭವನ ನಿರ್ಮಾಣದ ಚಿಂತನೆ ಇದೆ. ಈಗಾಗಲೇ ಮುಖ್ಯಮಂತ್ರಿಗಳು 5 ಕೋಟಿ ಅನುದಾನವನ್ನು ಬಜೆಟ್​ನಲ್ಲಿ ಮೀಸಲಿರಿಸಿದ್ದಾರೆ. ಕಾಸರಗೋಡಿನಲ್ಲಿ ಕಯ್ಯಾರ ಕಿಞ್ಞಣ್ಣ ರೈ ಕುಟುಂಬಸ್ಥರು ಕನ್ನಡ ಭವನ ನಿರ್ಮಾಣಕ್ಕೆ ಉಚಿತವಾಗಿ ಜಮೀನು ನೀಡುವುದಾಗಿ ಪ್ರಕಟಿಸಿದ್ದಾರೆ.

ಅಕ್ಕಲಕೋಟೆಯಲ್ಲಿ ಕನ್ನಡ ಸಂಘದವರು ಜಾಗ ನೀಡಲು ಮುಂದೆ ಬಂದಿದ್ದಾರೆ ಹಾಗಾಗಿ ಈ ಎರಡು ಕಡೆ ನಮಗೆ ಕನ್ನಡ ಭವನ ನಿರ್ಮಾಣಕ್ಕೆ ಸಮಸ್ಯೆ ಇಲ್ಲ ಆದರೆ ಗೋವಾದಲ್ಲಿ ಮಾತ್ರ ಜಾಗ ಸಿಕ್ಕಿಲ್ಲ. ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಚರ್ಚೆಯೂ ನಡೆಸಿದ್ದೇವೆ. ಅವರು ಸ್ಥಳದ ಕೊರತೆ ಇದೆ ನೀವೇ ಜಾಗ ಖರೀದಿ ಮಾಡಿ ಎನ್ನುತ್ತಿದ್ದಾರೆ ಮತ್ತೊಮ್ಮೆ ಅಲ್ಲಿನ ಸಿಎಂ ಜೊತೆ ಮಾತುಕತೆ ನಡೆಸಲಾಗುತ್ತದೆ. ನಮ್ಮ ರಾಜ್ಯದಲ್ಲಿ ಕೊಂಕಣಿ ಭವನಕ್ಕೆ ಜಾಗ ಕೊಟ್ಟಿದ್ದೇವೆ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಮನವರಿಕೆ ಮಾಡಿಕೊಡಲಿದ್ದೇವೆ ಎಂದರು.

ಗಡಿಯಲ್ಲಿ ಪ್ರೌಢಶಾಲೆವರೆಗೂ ವ್ಯಾಸಂಗಕ್ಕೆ ಉತ್ತೇಜನ: ಹಲವು ಗಡಿ ಗ್ರಾಮಗಳಲ್ಲಿ ಕೇವಲ ಪ್ರಾಥಮಿಕ ಶಾಲೆಗಳು ಮಾತ್ರ ಇವೆ. ಪ್ರೌಢ ಶಾಲೆಗಳಿಗೆ ತುಂಬಾ ದೂರ ನಡೆದು ಹೋಗಬೇಕಿದೆ ಹಾಗಾಗಿ ಸಾಕಷ್ಟು ಕಡೆ ಪ್ರೌಢಶಾಲೆಗಳಿಗೆ ಮಕ್ಕಳು ಸೇರುತ್ತಿಲ್ಲ. ಹಾಗಾಗಿ ಒಂದೇ ಶಾಲೆಯಲ್ಲಿ ಪ್ರೌಢಶಾಲೆ ಮುಗಿಸುವ ಮಕ್ಕಳಿಗೆ ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ. ಹೀಗಾಗಿ ಪ್ರತಿ ಮಗುವಿಗೆ ತಲಾ 5 ಸಾವಿರ ಠೇವಣಿ ಇಡಲು ನಿರ್ಧಾರ ಕೈಗೊಂಡು ಈ ಬಗ್ಗೆ ಸರ್ಕಾರಕ್ಕೆ 2.50 ಕೋಟಿಯ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದಿದ್ದಾರೆ.

ಗಡಿ ವಿವಾದಲ್ಲಿ ನಮಗೆ ಜಯ: ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಸಭೆ ಕರೆದು ಚರ್ಚೆ ಮಾಡಿದ್ದಾರೆ. ನಾನು, ಆಯೋಗದ ಅಧ್ಯಕ್ಷರಾದ ನ್ಯಾ. ಶಿವರಾಜ್ ಪಾಟೀಲ್, ಅಡ್ವೊಕೇಟ್​​ ಜನರಲ್ ಕೂಡ ಸಭೆಯಲ್ಲಿ ಭಾಗಿಯಾಗಿದ್ದೆವು. ಸಭೆಯಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡುವ ಬಗ್ಗೆ ಚರ್ಚೆ ಆಗಿದೆ. ಅದರ ತೀವ್ರತೆ ಕೂಡ ಸರ್ಕಾರದ ಗಮನಕ್ಕೆ ಬಂದಿದೆ. ಮಹಾರಾಷ್ಟ್ರದವರು ಹೇಳಲಿಕ್ಕಾಗದ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದಾರೆ. ಹಾಗಾಗಿ ನಮಗೆ ಗೆಲುವು ಖಚಿತ, ಖಂಡಿತ ಈ ಹೋರಾಟದಲ್ಲಿ ನಮ್ಮ ಸರ್ಕಾರದ ಪರವಾಗಿ ಜಯ ಸಿಕ್ಕೆ ಸಿಗುತ್ತದೆ ಎಂದರು.

ಮಹಾ ಸಂಚು ವಿಫಲ: ಮಹಾರಾಷ್ಟ್ರದ ಗಡಿ ಭಾಗದಲ್ಲಿ ಮರಾಠಿ ಶಾಲೆಗಳಿಗೆ ಕನ್ನಡಿಗ ಮಕ್ಕಳನ್ನು ಹೆಚ್ಚು ಸೇರಿಸಲು ಕುಮ್ಮಕ್ಕು ಕೊಡುವ ಸಂಚು ಇತ್ತು. ಎಂಇಎಸ್ ಸಂಘಟನೆಗಳು, ಮಹಾರಾಷ್ಟ್ರದ ನಿಯೋಗಗಳು ಬಂದು ಸಂಚು ಮಾಡಿದ್ದವು. ಮಹಾರಾಷ್ಟ್ರ ಗಡಿಭಾಗದಲ್ಲಿ ಮರಾಠಿ ಶಾಲೆ ಆರಂಭಿಸಿದರೆ ಹೆಚ್ಚಿನ ಅನುದಾನ ಕೊಡಲಿದ್ದೇವೆ. ಹೆಚ್ಚಿನ ಸವಲತ್ತು ಕೊಡಲಿದ್ದೇವೆ ಎನ್ನುವ ಪ್ರಕ್ರಿಯೆ ಆರಂಭಗೊಂಡಿತ್ತು. ಅದನ್ನು ಕಟುವಾಗಿ ವಿರೋಧಿಸಿದ್ದರಿಂದ ತಪ್ಪಿತು.

ಇಲ್ಲದಿದ್ದಲ್ಲಿ ಕರ್ನಾಟಕ ಸರ್ಕಾರದ ವ್ಯಾಪ್ತಿಯಲ್ಲಿ ಮಹಾರಾಷ್ಟ್ರ ಸರ್ಕಾರ ಬಂದು ಮರಾಠಿ ಶಾಲೆ ತೆರೆದು ಹೆಚ್ಚಿನ ಅನುದಾನ ಕೊಟ್ಟು, ವಸತಿ ವ್ಯವಸ್ಥೆ ಕಲ್ಪಿಸಿ, ವಿದ್ಯಾರ್ಥಿ ವೇತನ ನೀಡುವ ಸಂಚು ಮಾಡಿತ್ತು. ಅಲ್ಲಿನ ಕ್ರಿಯಾ ಸಂಘಟನೆಗಳ ಜೊತೆ ತಡೆದಿದ್ದೇವೆ. ನಮ್ಮ ಪ್ರತಿಭಟನೆ ನಂತರ ಅದು ಸ್ಥಗಿತಗೊಂಡಿದೆ. ಅವರು ಸರ್ಕಾರದ ಗಮನಕ್ಕೆ ತಾರದೆ ಇದನ್ನೆಲ್ಲಾ ಮಾಡಿದ್ದರು. ಐದಾರು ತಿಂಗಳ ಹಿಂದೆ ಬೆಳಗಾವಿಗೆ ಬಂದು ಸರ್ವೆ ನಡೆಸಿದ್ದರು. ಸುದ್ದಿ ತಿಳಿದ ತಕ್ಷಣ ನಾವು ಕಾರ್ಯಪ್ರವೃತ್ತರಾಗಿ ಅದನ್ನು ಸ್ಥಗಿತಗೊಳಿಸಿದ್ದೇವೆ.

ನಮ್ಮಲ್ಲಿ‌ ಮರಾಠಿ ಶಾಲೆಗಳನ್ನು ತೆರೆಯಲು ಸಂಚು ಮಾಡಿದ್ದರು ಆದರೆ ಈ ಸಂಚನ್ನು‌ ನಮ್ಮ ಪ್ರಾಧಿಕಾರದಿಂದ‌ ತಡೆದಿದ್ದೇವೆ, ನಮ್ಮ ಮಧ್ಯಪ್ರವೇಶದ ನಂತರ ಮರಾಠಿ ಶಾಲೆ ತೆರೆಯುವ ಸರ್ವೆ ಕಾರ್ಯ ನಿಲ್ಲಿಸಲಾಗಿದೆ ಆದರೂ ನಾವು ಖಾಸಗಿ ಏಜೆನ್ಸಿ ಮೂಲಕ ಸರ್ವೆ ನಡೆಸಿ ಮರಾಠಿ ಶಾಲೆ ತೆರೆಯುವ ಸರ್ವೆ ಕಾರ್ಯದ ಕುರಿತು ಮಾಹಿತಿ ಪಡೆಯಲಾಗಿದೆ ಅವರು ಸರ್ವೆ ಮಾಡುತ್ತಿಲ್ಲ ಎಲ್ಲವನ್ನೂ ನಿಲ್ಲಿಸಿದ್ದಾರೆ ಎಂದು ನಮಗೆ ವರದಿ ಬಂದಿದೆ ಆದರೂ ನಾವು ಈ ವಿಚಾರದ ಮೇಲೆ ಕಣ್ಣಿಟ್ಟಿದ್ದೇವೆ ಎಂದರು.

ಕೊಂಕಣಿ ಫಲಕಕ್ಕೆ ಗೇಟ್ ಪಾಸ್: ಕಾರವಾರದಲ್ಲಿ ಪಾಲಿಕೆಯವರೇ ಕೊಂಕಣಿಯಲ್ಲಿ ನಾಮಫಲಕ ಹಾಕಲು ತೀರ್ಮಾನ ಮಾಡಿದ್ದರು. ಆದರೆ ನಾನು ಮುನ್ಸಿಪಾಲಿಟಿ ಜೊತೆಗೆ ಮಾತನಾಡಿ ಕೊಂಕಣಿ ನಾಮಫಲಕ ತೆಗೆಸಿದ್ದೇನೆ. ಕಾರವಾರ ಕರ್ನಾಟಕದ ಭಾಗ. ಹೀಗಾಗಿ ನಾನು ಹೇಳಿದ ತಕ್ಷಣವೇ ಕೊಂಕಣಿ ನಾಮ ಫಲಕ ತೆರವುಗೊಳಿಸಿದರು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಇದರಲ್ಲಿ ರಾಜಿಯೇ ಇಲ್ಲ ಎಂದರು.

ಭಾಷೆ, ಶಿಕ್ಷಣ, ಸಂಸ್ಕೃತಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೆ ನಾವು ಮುಂದೆ ಬರುತ್ತೇವೆ. ಗಡಿ ಭಾಗದಲ್ಲಿ ವಸತಿ ಶಾಲೆ ನಿರ್ಮಾಣ ಮಾಡಬೇಕು ಎಂಬ ಚಿಂತನೆ ಇದೆ ಇದರಿಂದ ಮಕ್ಕಳಿಗೆ ಅನುಕೂಲ ಆಗಲಿದೆ. 351 ಸಂಸ್ಥೆಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ಅನುದಾನ ನೀಡಲಾಗಿದೆ. ಸುಮಾರು 400 ಕೋಟಿ ಅನುದಾನ ನೀಡಲಾಗಿದೆ. ರಾಷ್ಟ್ರ ಭಕ್ತಿ, ನಾಡ ಪ್ರೀತಿ ಹೆಸರಿನಲ್ಲಿ ಕವಿಗೋಷ್ಠಿ ನಡೆಯಲಿದೆ‌ ಎಂದು ತಿಳಿಸಿದರು.

ಇದನ್ನೂ ಓದಿ: ಬೆಳಗಾವಿ ಕೋರ್ಟ್‌ಗೆ ಸಂಜಯ್ ರಾವತ್ ಗೈರು: ಫೆ.7ಕ್ಕೆ ವಿಚಾರಣೆ ಮುಂದೂಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.